ಬೆಂಗಳೂರು: ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ನಾಳೆ ಫಿಲಂ ಚೇಂಬರ್‌ಗೆ ನಟ ದರ್ಶನ್ ದೂರು ನೀಡಲಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ, ಯಜಮಾನ ಹೊಸ ಹೋರಾಟಕ್ಕೆ ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.
ಪರಭಾಷಿಗರ ದೌರ್ಜನ್ಯ ವಿರುದ್ಧ ಸಿಡಿದೆದ್ದ ‘ಯಜಮಾನ’
ನಾಳೆ ಬೆಳಗ್ಗೆ 11ಗಂಟೆ ಸುಮಾರಿಗೆ ಚೇಂಬರ್‌ಗೆ ಆಗಮಿಸಲಿರೋ ದರ್ಶನ್ ತೆಲುಗು ಸಿನಿಮಾರಂಗದ ವಿರುದ್ಧ ದೂರು ದಾಖಲಿಸಲಿದ್ದಾರೆ.
ತೆಲುಗಿನಲ್ಲಿ ಯಾವುದೇ ಸಿನಿಮಾ ರಿಲೀಸ್ ಇದ್ರೂ, ಅಲ್ಲಿ ಕನ್ನಡ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡ್ತಾ ಇಲ್ಲ ಎಂದು ತೆಲುಗು ಚಿತ್ರರಂಗದ ಹೊಸ ನೀತಿಯನ್ನು ನಟ ಖಂಡಿಸಿದ್ದಾರೆ. ಸಣ್ಣ ಪುಟ್ಟ ಸಿನಿಮಾ ರಿಲೀಸ್ ಇದ್ರೂ ಕೂಡ ಕನ್ನಡ ಚಿತ್ರಗಳ ಬಿಡುಗಡೆಯನ್ನ ತಡೆ ಹಿಡಿಯಲಾಗುತ್ತಿದೆ ಎಂದು ದರ್ಶನ್ ಆರೋಪಿಸಿದ್ದಾರೆ ಎಂದು ಹೇಳಲಾಗಿದೆ. ಆದ್ರೆ, ಕರ್ನಾಟದಲ್ಲಿ ತೆಲುಗಿನ ಯಾವ ಸಿನಿಮಾ, ಯಾವಾಗ ಬೇಕಾದ್ರೂ ರಿಲೀಸ್ ಮಾಡಿ ಸದ್ದು ಮಾಡುವ ಅವಕಾಶವಿದೆ ಎಂದು ದರ್ಶನ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಈಗ ಕನ್ನಡದ ಬಹುತೇಕ ಸಿನಿಮಾಗಳು ತೆಲುಗಿನಲ್ಲೂ ರಿಲೀಸ್ ಆಗ್ತಿವೆ. ರಾಬರ್ಟ್ ಕೂಡ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆ ಆಗ್ತಿದೆ. ತೆಲುಗು ಸಿನಿಮಾರಂಗದ ಈ ಹೊಸ ನೀತಿಯಿಂದ ಕನ್ನಡದ ಬಹುತೇಕ ಸಿನಿಮಾಗಳು ಸಂಕಷ್ಟಕ್ಕೆ ಈಡಾಗಲಿವೆ. ಹೀಗಾಗಿ, ನಮ್ಮಲ್ಲಿ ಕೂಡ ತೆಲುಗು ಸಿನಿಮಾಗಳನ್ನ ತಡೆಹಿಡಿಯಬೇಕು ಎಂಬ ವಿಷಯದ ಬಗ್ಗೆ ಚರ್ಚೆ ನಡೆಸಬೇಕಿದೆ ಎಂಬುದು ದರ್ಶನ್ ಅವರ ಚಿಂತನೆ. ಹಾಗಾಗಿ, ಈ ಕುರಿತು, ನಾಳೆ ಫಿಲಂ ಚೇಂಬರ್ನಲ್ಲಿ ದರ್ಶನ್ ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಎಲ್ಲಾ ಪೊಲೀಸ್ ಸಿಬ್ಬಂದಿಗೆ ವಾರದ ರಜೆ ಕಡ್ಡಾಯವಾಗಿ ನೀಡಬೇಕು -DG & IGP ಪ್ರವೀಣ್ ಸೂದ್ ಸೂಚನೆ
Published On - 7:27 pm, Thu, 28 January 21