ಉಪೇಂದ್ರ ಸಿನಿಮಾ ಮಾಡುತ್ತಿದ್ದಾರೆ ಎಂದರೆ ಅದರಲ್ಲಿ ಒಂದು ವಿಶೇಷತೆ ಇದ್ದೇ ಇರುತ್ತದೆ. ಈ ಮೊದಲು ಉಪೇಂದ್ರ ಅವರು ಲುಕ್ಗೆ ಸಾಕಷ್ಟು ಪ್ರಾಮುಖ್ಯತೆ ಕೊಡುತ್ತಿದ್ದರು. ಚಿತ್ರ ವಿಚಿತ್ರ ಲುಕ್ನಲ್ಲಿ ಉಪ್ಪಿ ಎಂಟ್ರಿ ಆಗುತ್ತಿತ್ತು. ಆದರೆ, ಇತ್ತೀಚೆಗೆ ಅವರು ಈ ಟ್ರೆಂಡ್ ಕಡಿಮೆ ಮಾಡಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಅವರು ಸರಳ ಲುಕ್ನಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಈಗ ಉಪೇಂದ್ರ ಜನ್ಮದಿನಕ್ಕ ‘45’ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ರಾ ಲುಕ್ನಲ್ಲಿ ಉಪ್ಪಿಯ ಎಂಟ್ರಿ ಆಗಿದೆ.
ಕನ್ನಡದಲ್ಲಿ ಹಲವು ಸೂಪರ್ ಹಿಟ್ ಹಾಡುಗಳನ್ನು ಸಂಯೋಜನೆ ಮಾಡಿದವರು ಅರ್ಜುನ್ ಜನ್ಯ. ಅವರ ಇಂಪಾದ ಮ್ಯೂಸಿಕ್ಗೆ ಮನಸೋಲದವರೇ ಇಲ್ಲ. ಈಗ ಅವರು ನಿರ್ದೇಶನ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ‘45’ ಚಿತ್ರವನ್ನು ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಡೈರೆಕ್ಷನ್ನಲ್ಲಿ ಇದು ಅವರಿಗೆ ಚೊಚ್ಚಲ ಅನುಭವ. ‘45’ ಚಿತ್ರದ ಬಗ್ಗೆ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ನಟಿಸುತ್ತಿದ್ದಾರೆ. ಇದರಲ್ಲಿ ಉಪೇಂದ್ರ ಲುಕ್ ರಿವೀಲ್ ಆಗಿದೆ.
ಉಪೇಂದ್ರ ಅವರು ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿದ್ದಾರೆ. ಬಾಯಲ್ಲಿ ಸಿಗಾರ್ ಹಚ್ಚುತ್ತಿದ್ದಾರೆ. ಅವರ ಹೇರ್ಸ್ಟೈಲ್ ಕೂಡ ಭಿನ್ನವಾಗಿದೆ. ಕೈಯಲ್ಲಿ ಚಿತ್ರ ವಿಚಿತ್ರ ಉಂಗುರ ಇದೆ. ಅಷ್ಟೇ ಅಲ್ಲ, ಹಿಂಭಾಗದಲ್ಲಿ ಕೋಡು ಕೂಡ ಹೈಲೈಟ್ ಆಗಿದೆ. ಈ ಲುಕ್ ನೋಡಿದ ಬಳಿಕ ನಿರೀಕ್ಷೆ ಮತ್ತಷ್ಟು ಹೆಚ್ಚುವಂತೆ ಆಗಿದೆ.
ಇದನ್ನೂ ಓದಿ: ‘ಅಕ್ಟೋಬರ್ನಲ್ಲಿ ಸಿನಿಮಾನೇ ಬಿಡುಗಡೆ ಮಾಡ್ತೀವಿ ಎಂದಿಲ್ಲ’; ‘ಯುಐ’ ಬಿಡುಗಡೆ ಬಗ್ಗೆ ಶಾಕ್ ಕೊಟ್ಟ ಉಪ್ಪಿ
ಸ್ಯಾಂಡಲ್ವುಡ್ನಲ್ಲಿ ಸದಭಿರುಚಿಯ ಚಿತ್ರಗಳನ್ನು ನೀಡಿರುವ ‘ಸೂರಜ್ ಪ್ರೊಡಕ್ಷನ್ಸ್’ ಮೂಲಕ ಶ್ರೀಮತಿ ಉಮಾ ರಮೇಶ್ ರೆಡ್ಡಿ ಅವರು ‘45’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಭರ್ಜರಿ ಕ್ಲೈಮ್ಯಾಕ್ಸ್ ಇರಲಿದೆ ಎನ್ನಲಾಗಿದೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಸದ್ಯ ಉಪ್ಪಿ ಅವರು ‘ಯುಐ’ ಚಿತ್ರದಲ್ಲೂ ನಟಿಸಿದ್ದಾರೆ. ಈ ಸಿನಿಮಾ ಅಕ್ಟೋಬರ್ನಲ್ಲಿ ರಿಲೀಸ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:19 pm, Wed, 18 September 24