ಬೆಂಗಳೂರು: ತಮ್ಮ ಸ್ನೇಹಿತರೆಂದರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಪ್ರಾಣ. ಅವರಿಗಾಗಿ ದರ್ಶನ್ ಏನು ಬೇಕಾದ್ರೂ ಮಾಡೋಕೆ ರೆಡಿ. ದೋಸ್ತಿಗಳೊಟ್ಟಿಗೆ ಮಸ್ತಿ ಮಾಡೋದೇ ಇರಲಿ ಅಥವಾ ಅವರು ಕಷ್ಟದಲ್ಲಿದ್ದಾಗ ನೆರವಿಗೆ ಧಾವಿಸುವುದಾಗಲಿ ‘ದಾಸ’ನಿಗೆ ತಮ್ಮ ಗೆಳೆಯರೇ ಎಲ್ಲಾ.
ಅಂತೆಯೇ, ಈ ಬಾರಿ ದೋಸ್ತಿಗಳ ಜೊತೆ ಫುಲ್ ಮಸ್ತಿ ಮಾಡಲು ಸಜ್ಜಾದ ದರ್ಶನ್ ತಮ್ಮ ಗೆಳೆಯರೊಂದಿಗೆ ಇಂದು ಬೈಕ್ ರೈಡಿಂಗ್ ಹೊರಟರು. R.R. ನಗರದಲ್ಲಿರೋ ತಮ್ಮ ನಿವಾಸದಿಂದ ಹೊರಟ ದಚ್ಚುಗೆ ನಟರಾದ ಪ್ರಜ್ವಲ್ ದೇವರಾಜ್ ಮತ್ತು ಚಿಕ್ಕಣ್ಣ ಸೇರಿದಂತೆ ಹಲವಾರು ಆತ್ಮೀಯರು ಸಾಥ್ ಕೊಟ್ಟರು.
ಅಂದ ಹಾಗೆ, ದರ್ಶನ್ ತಮ್ಮ ದೋಸ್ತಿಗಳೊಂದಿಗೆ ಈ ಬಾರಿ ಕೇರಳದತ್ತ ಪಯಣ ಬೆಳೆಸಿದ್ದಾರೆ ಎಂದು ಹೇಳಲಾಗಿದೆ. ಪ್ರಯಾಣಕ್ಕೂ ಮುನ್ನ ತಮ್ಮ ಮನೆಯತ್ತ ನೆರೆದಿದ್ದ ಫ್ಯಾನ್ಸ್ಗಾಗಿ ಪೋಸ್ ಕೊಟ್ಟ ದರ್ಶನ್ ಮತ್ತು ಅವರ ದೋಸ್ತಿ ಗ್ಯಾಂಗ್ ನಂತರ ದೇವರಿಗೆ ನಮಿಸಿ ಹೊರಟರು. ದರ್ಶನ್ ಕಳೆದ ಬಾರಿ ಮಡಿಕೇರಿಗೆ ತಮ್ಮ ಸ್ನೇಹಿತರೊಂದಿಗೆ ಹೋಗಿ ಬಂದಿದ್ದರು.
Published On - 11:05 am, Thu, 17 December 20