ದುಬೈನ ಬುರ್ಜ್ ಖಲೀಫಾದ ಮೇಲೆ.. ಸುದೀಪ್​ ನಟನೆಯ ‘ವಿಕ್ರಾಂತ್ ರೋಣ’ ಟೈಟಲ್‌ ಪೋಸ್ಟರ್ ಲಾಂಚ್!

|

Updated on: Jan 31, 2021 | 10:46 PM

ದುಬೈನ ಪ್ರತಿಷ್ಠಿತ ಬುರ್ಜ್ ಖಲೀಫಾ ಕಟ್ಟಡದ ಮೇಲೆ ವಿಕ್ರಾಂತ್​ ರೋಣ ಸಿನಿಮಾದ ಟೈಟಲ್‌ ಪೋಸ್ಟರ್​ನ ಲಾಂಚ್ ಮಾಡಲಾಯಿತು.

ದುಬೈನ ಬುರ್ಜ್ ಖಲೀಫಾದ ಮೇಲೆ.. ಸುದೀಪ್​ ನಟನೆಯ ‘ವಿಕ್ರಾಂತ್ ರೋಣ’ ಟೈಟಲ್‌ ಪೋಸ್ಟರ್ ಲಾಂಚ್!
ಬುರ್ಜ್ ಖಲೀಫಾದ ಮೇಲೆ ‘ವಿಕ್ರಾಂತ್ ರೋಣ’ ಟೈಟಲ್‌ ಪೋಸ್ಟರ್ ಲಾಂಚ್
Follow us on

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್​ ರೋಣ ಸಿನಿಮಾದ ಒಂದು ಝಲಕ್​ಗಾಗಿ ನಟನ ಫ್ಯಾನ್ಸ್​ ಬಹಳ ದಿನಗಳಿಂದ ಕಾತುರದಿಂದ ಕಾಯುತ್ತಿದ್ದರು. ಅಂತೂ ಕೊನೆಗೂ, ಸುದೀಪ್ ಅಭಿಮಾನಿಗಳ ಮನ ತಣಿಸಲು ​ ಚಿತ್ರತಂಡವು ಸಿನಿಮಾದ ಟೈಟಲ್‌ ಪೋಸ್ಟರ್​ನ ಇಂದು ಲಾಂಚ್ ಮಾಡಿದೆ. ದುಬೈನ ಪ್ರತಿಷ್ಠಿತ ಬುರ್ಜ್ ಖಲೀಫಾ ಕಟ್ಟಡದ ಮೇಲೆ ವಿಕ್ರಾಂತ್​ ರೋಣ ಸಿನಿಮಾದ ಟೈಟಲ್‌ ಪೋಸ್ಟರ್​ನ ಲಾಂಚ್ ಮಾಡಲಾಯಿತು.

ಜೊತೆಗೆ, ಚಿತ್ರದ ಪೋಸ್ಟರ್ ಲಾಂಚ್​ನ ಯೂಟ್ಯೂಬ್​ ಮೂಲಕ ಲೈವ್​ ಆಗಿ ಪ್ರಸಾರ ಮಾಡಲಾಯಿತು. ಹೀಗಾಗಿ, ವಿಶ್ವದಾದ್ಯಂತ ಇರುವ ಕಿಚ್ಚನ ಫ್ಯಾನ್ಸ್​ಗೆ ತಮ್ಮ ನೆಚ್ಚಿನ ನಟನ ಸಿನಿಮಾದ ಟೈಟಲ್​ ಪೋಸ್ಟರ್​ ಲಾಂಚ್​ ನೋಡುವ ಅವಕಾಶ ಸಿಕ್ಕಿತು.

ಪೋಸ್ಟರ್​ ಲಾಂಚ್​ ನಂತರ ಸುದೀಪ್ ಸಂಭ್ರಮಾಚರಣೆಯಲ್ಲಿ ಭಾಗಿಯಾದರು. ಈ ವೇಳೆ ಅಲ್ಲೇ ನೆರೆದಿದ್ದ ತಮ್ಮ ಅಭಿಮಾನಿಗಳಿಗೆ ಕೈಬೀಸಿ ತಮ್ಮ ಧನ್ಯವಾದ ಸೂಚಿಸಿದರು.

ಚಿತ್ರರಂಗದಲ್ಲಿ ಬೆಳ್ಳಿ ಹೆಜ್ಜೆಯ ಸಂಭ್ರಮದಲ್ಲಿರೋ ಸುದೀಪ್​ಗೆ ವಿಕ್ರಾಂತ್ ರೋಣ ಚಿತ್ರದ ಝಲಕ್​ನ ಸಿನಿಮಾದ ನಿರ್ದೇಶಕರಾದ ಅನೂಪ್​ ಭಂಡಾರಿ, ನಿರ್ಮಾಪಕರಾದ ಜಾಕ್ ಮಂಜು ಹಾಗೂ ಶಾಲಿನಿ ಮಂಜುನಾಥ್​ ಗಿಫ್ಟ್​ ಆಗಿ ಅರ್ಪಿಸಿದರು. ಈ ವೇಳೆ, ನಟ ನಿರೂಪ್ ಭಂಡಾರಿ ಹಾಗೂ ಸುದೀಪ್ ಪತ್ನಿ ಪ್ರಿಯಾ ಸಹ ಉಪಸ್ಥಿತರಿದ್ದರು.

ಪ್ರಪಂಚದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ಮೇಲೆ ಸುದೀಪ್ ಅವರ2,000 ಅಡಿ ಕಟೌಟ್ ಸಹ ಪ್ರದರ್ಶನವಾಯಿತು. ಇದಕ್ಕೂ ಮುಂಚೆ, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಸೇರಿದಂತೆ ಚಿತ್ರರಂಗದ ವಿವಿಧ ಗಣ್ಯರು ಕಿಚ್ಚನಿಗೆ ಶುಭ ಹಾರೈಸಿದರು.

ಲಕ್ಕುಂಡಿಯಲ್ಲಿ ‘ರತ್ನನ್ ಪ್ರಪಂಚ’ದ ಸೊಬಗು; ಡಾಲಿಯನ್ನು​ ನೋಡಲು ಮುಗಿಬಿದ್ದ ಮಂದಿ!

Published On - 10:06 pm, Sun, 31 January 21