ಯಾರೂ ಇಲ್ಲದ ವೇಳೆ ಡಾ.ವಿಷ್ಣು ಪ್ರತಿಮೆ ಧ್ವಂಸಗೊಳಿಸಿದ್ದು ನಾಚಿಕೆಯ ಸಂಗತಿ -ದರ್ಶನ್​ ಆಕ್ರೋಶ

|

Updated on: Dec 26, 2020 | 6:19 PM

ಮಾಗಡಿ ರಸ್ತೆಯ ಬಳಿ ಪ್ರತಿಷ್ಠಾಪಿಸಲಾಗಿದ್ದ ಹಿರಿಯ ನಟ ಡಾ.ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸದ ಬಗ್ಗೆ ದುಷ್ಕರ್ಮಿಗಳ ವಿರುದ್ಧ ಟ್ವಿಟರ್​ನಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಯಾರೂ ಇಲ್ಲದ ವೇಳೆ ಡಾ.ವಿಷ್ಣು ಪ್ರತಿಮೆ ಧ್ವಂಸಗೊಳಿಸಿದ್ದು ನಾಚಿಕೆಯ ಸಂಗತಿ -ದರ್ಶನ್​ ಆಕ್ರೋಶ
ಡಾ. ವಿಷ್ಣು ಪುತ್ಥಳಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಕ್ಕೆ ನಟ ದರ್ಶನ್​ ಆಕ್ರೋಶ
Follow us on

ಬೆಂಗಳೂರು: ಮಾಗಡಿ ರಸ್ತೆಯ ಬಳಿ ಪ್ರತಿಷ್ಠಾಪಿಸಲಾಗಿದ್ದ ಹಿರಿಯ ನಟ ಡಾ.ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸದ ಬಗ್ಗೆ ದುಷ್ಕರ್ಮಿಗಳ ವಿರುದ್ಧ ಟ್ವಿಟರ್​ನಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸುವ, ಆರಾಧಿಸುವ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವಿಷ್ಣು ಸರ್ ಪುತ್ಥಳಿ ಧ್ವಂಸಗೊಳಿಸಿದ್ದಾರೆ. ಯಾರೂ ಇಲ್ಲದ ವೇಳೆ ಧ್ವಂಸಗೊಳಿಸಿದ್ದು ನಾಚಿಕೆಯ ಸಂಗತಿ. ಇಂಥ ದುಷ್ಕರ್ಮಿಗಳಿಗೆ ತಕ್ಷಣ ಶಿಕ್ಷೆ ಆಗಲೇಬೇಕು ಎಂದು ಟ್ವೀಟ್​​ ಮಾಡಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದ ಹಾಗೆ, ಮಾಗಡಿ ರಸ್ತೆಯ ಟೋಲ್​ ಗೇಟ್​ ಬಳಿಯ ಸರ್ಕಲ್​ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತವಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಬಾಲಗಂಗಾಧರನಾಥಶ್ರೀ ಪ್ರತಿಮೆ ಸ್ಥಾಪನೆಗೆ ನಿರ್ಧರಿಸಲಾಗಿತ್ತು. ಈ ನಡುವೆ, ಅಲ್ಲಿ ಪ್ರತಿಷ್ಠಾಪನೆಯಾಗಿದ್ದ ಡಾ.ವಿಷ್ಣು ಪ್ರತಿಮೆಯನ್ನು ಸ್ಥಳಾಂತರ ಮಾಡಲು ಮಾತುಕತೆಯಾಗಿತ್ತು ಎಂದು ಹೇಳಲಾಗಿದೆ. ಆದರೆ, ಈ ನಡುವೆ ಕಿಡಿಗೇಡಿಗಳು ರಾತ್ರೋರಾತ್ರಿ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಇತ್ತ, ಬೇರೆ ಕಡೆ ಪ್ರತಿಮೆ ಪ್ರತಿಷ್ಠಾಪಿಸುವುದಾಗಿ ಹೇಳಿದ್ದಾರೆ ಎಂದು ಟಿವಿ9ಗೆ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಪ್ರತಿಕ್ರಿಯಿಸಿದರು. ಜೊತೆಗೆ, ಪ್ರತಿಮೆ ಧ್ವಂಸಗೊಳಿಸಿದವರನ್ನ ಪತ್ತೆ ಹಚ್ಚಿ ಶಿಕ್ಷೆ ನೀಡಿ. ಆದರೆ, ಈ ವಿಚಾರವನ್ನು ಮುಂದುವರಿಸುವುದು ಬೇಡ ಎಂದು ಅನಿರುದ್ಧ್ ಹೇಳಿದರು.

ಈ ನಡುವೆ, ಡಾ.ವಿಷ್ಣು ಅಭಿಮಾನಿಗಳು ಅದೇ ಸ್ಥಳದಲ್ಲಿ ಮತ್ತೊಂದು ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಿದರು. ಜೊತೆಗೆ, ತಮ್ಮ ಪ್ರತಿಭಟನೆ ಮುಕ್ತಾಯಗೊಳಿಸಿದರು.

ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸ: ಕಿಡಿಗೇಡಿಗಳ ಕೃತ್ಯಕ್ಕೆ ಅಭಿಮಾನಿಗಳ ಕಣ್ಣೀರು, ಆಕ್ರೋಶ

Published On - 5:37 pm, Sat, 26 December 20