ಕನ್ನಡದ ಹಿರಿಯ ನಟ ಅನಂತನಾಗ್ ಅವರಿಗೆ ಇಂದು (ಸೆಪ್ಟೆಂಬರ್ 4) ಜನ್ಮದಿನದ ಸಂಭ್ರಮ. ಈ ವಿಶೇಷ ದಿನದಂದು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭಾಶಯ ಕೋರುತ್ತಿದ್ದಾರೆ. 74ನೇ ವಸಂತಕ್ಕೆ ಕಾಲಿಟ್ಟರೂ ಅವರು ಆ್ಯಕ್ಟೀವ್ ಆಗಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಹುಟ್ಟುಹಬ್ಬದ ದಿನ ಅನಂತ್ ನಾಗ್ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ.
ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ಮಾಡಿ ಕೃಷ್ಣ ದೇವರ ದರ್ಶನ ಕೈಗೊಂಡಿದ್ದಾರೆ ಅನಂತನಾಗ್. ಅವರ ಪತ್ನಿ ಗಾಯತ್ರಿ ಕೂಡ ಇದ್ದರು. ಅವರನ್ನು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರು ವಿಶೇಷವಾಗಿ ಗೌರವಿಸಿದ್ದಾರೆ. ಚಿತ್ರವೊಂದರ ಶೂಟಿಂಗ್ಗೆ ಅನಂತ್ ನಾಗ್ ಉಡುಪಿಗೆ ಬಂದಿದ್ದರು.
ವಿಜಯ್ ಸಂಕೇಶ್ವರ್ ಬಯೋಪಿಕ್ನಲ್ಲಿ ಅನಂತ್ ನಾಗ್
ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಅವರ ಬಯೋಪಿಕ್ ಆಗಿ ಮೂಡಿಬರುತ್ತಿರುವ ‘ವಿಜಯಾನಂದ’ ಚಿತ್ರದಲ್ಲಿ ಅನಂತ್ ನಾಗ್ ಕೂಡ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಅವರ ಫಸ್ಟ್ಲುಕ್ ಪೋಸ್ಟ್ ರಿಲೀಸ್ ಮಾಡಲಾಗಿದೆ.
ಸಾರಿಗೆ ಉದ್ಯಮದಲ್ಲಿ ವಿಜಯ ಸಂಕೇಶ್ವರ ಅವರ ಸಾಧನೆ ಅಪಾರ. ಅವರ ಪಾತ್ರದಲ್ಲಿ ನಿಹಾಲ್ ನಟಿಸುತ್ತಿದ್ದಾರೆ. ಹಾಗಾದರೆ ಈ ಸಿನಿಮಾದಲ್ಲಿ ಅನಂತ್ ನಾಗ್ಗೆ ಯಾವ ಪಾತ್ರ? ಅದಕ್ಕೂ ಉತ್ತರವಿದೆ. ವಿಜಯ ಸಂಕೇಶ್ವರ ಅವರ ತಂದೆ ಬಿ.ಜಿ. ಸಂಕೇಶ್ವರ್ ಪಾತ್ರದಲ್ಲಿ ಅನಂತ್ ನಾಗ್ ಕಾಣಿಸಿಕೊಳ್ಳಲಿದ್ದಾರೆ. ಫಸ್ಟ್ಲುಕ್ ಬಿಡುಗಡೆ ಮಾಡುವ ಮೂಲಕ ಅವರಿಗೆ ‘ವಿಜಯಾನಂದ’ ಸಿನಿಮಾ ತಂಡ ಬರ್ತ್ಡೇ ವಿಶ್ ಮಾಡಿದೆ.
ಈ ಚಿತ್ರಕ್ಕೆ ನಿರ್ದೇಶಕಿ ರಿಷಿಕಾ ಶರ್ಮಾ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಗೋಪಿ ಸುಂದರ್ ಸಂಗೀತ ನಿರ್ದೇಶನ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಹೇಮಂತ್ ಕುಮಾರ್ ಡಿ. ಸಂಕಲನ, ರಘು ನಿಡುವಳ್ಳಿ ಸಂಭಾಷಣೆ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರತಂಡಕ್ಕೆ ಅನಂತ್ ನಾಗ್ ಸೇರ್ಪಡೆ ಆಗಿರುವುದರಿಂದ ‘ವಿಜಯಾನಂದ’ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ.
ಇದನ್ನೂ ಓದಿ: Anant Nag Birthday: ವಿಜಯ ಸಂಕೇಶ್ವರ ಬಯೋಪಿಕ್ನಲ್ಲಿ ಅನಂತ್ ನಾಗ್; ಹುಟ್ಟುಹಬ್ಬಕ್ಕೆ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆ