ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಫಿಟ್ನೆಸ್​ ಸೀಕ್ರೆಟ್​!

  • TV9 Web Team
  • Published On - 15:00 PM, 29 Sep 2019
ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಫಿಟ್ನೆಸ್​ ಸೀಕ್ರೆಟ್​!

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ ಪ್ರವೇಶಿಸಿ ಸಿನಿಪ್ರಿಯರ ಗಮನ ಸೆಳೆದ ಕಿರಿಕ್ ಸುಂದರಿ ಸಂಯುಕ್ತಾ ಹೆಗ್ಗಡೆ. ಮುಂದೆ ಈಕೆ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕವೂ ಪರಿಚಯವಾದ್ರು. ಸೋಷಿಯಲ್ ಮೀಡಿಯಾದಲ್ಲಂತೂ ಆಗಾಗ ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿರುವ ಬೆಡಗಿ. ಹಲವು ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿ ಹೆಸರು ಮಾಡಿದ ಚೆಲುವೆ. ಕಿರಿಕ್ ಬೆಡಗಿಯ ನಟನೆಗೆ ಶಹಭ್ಬಾಷ್ ಎಂದ ಸಿನಿರಂಗ, ಇವ್ರ ಪರ್ಫೆಕ್ಟ್ ಫಿಟ್ನೆಸ್​ಗೂ ಫಿದಾ ಆಗಿದೆ.

ನಟಿ ಸಂಯುಕ್ತಾ ಅವರ ಡ್ಯಾನ್ಸ್​ ನೀವು ಈಗಾಗ್ಲೇ ನೋಡಿರ್ತೀರಾ. ಇವರ ಫಿಟ್ನೆಸ್​ಗೆ ಡ್ಯಾನ್ಸ್​ ಕೂಡಾ ಒಂದು ಕಾರಣ. ಬಟ್ ಇವೆಲ್ಲದಕ್ಕಿಂತ ಹೆಚ್ಚಾಗಿ ಇವರ ಜಿಮ್​ ವರ್ಕೌಟ್ ಇವರಿಗೆ ಪರ್ಫೆಕ್ಟ್​ ಫಿಟ್ ಆಗೋಕೆ ಕಾರಣವಂತೆ. ಕಿರಿಕ್ ಸಂಯುಕ್ತಾ ಅವರು ಜಿಮ್​ನಲ್ಲಿ ಗಂಟೆಗಟ್ಟಲೇ ಬೆವರಿಳಿಸುವುದರಿಂದ ಲೀನ್ ಆ್ಯಂಡ್ ಟೋನ್ಡ್​ ಬಾಡಿ ಇವರದ್ದಾಗಿದೆಯಂತೆ. ಇನ್ನು ಇವರ ವರ್ಕೌಟ್​ ರುಟಿನ್​ನಲ್ಲಿ ಸ್ವಿಮ್ಮಿಂಗ್, ರನ್ನಿಂಗ್, ಜಂಪಿಂಗ್ ರೋಪ್, ಕಿಕ್​ಬಾಕ್ಸಿಂಗ್ ಮತ್ತು ಕಾರ್ಡಿಯೋ ಎಕ್ಸ್​ಸೈಜ್​ಗಳು ಇರುತ್ತೆ. ಇದು ಇವರ ಶರೀರವನ್ನು ಸದೃಢಗೊಳಿಸಿ ಹೆಲ್ತಿ ಮೈಕಟ್ಟು ಹೊಂದಲು ಸಹಾಯಕವಾಗುತ್ತಂತೆ.

ಸಂಯುಕ್ತಾ ಅವರ ಫಿಟ್ ಆ್ಯಂಡ್ ಪರ್ಫೆಕ್ಟ್​ ಬಾಡಿ ಶೇಪ್​ಗೆ ಜಿಮ್​ನ ಇನ್ನಿತರ ವರ್ಕೌಟ್​ಗಳು ಕೂಡ ಕಾರಣವಾಗಿದೆಯಂತೆ. ಅದರಲ್ಲಿ ಸ್ಕ್ವಾಟ್ಸ್, ಡೆಡ್ ಲಿಪ್ಟ್, ಇನ್​ಸೈಕಲ್ ಲೆಗ್​ಪ್ರೆಸ್​, ಸೀಟೆಡ್​ ಲೆಗ್​ ಪ್ರೆಸ್, ಹಿಪ್ ಥ್ರೆಸ್ಟ್​, ವೇಟೆಡ್ ಸ್ಕ್ವಾಟ್ಸ್ ತಪ್ಪದೇ ಮಾಡ್ತಾರಂತೆ ಫಿಟ್ನೆಸ್ ಫ್ರೀಕ್ ಸಂಯುಕ್ತಾ. ಇವರು ವೇಟ್ ಎಕ್ಸ್​ಸೈಜ್​ ಗಳ ಕಡೆ ಹೆಚ್ಚಿನ ಆದ್ಯತೆ ನೀಡ್ತಾರೆ ಬೋಲ್ಡ್ ಬ್ಯೂಟಿ ಸಂಯುಕ್ತಾ. ಅದರಲ್ಲಿ ಪುಶ್ಯಪ್ಸ್, ಆಸ್ಪೆಕ್ಟ್​ ಪ್ಲಾಂಕ್ಸ್​ ಬ್ಯಾಕ್ ಎಕ್ಸ್​ಟೆಂಶ್ಯನ್ ಮತ್ತು ಬ್ರಿಡ್ಜಸ್​ಗಳು ಇರುತ್ತಂತೆ.

ಈ ಎಕ್ಸ್​ಸೈಜ್​ಗಳು ದೇಹದ ಪೋಸ್ಚರ್ ಮತ್ತು ಪವರ್ ಫುಲ್ ಕೋರ್ ಪಡೆಯಲು ಸಹಕಾರಿಯಾಗುತ್ತೆ ಅನ್ನೋದು ಇವರ ಅಭಿಪ್ರಾಯ. ಇಷ್ಟು ಮಾತ್ರವಲ್ಲದೆ ಬೈಸಿಕಲ್​ ಕ್ರಂಚಸ್, ಸಿಂಗಲ್ ಕ್ರಂಚಸ್, ಸಿಂಗಲ್ ಲೆಗ್ ರೈಸಸ್ ಮತ್ತು ಟೋನ್​ ಕ್ರಂಚಸ್ ಕೂಡಾ ಮಾಡ್ತಾರಂತೆ ಕಿರಿಕ್ ಬ್ಯೂಟಿ.