ನಟ ದರ್ಶನ್ ಅವರು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ. ಅಲ್ಲಿ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈಗ ಅವರಿಗೆ ನಿರಂತರವಾಗಿ ಬೆನ್ನನೋವು ಬರುತ್ತಿದೆ. ಹೀಗಾಗಿ ಅವರು ಕುಳಿತುಕೊಳ್ಳಲು ಚೇರ್‌ಗೆ ಮನವಿ ಮಾಡಿದ್ದರು. ಈ ಮನವಿ ಮಾಡಿ ವಾರಗಳೇ ಕಳೆದಿವೆ. ಆದಾಗ್ಯೂ ಜೈಲಾಧಿಕಾರಿಗಳು ಕುರ್ಚಿಯನ್ನು ನೀಡಿಲ್ಲ. ಇದರಿಂದ ದರ್ಶನ್ ಗರಂ ಆಗಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಹಾಯಾಗಿ ಇದ್ದರು. ವಿಲ್ಸನ್ ಗಾರ್ಡನ್ ನಾಗ ಅವರಿಗೆ ಸಾಕಷ್ಟು ವ್ಯವಸ್ಥೆ ಮಾಡಿಕೊಟ್ಟಿದ್ದರು. ಈ ವ್ಯವಸ್ಥೆಯಿಂದ ಅವರಿಗೆ ಯಾವುದೇ ತೊಂದರೆ ಆಗಿರಲಿಲ್ಲ. ಈ ವಿಚಾರ ಹೊರ ಬಂದ ನಂತರ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ದರ್ಶನ್ ಅವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರಂತೆ.
ದರ್ಶನ್ ಚೇರ್‌ಗೆ ಬೇಡಿಕೆ ಇಟ್ಟಿದ್ದರು. ಈ ವಿಚಾರವನ್ನು ಅವರು ಕೋರ್ಟ್ ಎದುರು ಪ್ರಸ್ತಾಪ ಮಾಡಿದ್ದರು. ಈ ವೇಳೆ ಜಡ್ಜ್ ಅವರು ಕುರ್ಚಿ ನೀಡಲು ಸೂಚನೆ ಕೊಟ್ಟಿದ್ದರು. ಆದಾಗ್ಯೂ ಚೇರ್ ಏಕೆ ಕೊಟ್ಟಿಲ್ಲ ಎಂದು ಜೈಲಧಿಕಾರಿಗಳ ವಿರುದ್ಧ ದರ್ಶನ್ ಗರಂ ಆಗಿದ್ದಾರೆ. ದರ್ಶನ್ ಮಾತಿಗೆ ಖಡಕ್ಕಾಗಿ ಜೈಲಾಧಿಕಾರಿಗಳು ತೀರುಗೇಟು ನೀಡಿದ್ದಾರೆ.
‘ಕೋರ್ಟ್ನ ಅಧಿಕೃತ ಆದೇಶ ಬಂದ ಬಳಿಕವೇ ಚೇರ್ ಕೊಡಲಾಗುತ್ತದೆ’ ಎಂದು ಜೈಲಧಿಕಾರಿಗಳು ನೇರ ಮಾತಲ್ಲಿ ಹೇಳಿದ್ದಾರೆ. ಜೈಲಾಧಿಕಾರಿಗಳ ಮಾತಿಗೆ ದರ್ಶನ್ ಸಪ್ಪೆ ಮುಖ ಮಾಡಿಕೊಂಡಿದ್ದಾರೆ ಎಂದು ವರದಿ ಆಗಿದೆ. ಸದ್ಯ ದರ್ಶನ್ಗೆ ಬೆಂಗಳೂರಿನ ಜೈಲಿನಲ್ಲಿ ಕಷ್ಟಗಳು ಬಿಟ್ಟು ಬಿಡದೆ ಕಾಡುತ್ತಿವೆ.
ಇದನ್ನೂ ಓದಿ: ದರ್ಶನ್ ಹೊರಗೆ ಬಂದ್ರೆ ನಮಗೆ ಖುಷಿ; ತಪ್ಪು ಮಾಡಿದ್ದರೆ ಕಾನೂನು ಕ್ರಮ ಆಗಲಿ: ಗುರು ಕಿರಣ್
ವಿಚಾರಣಾದೀನ ಕೈದಿಗಳಿಗೆ ಕೆಲ ಅವಶ್ಯಕ ವಸ್ತುಗಳನ್ನ ಕೊಡಬುದಾದ ನಿಯಮಗಳಿವೆ. ಆದರೆ ಎಲ್ಲದಕ್ಕೂ ಕೋರ್ಟ್ ಆದೇಶ ಬೇಕು ಎಂದು ಬಳ್ಳಾರಿ ಸೆಂಟ್ರಲ್ ಜೈಲಾಧಿಕಾರಿಗಳು ಹೇಳುತ್ತಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲಿನ ಕಠಿಣತೆಗೆ ಆರೋಪಿ ದರ್ಶನ್ ಹೈರಾಣಾವಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.