AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವೀರಗಾಸೆಗೆ ಅವಮಾನ ಮಾಡಿಲ್ಲ, ಅವಮಾನ ಮಾಡಿದವರಿಗೆ ಜಯರಾಜ್​ ಹೊಡೆದಿದ್ದಾನೆ’; ಸ್ಪಷ್ಟನೆ ನೀಡಿದ ಧನಂಜಯ್

‘ವೀರಗಾಸೆ ಹಾಕಿಕೊಂಡವರ ಮೇಲೆ ಡಾನ್ ಜಯರಾಜ್​ ಹಲ್ಲೆ ಮಾಡಿದಂತೆ ತೋರಿಸಲಾಗಿದೆ, ಇದರಿಂದ ವೀರಗಾಸೆಗೆ ಅವಮಾನ ಆಗಿದೆ’ ಎಂದು ಕೆಲವರ ಆರೋಪ ಮಾಡಿದ್ದಾರೆ. ಈ ಕುರಿತು ಧನಂಜಯ್ ಸ್ಪಷ್ಟನೆ ನೀಡಿದ್ದಾರೆ.

‘ವೀರಗಾಸೆಗೆ ಅವಮಾನ ಮಾಡಿಲ್ಲ, ಅವಮಾನ ಮಾಡಿದವರಿಗೆ ಜಯರಾಜ್​ ಹೊಡೆದಿದ್ದಾನೆ’; ಸ್ಪಷ್ಟನೆ ನೀಡಿದ ಧನಂಜಯ್
headbush
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 26, 2022 | 9:17 AM

ಡಾಲಿ ಧನಂಜಯ್ (Dhananjay) ನಟನೆಯ ‘ಹೆಡ್ ಬುಷ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲೂ ಒಳ್ಳೆಯ ಕಮಾಯಿ ಮಾಡಿದೆ. ‘ಬಡವ ರಾಸ್ಕಲ್’ ಬಳಿಕ ಮತ್ತೊಮ್ಮೆ ನಿರ್ಮಾಪಕನಾಗಿ ಅವರು ಯಶಸ್ಸು ಕಂಡಿದ್ದಾರೆ. ಡಾನ್​ ಎಂ.ಪಿ. ಜಯರಾಜ್ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಸಿನಿಮಾದ ದೃಶ್ಯವೊಂದರಲ್ಲಿ ವೀರಗಾಸೆಯನ್ನು ತೋರಿಸಲಾಗಿದೆ. ಇಡೀ ಕಥೆಗೆ ಟ್ವಿಸ್ಟ್ ಕೊಡೋ ದೃಶ್ಯವದು. ಈಗ ವೀರಗಾಸೆಗೆ ಅವಮಾನ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಧನಂಜಯ್ ಅವರು ಟಿವಿ9 ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ.

‘ವೀರಗಾಸೆ ಹಾಕಿಕೊಂಡವರ ಮೇಲೆ ಡಾನ್ ಜಯರಾಜ್​ ಹಲ್ಲೆ ಮಾಡಿದಂತೆ ತೋರಿಸಲಾಗಿದೆ, ಇದರಿಂದ ವೀರಗಾಸೆಗೆ ಅವಮಾನ ಆಗಿದೆ’ ಎಂದು ಕೆಲವರ ಆರೋಪ ಮಾಡಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಧನಂಜಯ್, ‘ವೀರಗಾಸೆ ನಾನು ಚಿಕ್ಕ ವಯಸ್ಸಿನಿಂದ ನೋಡುತ್ತಾ ಬರುತ್ತಿರುವ ಕಲೆ. ನನ್ನ ಸಿನಿಮಾ ರಿಲೀಸ್ ಸಂದರ್ಭದಲ್ಲಿ ವೀರಗಾಸೆ ಅವರನ್ನು ಕರೆಸಿದ್ದೆ. ನಮ್ಮೂರಿನ ಜಾತ್ರೆ, ದೇವಸ್ಥಾನದ ಕಾರ್ಯಕ್ರಮದಲ್ಲಿ ವೀರಗಾಸೆ ಇದ್ದೇ ಇರುತ್ತದೆ. ನನ್ನಿಂದ ಅದಕ್ಕೆ ಅವಮಾನ ಆಗುತ್ತದೆ ಎಂದಿದ್ದರೆ ನಾನು ಅಲ್ಲಿ ಅದನ್ನು ತರುತ್ತಲೇ ಇರಲಿಲ್ಲ’ ಎಂದು ಮಾತು ಆರಂಭಿಸಿದ್ದಾರೆ.

‘ಆ ಫೈಟ್ ಸಂದರ್ಭದಲ್ಲಿ ವೀರಗಾಸೆ ಹಾಕಿಕೊಂಡವರು ಹಿಂದೆ ಸರಿಯುತ್ತಾರೆ. ವೀರಗಾಸೆ ರೀತಿಯ ವೇಷ ಹಾಕಿದವರು ಮುಂದೆ ಬರುತ್ತಾರೆ. ವೀರಗಾಸೆ ವೇಳೆ ಚಪ್ಪಲಿ ಹಾಕುವಂತಿಲ್ಲ. ಆದರೆ, ಜಯರಾಜ್ ಮೇಲೆ ಹಲ್ಲೆ ಮಾಡಿದವರು ಶೂ ಧರಿಸಿರುತ್ತಾರೆ. ಆಗ ಅವನಿಗೆ ಇವರು ವೀರಗಾಸೆಯವರು ಅಲ್ಲ ಎಂಬುದು ಗೊತ್ತಾಗುತ್ತದೆ. ಆಗ ಅವರ ಮೇಲೆ ಜಯರಾಜ್ಹಲ್ಲೆ ಮಾಡುತ್ತಾನೆ. ವೀರಗಾಸೆಗೆ ಅವಮಾನ ಮಾಡುತ್ತಿರುವವರ ಮೇಲೆ ಜಯರಾಜ್ ಹೊಡೆದನೇ ಹೊರತು, ಜಯರಾಜ್ ವೀರಗಾಸೆಗೆ ಅವಮಾನ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸೆಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕುಷವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಅದರ ಕುರಿತಾಗಿ ನನ್ನ ವಿವರಣೆ ಈ ಕೆಳಗಿನ ಲಿಂಕಿನಲ್ಲಿದೆ’ ಎಂದು ಧನಂಜಯ್ ಅವರು ಟಿವಿ9 ಕನ್ನಡದ ಸಂದರ್ಶನವನ್ನು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Appu Food Festival: ಅಪ್ಪು ಫುಡ್​ ಫೆಸ್ಟಿವಲ್​ನಲ್ಲಿ ಡಾಲಿ ಧನಂಜಯ್​, ಲೂಸ್​ ಮಾದ ಯೋಗಿ

‘ಹೆಡ್​ ಬುಷ್’ ಸಿನಿಮಾ ಅಕ್ಟೋಬರ್ 21ರಂದು ರಿಲೀಸ್ ಆಗಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಮೊದಲ 3 ದಿನಕ್ಕೆ 9 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಸಿನಿಮಾ ಹೊಸ ದಾಖಲೆ ಬರೆದಿದೆ.

Published On - 7:49 am, Wed, 26 October 22