AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿಗೆ ಟಿವಿ ಏನೋ ಬಂತು, ಈಗ ಮತ್ತೊಂದು ಬೇಡಿಕೆ ಇಟ್ಟ ದರ್ಶನ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ತೂಗುದೀಪ ಬಳ್ಳಾರಿ ಜೈಲಿನಲ್ಲಿ ದಿನ ದೂಡುತ್ತಿದ್ದು, ಇದೀಗ ಜೈಲು ಅಧಿಕಾರಿಗಳ ಬಳಿ ಹೊಸ ಬೇಡಿಕೆಯೊಂದನ್ನು ದರ್ಶನ್ ಇಟ್ಟಿದ್ದಾರೆ. ಇಷ್ಟು ದಿನ ಟಿವಿಗಾಗಿ ಒತ್ತಾಯಿಸಿದ್ದ ದರ್ಶನ್​ಗೆ ಟಿವಿಯನ್ನು ಅಧಿಕಾರಿಗಳು ನೀಡಿದ್ದಾರೆ.

ಜೈಲಿಗೆ ಟಿವಿ ಏನೋ ಬಂತು, ಈಗ ಮತ್ತೊಂದು ಬೇಡಿಕೆ ಇಟ್ಟ ದರ್ಶನ್
ಮಂಜುನಾಥ ಸಿ.
|

Updated on: Sep 18, 2024 | 8:24 PM

Share

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ 100 ದಿನಗಳಾಗಿವೆ. ಈ 100 ದಿನಗಳಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್​ ಅನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರಾಮವಾಗಿದ್ದ ದರ್ಶನ್, ಬಳ್ಳಾರಿ ಜೈಲಿನಲ್ಲಿ ಅದೇ ಆರಾಮವನ್ನು ನಿರೀಕ್ಷಿಸುತ್ತಿದ್ದಂತಿದ್ದು, ಪದೇ ಪದೇ ಜೈಲು ಅಧಿಕಾರಿಗಳ ಬಳಿ ಒಂದಲ್ಲ ಒಂದು ವಸ್ತುವಿಗೆ ಬೇಡಿಕೆ ಇಡುತ್ತಿದ್ದಾರೆ. ಆದರೆ ಜೈಲಧಿಕಾರಿಗಳು ಶಿಸ್ತು ಪಾಲನೆ ಮಾಡುತ್ತಿದ್ದು, ನಿಯಮ ಮೀರಿ ಏನನ್ನೂ ಕೊಡದೇ ಇರುವ ನಿರ್ಧಾರ ಮಾಡಿದ್ದಾರೆ.

ತಮ್ಮ ಬ್ಯಾರಕ್​ನಲ್ಲಿ ಟಿವಿ ಅಳವಡಿಸುವಂತೆ ದರ್ಶನ್ ಪದೇ ಪದೇ ಜೈಲಧಿಕಾರಿಗಳ ಬಳಿ ಕೇಳಿ ಕೊಂಡಿದ್ದರು. ಟಿವಿ ಅಳವಡಿಸಲಾಗಿತ್ತಾದರೂ ಆ ಟಿವಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಹಲವು ದಿನಗಳಿಂದ ಈ ಬಗ್ಗೆ ಬೇಡಿಕೆ ಇಡುತ್ತಲೇ ಬಂದಿದ್ದ ದರ್ಶನ್​ಗೆ ಕೊನೆಗೂ ಜೈಲಧಿಕಾರಿಗಳು ಟಿವಿ ನೀಡಿದ್ದಾರೆ. ಇರುವುದರಲ್ಲೇ ಚೆನ್ನಾಗಿ ಕೆಲಸ ಮಾಡುವ ಟಿವಿಯೊಂದನ್ನು ದರ್ಶನ್​ ಇರುವ ಕೋಣೆಯಲ್ಲಿ ಅಳವಡಿಸಿದ್ದಾರೆ. ದರ್ಶನ್ ಕೋಣೆಯಲ್ಲಿ ಟಿವಿ ಅಳವಡಿಸಿದ್ದೇನೋ ಆಗಿದೆ, ಆದರೆ ದರ್ಶನ್​ ಕೇವಲ ಸರ್ಕಾರಿ ಚಾನೆಲ್​ಗಳನ್ನು ಮಾತ್ರವೇ ವೀಕ್ಷಿಸಬೇಕಿದೆ. ಯಾವುದೇ ಖಾಸಗಿ ಚಾನೆಲ್​ಗಳು ಪ್ರಸಾರವಾಗದಂತೆ ಮಾಡಿಫಿಕೇಷನ್ ಮಾಡಲಾಗಿದೆ.

ಇನ್ನು ದರ್ಶನ್, ಜೈಲಧಿಕಾರಿಗಳ ಬಳಿ ತಮಗೆ ಕುರ್ಚಿ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ತಮ್ಮ ಕೋಣೆಯಲ್ಲಿ ಕೂರಲು ಕುರ್ಚಿ ಇಲ್ಲವೆಂದು ಬೆನ್ನು ನೋವಿನ ಸಮಸ್ಯೆ ಇರುವ ಕಾರಣ ಕೂರಲು ಕುರ್ಚಿ ಬೇಕಾಗಿದೆ ಎಂದು ದರ್ಶನ್ ಬೇಡಿಕೆ ಇಟ್ಟಿದ್ದಾರೆ. ನಿನ್ನೆ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾದಾಗಲೂ ಸಹ ನಟ ದರ್ಶನ್ ತಮಗೆ ಕುರ್ಚಿಯ ಅವಶ್ಯಕತೆ ಇದೆಯೆಂದು ನ್ಯಾಯಾಧೀಶರ ಬಳಿ ಕೇಳಿದ್ದಾರೆ. ಜೈಲಧಿಕಾರಿಗಳು ಕುರ್ಚಿ ಕೊಡುತ್ತಿಲ್ಲವೆಂದು ಸಹ ದರ್ಶನ್ ನ್ಯಾಯಾಧೀಶರ ಬಳಿ ಹೇಳಿದ್ದಾರೆ. ಆದರೆ ದರ್ಶನ್​ಗೆ ಚೇರು ಕೊಡಬೇಕೇ ಬೇಡವೆ ಎಂದು ಜೈಲು ಅಧಿಕಾರಿಗಳೇ ನಿರ್ಣಯ ಮಾಡಬೇಕಿದೆ.

ಇದನ್ನೂ ಓದಿ:ದರ್ಶನ್ ತೂಗುದೀಪ ಬಂಧನವಾಗಿ ಇಂದಿಗೆ 100 ದಿನ; ಜೂನ್​ 11ರಿಂದ ಇಲ್ಲಿಯವರೆಗೆ ಏನೆಲ್ಲ ಆಯ್ತು?

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿಸಿ ಪೊಲೀಸರು ಚಾರ್ಜ್​ ಶೀಟ್ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಹಾಕಲಿದ್ದಾರೆ. ಈಗಾಗಲೇ ದರ್ಶನ್ ಬಳಿ ಅಗತ್ಯ ಅರ್ಜಿಗಳಿಗೆ ವಕೀಲರು ಸಹಿ ಹಾಕಿಸಿಕೊಂಡು ಹೋಗಿದ್ದಾರೆ. ನಿನ್ನೆ ನ್ಯಾಯಾಧೀಶರ ಮುಂದೆ ಹಾಜರಾಗಿದ್ದ ದರ್ಶನ್ ಮತ್ತು ಇತರೆ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 30ರ ವರೆಗೆ ಮುಂದುವರೆಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ