‘ಸ್ಯಾಂಡಲ್ವುಡ್ ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್’ಗೆ ಕಿಚ್ಚನ ಬೆಂಬಲ
‘ನಮ್ಮ ಇಂಡಸ್ಟ್ರಿಯಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ ಅನ್ನೋದು ಗೊತ್ತು. ಆದರೆ, ಇಷ್ಟೊಂದು ಜನ ಬ್ಯಾಡ್ಮಿಂಟ್ ಆಡುವವರು ಇದ್ದಾರೆ ಅನ್ನೋದು ಗೊತ್ತಿರಲಿಲ್ಲ’ ಎಂದು ಸುದೀಪ್ ಹೇಳುತ್ತಿದ್ದಂತೆ ಎಲ್ಲರೂ ನಕ್ಕರು. ‘ಎಲ್ಲರೂ ಆಡಬೇಕು’ ಎಂದು ಹೇಳಿದರು ಸುದೀಪ್.
ಕಿಚ್ಚ ಸುದೀಪ್ ಅವರು ಸ್ಯಾಂಡಲ್ವುಡ್ನ ಅನೇಕ ಕಾರ್ಯಕ್ರಮಗಳಿಗೆ ತೆರಳಿ ಬೆಂಬಲ ಸೂಚಿಸುತ್ತಾರೆ. ಈಗ ಅವರು ಕನ್ನಡ ಚಲನಚಿತ್ರ ಕಲಾವಿದರು, ತಂತ್ರಜ್ಞರು, ಕಿರುತೆರೆ ಕಲಾವಿದರು ಹಾಗೂ ಮಾಧ್ಯಮದವರು ಒಟ್ಟಾಗಿ ಮಾಡುತ್ತಿರುವ ‘ಸ್ಯಾಂಡಲ್ವುಡ್ ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್’ಗೆ ಬೆಂಬಲವಾಗಿ ಸೂಚಿಸಿದ್ದಾರೆ. ಜೆರ್ಸಿ ಅನಾವರಣ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಬಂದು ಶುಭ ಕೋರಿದ್ದಾರೆ. ಈ ವೇಳೆ ಅವರು ಇಂಡಸ್ಟ್ರಿಯ ಬಗ್ಗೆ ಮಾತನಾಡಿದ್ದಾರೆ.
‘ನಮ್ಮ ಇಂಡಸ್ಟ್ರಿಯಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ ಅನ್ನೋದು ಗೊತ್ತು. ಆದರೆ, ಇಷ್ಟೊಂದು ಜನ ಬ್ಯಾಡ್ಮಿಂಟ್ ಆಡುವವರು ಇದ್ದಾರೆ ಅನ್ನೋದು ಗೊತ್ತಿರಲಿಲ್ಲ’ ಎಂದು ಸುದೀಪ್ ಹೇಳುತ್ತಿದ್ದಂತೆ ಎಲ್ಲರೂ ನಕ್ಕರು. ‘ಎಲ್ಲರೂ ಆಡಬೇಕು’ ಎಂದು ಹೇಳಿದರು ಸುದೀಪ್.
‘ಎಲ್ಲರೂ ಸೇರಿ ಇದನ್ನು ಮಾಡುತ್ತಿರುವುದು ಖುಷಿಯ ವಿಚಾರ. ನಮ್ಮ ಇಂಡಸ್ಟ್ರಿ ತಪ್ಪಾದ ಕಾರಣಕ್ಕೆ ಸುದ್ದಿ ಆಗುತ್ತಿದೆ. ಈ ಮಧ್ಯೆ ಇಂಥ ಕಾರ್ಯಕ್ರಮ ನಡೆಯುತ್ತಿದೆ. ನಾವೆಲ್ಲರೂ ಒಂದು. ಕನ್ನಡ ಚಿತ್ರರಂಗದ ಬಗ್ಗೆ ನಮಗೆ ಯಾವಾಗಲೂ ಹೆಮ್ಮೆ ಇರುತ್ತದೆ. ಚಿತ್ರರಂಗ ಇಲ್ಲಿವರೆಗೆ ಬಂದಿದೆ. ಈ ತರಹ ಒಂದು ಏರ್ಪಾಡು ಮಾಡಿದಾಗ, ಎಲ್ಲಾರೂ ಒಂದು ಕಡೆ ಸೇರುವ ಅವಕಾಶ ಸಿಗುತ್ತದೆ’ ಎಂದರು ಸುದೀಪ್.
‘ಸ್ಯಾಂಡಲ್ವುಡ್ ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್’ ಕನ್ನಡ ಚಿತ್ರರಂಗದ ಪ್ರಮುಖರು ಸೇರಿ ಮಾಡುತ್ತಿದ್ದಾರೆ. ಹೀಗಾಗಿ ಇದಕ್ಕೆ ಕಾರಣವಾದ ಎಲ್ಲರಿಗೂ ಸುದೀಪ್ ಅವರು ಧನ್ಯವಾದ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಅಡಿಯಲ್ಲಿ ಬೇರೆ ಬೇರೆ ಕ್ರೀಡೆಗಳು ನಡೆಯಲಿ ಎಂದು ಅವರು ಆಶಿಸಿದ್ದಾರೆ. ಸೃಜನ್ ಲೋಕೇಶ್, ಶ್ರೀನಗರ ಕಿಟ್ಟಿ ಸೇರಿದಂತೆ ಅನೇಕ ಕಲಾವಿದರನ್ನು ಇದರಲ್ಲಿ ಭಾಗಿ ಆಗಿದ್ದರು.
‘ಸ್ಯಾಂಡಲ್ವುಡ್ ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್’ ಹಲವು ತಂಡಗಳನ್ನು ರಚಿಸಲಾಗಿದೆ. ಮಾಧ್ಯಮದವರು, ಹಿರಿತೆರೆ ಹಾಗೂ ಕಿರುತೆರೆಯವರು ಇದರಲ್ಲಿ ಇದ್ದಾರೆ. ಸೆಪ್ಟೆಂಬರ್ 28 ಹಾಗೂ 29ರಂದು ಕೋರಮಂಗಲದಲ್ಲಿ ಬ್ಯಾಡ್ಮಿಂಟನ್ ಮ್ಯಾಚ್ ನಡೆಯಲಿದೆ. 50ಕ್ಕೂ ಹೆಚ್ಚು ಮ್ಯಾಚ್ಗಳನ್ನು ಆಯೋಜನೆ ಮಾಡಲಾಗುತ್ತಿದೆ.
ಇದನ್ನೂ ಓದಿ: ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ಸುದೀಪ್ ಅವರು ಸದ್ಯ ‘ಮ್ಯಾಕ್ಸ್’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ‘ವಿಕ್ರಾಂತ್ ರೋಣ’ ಬಳಿಕ ಸುದೀಪ್ ಅವರು ಒಂದು ದೊಡ್ಡ ಬ್ರೇಕ್ ಪಡೆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:46 pm, Sat, 21 September 24