ರಿಯಲ್​ ಹೀರೋ ಆದ ಜಗ್ಗೇಶ್​; 20 ದಿನಗಳಿಂದ ಕೊರೊನಾ ರೋಗಿಗಳ ಸೇವೆಯಲ್ಲಿ ನಟ

|

Updated on: Apr 30, 2021 | 7:13 PM

ಬಾಲಿವುಡ್​ ನಟ ಸೋನು ಸೂದ್​ ಸೇರಿದಂತೆ ಸಾಕಷ್ಟು ಮಂದಿ ಜನಸಾಮಾನ್ಯರ ಸಹಾಯಕ್ಕೆ ನಿಂತಿದ್ದಾರೆ. ಕನ್ನಡದ ಹೀರೋ ಅರ್ಜುನ್​ ಗೌಡ ಆ್ಯಂಬುಲೆನ್ಸ್​ ಡ್ರೈವರ್ ಆಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ರಿಯಲ್​ ಹೀರೋ ಆದ ಜಗ್ಗೇಶ್​; 20 ದಿನಗಳಿಂದ ಕೊರೊನಾ ರೋಗಿಗಳ ಸೇವೆಯಲ್ಲಿ ನಟ
ನಟ ಜಗ್ಗೇಶ್​
Follow us on

ಕೊರೊನಾ ವೈರಸ್​ ಮಿತಿಮೀರಿ ಹರಡುತ್ತಿದೆ. ಇದರಿಂದ ಅನೇಕ ಸೆಲೆಬ್ರಿಟಿಗಳು ಮನೆಯಲ್ಲೇ ಕೂತಿದ್ದಾರೆ. ಆದರೆ, ಕೆಲವೇ ಕೆಲವು ಸೆಲೆಬ್ರಿಟಿಗಳು ಮಾತ್ರ ಮನೆಯಿಂದ ಹೊರಬಂದು ಕೊರೊನಾ ರೋಗಿಗಳ ಸೇವೆ ಮಾಡುತ್ತಿದ್ದಾರೆ. ಇದಕ್ಕೆ ನಟ ಜಗ್ಗೇಶ್​ ಕೂಡ ಹೊರತಾಗಿಲ್ಲ. ಅವರು ಕಳೆದ 20 ದಿನಗಳಿಂದ ಕೊರೊನಾ ರೋಗಿಗಳಿಗೆ ಸಹಾಯ ಮಾಡುತ್ತಿದ್ದಾರೆ.

ಇತ್ತೀಚೆಗೆ ಜಗ್ಗೇಶ್​ ಟ್ವೀಟ್ ಒಂದನ್ನು ಮಾಡಿದ್ದರು. ಈ ಟ್ವೀಟ್​ನಲ್ಲಿ, ಮಾನ್ಯ ಮುಖ್ಯ ಮಂತ್ರಿಗಳ ಗಮನಕ್ಕೆ. ಕೊರೊನಾ ರೋಗಿ ಅಡ್ಮಿಟ್ ಆದ 2-3ದಿನಕ್ಕೆ ಸಾವು ಸಂಭವಿಸುತ್ತಿದೆ. ವೈದ್ಯರು ಯಾವ ರೀತಿ ಚಿಕಿತ್ಸೆ ನೀಡುತ್ತಾರೆ ಎಂಬುದು ಬಂಧುಗಳಿಗೆ ತಿಳಿಯದು. ಸಾವಾಗಿದೆ ಎಂದು ತಿಳಿಸುತ್ತಾರೆ ಆದರೆ ಮುಖ ನೋಡಲಾಗದು. ಕೆಲ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರೂ ಸಿಗುವುದಿಲ್ಲ ಎಂದು ಬರೆದುಕೊಂಡಿದ್ದರು.

ಈ ಟ್ವೀಟ್​ಗೆ ನಿಮಗೆ ಚಿಕಿತ್ಸೆ ಬಗ್ಗೆ ಅನುಮಾನ ಇದ್ದರೆ PPE ಕಿಟ್​ ಹಾಕಿಕೊಂಡು ಒಳಗೆ ಹೋಗಿ ನೋಡಿ ಬನ್ನಿ ಎಂದು ಅಭಿಮಾನಿಯೋರ್ವ ಕಮೆಂಟ್​ ಹಾಕಿದ್ದ. ಇದಕ್ಕೆ ಜಗ್ಗೇಶ್​ ಉತ್ತರ ನೀಡಿದ್ದಾರೆ.

20 ದಿನಗಳಿಂದ ಅದೇ ಕೆಲಸ ಮಾಡುತ್ತಿದ್ದೇನೆ. ನಿಮಗೆ ಧೈರ್ಯ ಇದ್ದರೆ ಬರಬಹುದು, ನಾನು ಕರೆದುಕೊಂಡು ಹೋಗುವೆ. ನಾರಾಯಣ ಆಸ್ಪತ್ರೆಯಲ್ಲಿ ಆಮ್ಲಜನಕ ಪಡೆದು ದೇವೆಗೌಡ ಬಂಕ್ ಹತ್ತಿರ ಕೊರೊನಾ ರೋಗಿಗೆ ಕೊಟ್ಟು ಬರುತ್ತಿರುವೆ. ನಿಮಗೆ ಆಗುತ್ತ ನನ್ನ ಸಹಾಯಕ್ಕೆ ಬರಲು ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ತಾವು ಎನು ಮಾಡುತ್ತಿದ್ದೇವೆ ಎಂಬುದನ್ನು ಜಗ್ಗೇಶ್​ ಹೇಳಿಕೊಂಡಿದ್ದಾರೆ. ಜಗ್ಗೇಶ್​ ಮಾಡುತ್ತಿರುವ ಕಾರ್ಯಕ್ಕೆ ಎಲ್ಲ ಕಡೆಗಳಿಂದ ಶ್ಲಾಘನೆ ವ್ಯಕ್ತವಾಗಿದೆ.

ಕೊರೊನಾ ಎರಡನೇ ಅಲೇ ದೊಡ್ಡ ಮಟ್ಟದಲ್ಲಿ ತೊಂದರೆ ನೀಡುತ್ತಿದೆ. ಸಾವುನೋವುಗಳು ಕೂಡ ಹೆಚ್ಚಾಗುತ್ತಿವೆ. ಬಾಲಿವುಡ್​ ನಟ ಸೋನು ಸೂದ್​ ಸೇರಿದಂತೆ ಸಾಕಷ್ಟು ಮಂದಿ ಜನಸಾಮಾನ್ಯರ ಸಹಾಯಕ್ಕೆ ನಿಂತಿದ್ದಾರೆ. ಕನ್ನಡದ ಹೀರೋ ಅರ್ಜುನ್​ ಗೌಡ ಆ್ಯಂಬುಲೆನ್ಸ್​ ಡ್ರೈವರ್ ಆಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಇದನ್ನೂ ಓದಿ: Actor Arjun Gowda: ಜನರ ಕಷ್ಟ ನೋಡಲಾಗದೇ ಆ್ಯಂಬುಲೆನ್ಸ್​ ಚಾಲಕನಾದ ಕನ್ನಡ ಸಿನಿಮಾ ನಟ ಅರ್ಜುನ್​​ ಗೌಡ