ನಟ ಶ್ರೀಮುರಳಿ ಇಂದು ಕೊವಿಡ್ ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆಯುತ್ತಿರುವ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ಮೊದಲ ವಾಕ್ಸಿನೇಶನ್ ಆಯ್ತ. ಆಗದೆ ಇರುವವರು ತಡ ಮಾಡಬೇಡಿ. ನಿಮ್ಮ ವಾಕ್ಸಿನೇಶನ್ ಮುಗಿಸಿಕೊಳ್ಳಿ ಎಂದು ಕೋರಿದ್ದಾರೆ.
ನಟಿ ಆಶಿಕಾ ರಂಗನಾಥ್ ಕೂಡ ಇಂದು ಕೊವಿಡ್ ಲಸಿಕೆ ಪಡೆದಿದ್ದಾರೆ. ಅಯೋಗ್ಯ ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್ ಕುಮಾರ್ ಕೂಡ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಆಂದೋಲನಕ್ಕೆ ಮೇ 1ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿವಾಜಿನಗರದ ವಾಜಪೇಯಿ ಮೆಡಿಕಲ್ ಕಾಲೇಜಿನಲ್ಲಿ ಸಾಂಕೇತಿಕ ಚಾಲನೆ ನೀಡಿದ್ದರು. ಆದರೆ, ಲಸಿಕೆ ನೀಡುವ ಕಾರ್ಯ ಆರಂಭವಾಗಿರಲಿಲ್ಲ.
ನನ್ನ ಮೊದಲ ವಾಕ್ಸಿನೇಶನ್ ಆಯ್ತು… ಆಗದೆ ಇರುವವರು ತಡ ಮಾಡ್ಬೇಡಿ ನಿಮ್ಮ ವಾಕ್ಸಿನೇಶನ್ ಮುಗಿಸಿಕೊಳ್ಳಿ. #stayhome #staysafe Thanking all Our Frontline Warriors.#Frontlinewarriors #Respect pic.twitter.com/s0qXr6LkWc
— SRIIMURALI (@SRIMURALIII) May 10, 2021
ಈಗ 3.5 ಲಕ್ಷ ಡೋಸ್ ಲಸಿಕೆ ರಾಜ್ಯಕ್ಕೆ ತಲುಪಿದೆ. ಕೇಂದ್ರ ಸರ್ಕಾರದಿಂದ 99,58,190 ಡೋಸ್ ಕೊವಿಶೀಲ್ಡ್, 10,91,280 ಡೋಸ್ ಕೊವ್ಯಾಕ್ಸಿನ್ ಲಸಿಕೆ ರಾಜ್ಯಕ್ಕೆ ಪೂರೈಕೆಯಾಗಿದೆ. ಹೀಗಾಗಿ, ಸೋಮವಾರದಿಂದ (ಮೇ 10) 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ.
ಈ ಸಂಕಷ್ಟದ ಸಮಯದಲ್ಲಿ ಹಗಲಿರುಳು ಕರೊನಾ ಸೋಂಕಿತರ ಸೇವೆ ಮಾಡುತ್ತಿರುವ 5 ಸರ್ಕಾರಿ ಆಸ್ಪತ್ರೆಯ ಡಾಕ್ಟರ್ಸ್, ನರ್ಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಶ್ರೀಮುರಳಿ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಅವರ ಈ ಸೇವೆಗೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Madhagaja: ‘ಮದಗಜ’ ಶ್ರೀಮುರಳಿಯ ಇನ್ನೊಂದು ಮುಖ ಬಹಿರಂಗ! ಆಶಿಕಾ ಜೊತೆಗಿನ ರೊಮ್ಯಾಂಟಿಕ್ ವಿಡಿಯೋ ವೈರಲ್
Sri Murali: ಕೊವಿಡ್ ಸಂಕಷ್ಟದಲ್ಲಿ 5 ಸರ್ಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಊಟ ನೀಡುತ್ತಿರುವ ನಟ ಶ್ರೀಮುರಳಿ
Published On - 8:05 pm, Mon, 10 May 21