‘ಲಾಟಿ ಏಟು ಕೊಡಬೇಡಿ, ಮನುಷ್ಯರಾಗಿ ಮನುಷ್ಯತ್ವ ಪಾಲಿಸೋಣ’; ಪೊಲೀಸರಿಗೆ ಜಗ್ಗೇಶ್ ಮನವಿ

|

Updated on: May 09, 2021 | 5:31 PM

ಕಳೆದ ಬಾರಿ ಲಾಕ್​ಡೌನ್​ ವೇಳೆ ಸುಮ್ಮನೆ ಸುತ್ತಾಡಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದರು. ಈ ಬಾರಿ ಆ ರೀತಿ ಮಾಡಬೇಡಿ ಎಂಬುದು ಜಗ್ಗೇಶ್​ ಮನವಿ.

‘ಲಾಟಿ ಏಟು ಕೊಡಬೇಡಿ, ಮನುಷ್ಯರಾಗಿ ಮನುಷ್ಯತ್ವ ಪಾಲಿಸೋಣ’; ಪೊಲೀಸರಿಗೆ ಜಗ್ಗೇಶ್ ಮನವಿ
ನಟ ಜಗ್ಗೇಶ್​​
Follow us on

ಮಹಾಮಾರಿ ಕೊರೊನಾ ನಿಯಂತ್ರಿಸಲು ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿದೆ. ನಾಳೆಯಿಂದ 14 ದಿನ ಬೆಂಗಳೂರು ಸೇರಿ ಇಡೀ ಕರ್ನಾಟಕ ಲಾಕ್​ಡೌನ್ ಆಗಲಿದೆ. ಈ ಅವಧಿಯಲ್ಲಿ ಸುಮ್ಮನೆ ಸುತ್ತಾಡಿದರೆ ಕೇಸ್​ ಬೀಳಲಿದೆ. ಈ ಮಧ್ಯೆ ನಟ ಜಗ್ಗೇಶ್​ ಪೊಲೀಸರಿಗೆ ವಿಶೇಷ ಮನವಿ ಒಂದನ್ನು ಮಾಡಿದ್ದಾರೆ.

ಸೋಮವಾರ (ಮೇ 10) ಬೆಳಗ್ಗೆ 6ರಿಂದ ಕರ್ನಾಟಕ ಲಾಕ್​ಡೌನ್​ ಆಗಲಿದೆ. ಈ ಬಾರಿ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಲು ಸರ್ಕಾರ ಸಜ್ಜಾಗಿದೆ. ಯಾರಾದರೂ ಅನಗತ್ಯವಾಗಿ ಹೊರಬಂದರೆ ಪೊಲೀಸರ ಕೈಗೆ ಸಿಕ್ಕಿ ಬೀಳೋದು ಪಕ್ಕಾ. ಕಳೆದ ಬಾರಿ ಲಾಕ್​ಡೌನ್​ ವೇಳೆ ಸುಮ್ಮನೆ ಸುತ್ತಾಡಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದರು. ಈ ಬಾರಿ ಆ ರೀತಿ ಮಾಡಬೇಡಿ ಎಂಬುದು ಜಗ್ಗೇಶ್​ ಮನವಿ.

‘ಆದೇಶ ಪಾಲಿಸದವರಿಗೆ ದಂಡ ಹಾಕಿ, ವಾಹನ ಜಪ್ತಿಮಾಡಿ ತೊಂದರೆ ಇಲ್ಲ. ಆದರೆ ನಿರ್ದಯವಾಗಿ ಲಾಟಿಯಲ್ಲಿ ಹೊಡೆಯಬೇಡಿ. ಯುವಕರಾದರೆ ಪರವಾಗಿಲ್ಲಾ ತಡೆಯುತ್ತಾರೆ. ಆದರೆ ವಯಸ್ಸಾದವರಿಗೆ ಯಾವ ಕಾಯಿಲೆ ಇರುತ್ತದೆ ಎಂಬುದು ನಿಮಗೇನು ತಿಳಿದಿರುತ್ತದೆ? ಕೆಲ ಅಧಿಕಾರಿಗಳು ಒಂದು ಏಟುಕೊಟ್ಟು ಭಯಪಡಿಸುವ ಬದಲು ಪ್ರಾಣ ಹೋಗುವಂತೆ ಹೊಡೆಯುತ್ತಾರೆ. ಈ ಹಾಳಾದ ಕೊರೊನಾ ಮನುಕುಲದ ಅನ್ನ, ದುಡಿಮೆ, ನೆಮ್ಮದಿಯ ಕಸಿದಿದೆ’ ಎಂದು ಜಗ್ಗೇಶ್​ ಬರೆದುಕೊಂಡಿದ್ದಾರೆ.

‘ಮನುಷ್ಯರಾಗಿ ನಾವು ಮನುಷ್ಯತ್ವ ಪಾಲಿಸುವ. ಜನತೆಯಲ್ಲೂ ನನ್ನ ಮನವಿ. ಈ ರೋಗ ಮನುಕುಲದ ಸಾವಿಗಾಗಿಯೇ ಬಂದಿದೆ. ದರೆಯೇ ಹತ್ತಿ ಉರಿಯುತ್ತಿದೆ. ದಯಮಾಡಿ ಸ್ವಲ್ಪದಿನ ವೈದ್ಯಲೋಕದ ಮಾತಿನಂತೆ ಕೆಲತಿಂಗಳು ಎಚ್ಚರವಾಗಿ ಇದ್ದುಬಿಡಿ ಪ್ಲೀಸ್​’ ಎಂದು ಜಗ್ಗೇಶ್​ ಜನರಲ್ಲಿ ಮವಿಮಾಡಿದ್ದಾರೆ.

ಇದನ್ನೂ ಓದಿ: ರಿಯಲ್​ ಹೀರೋ ಆದ ಜಗ್ಗೇಶ್​; 20 ದಿನಗಳಿಂದ ಕೊರೊನಾ ರೋಗಿಗಳ ಸೇವೆಯಲ್ಲಿ ನಟ