AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶ ಚತುರ್ಥಿಗೆ ರಿಲೀಸ್​ ಆಗುತ್ತಿದೆ ‘ಲಂಕೆ’ ಚಿತ್ರ; ಲೂಸ್​ ಮಾದ ಜತೆಗೆ ಸಂಚಾರಿ ವಿಜಯ್​

ಲೂಸ್ ಮಾದ ಯೋಗೇಶ್ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ‌ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಗಣೇಶ ಚತುರ್ಥಿಗೆ ರಿಲೀಸ್​ ಆಗುತ್ತಿದೆ ‘ಲಂಕೆ’ ಚಿತ್ರ; ಲೂಸ್​ ಮಾದ ಜತೆಗೆ ಸಂಚಾರಿ ವಿಜಯ್​
ಗಣೇಶ ಚತುರ್ಥಿಗೆ ರಿಲೀಸ್​ ಆಗುತ್ತಿದೆ ‘ಲಂಕೆ’ ಚಿತ್ರ; ಲೂಸ್​ ಮಾದ ಜತೆಗೆ ಸಂಚಾರಿ ವಿಜಯ್​
TV9 Web
| Edited By: |

Updated on: Sep 04, 2021 | 9:25 PM

Share

ಹಬ್ಬಗಳು ಬಂದರೆ ಸಾಕು, ಸಾಲು ಸಾಲು ಸಿನಿಮಾಗಳು ರಿಲೀಸ್​ ಆಗುತ್ತವೆ. ಸ್ಟಾರ್​ ನಟರ ಚಿತ್ರಗಳು ಮುಂಚೂಣಿಯಲ್ಲಿರುತ್ತವೆ. ಆದರೆ, ಕಳೆದ ವರ್ಷದಿಂದ ಈ ಟ್ರೆಂಡ್​ ತಲೆಕೆಳಗಾಗಿದೆ. ಕೊವಿಡ್​ ಕಾರಣದಿಂದ ಹಬ್ಬ ಬಂದರೂ ಸಿನಿಮಾಗಳು ರಿಲೀಸ್​ ಆಗುತ್ತಿಲ್ಲ. ಈ ಬಾರಿ ಗಣೇಶ ಚತುರ್ಥಿ ಪ್ರಯುಕ್ತ ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಕೊವಿಡ್​ ಕಾರಣದಿಂದ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. ಇದು ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಈಗ ಲೂಸ್ ಮಾದ ಯೋಗೇಶ್ ಅಭಿನಯದ ‘ಲಂಕೆ’ ಚಿತ್ರ ಸೆಪ್ಟೆಂಬರ್ 10ರಂದು ಗಣೇಶನ ಚತುರ್ಥಿ ಪ್ರಯುಕ್ತ ರಾಜ್ಯದ 200 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.

‘ನಾನು ನನ್ನ ತಂದೆ ನಿರ್ಮಿಸಿದ್ದ ಚಿತ್ರಗಳಲ್ಲೇ ಇಷ್ಟು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ ಈ ಚಿತ್ರದ ಎಲ್ಲಾ ರೀತಿಯ ಪ್ರಚಾರಕಾರ್ಯಗಳಲ್ಲೂ ನಾನು ಭಾಗಿಯಾಗಿದ್ದೇನೆ’ ಎಂದು ನಾಯಕ ಲೂಸ್ ಮಾದ ಯೋಗೇಶ್ ‘ಲಂಕೆ’ ಸಿನಿಮಾ ಮೇಲಿರುವ ಪ್ರೀತಿ ವ್ಯಕ್ತಪಡಿಸಿದರು. ‘ಚಿತ್ರದ ಬಗ್ಗೆ ಹೇಳುವುದೆಲ್ಲಾ ಹೇಳಿ ಆಗಿದೆ. ನಮ್ಮ ಚಿತ್ರ ಸಪ್ಟೆಂಬರ್​ 10ರಂದು ತೆರೆಗೆ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ’ ಎಂದು ಕೋರಿದರು ನಾಯಕಿ ಕೃಷಿ ತಾಪಂಡ.

ರಾಮಪ್ರಸಾದ್ ಎಂ.ಡಿ. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮ ಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ. ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್ (ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಲೂಸ್ ಮಾದ ಯೋಗೇಶ್ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ‌ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ, ಆದ್ಯ ನಾಯಕ್, ಮಿಥುನ್ ಗೌಡ, ಬೇಬಿ ಜನ್ಯ  ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: ಗಮನ ಸೆಳೆಯುತ್ತಿರುವ ‘ಪುಕ್ಸಟ್ಟೆ ಲೈಫು’ ಟ್ರೈಲರ್; ಸಂಚಾರಿ ವಿಜಯ್​ರನ್ನು ನೋಡಿ ಕಣ್ತುಂಬಿಕೊಂಡ ಅಭಿಮಾನಿಗಳು

ಸಂಚಾರಿ ವಿಜಯ್​ ಅವರನ್ನು ಜೀವನಪೂರ್ತಿ ನಾನು ಮರೆಯಲ್ಲ: ನಟಿ ಎಸ್ತರ್​ ನರೊನಾ