ಎಂಥಾ ಸಂಸ್ಕಾರ; ಶಿವರಾಜ್​ಕುಮಾರ್ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಐಶ್ವರ್ಯಾ ಮಗಳು

ನಟಿ ಆರಾಧ್ಯಾ ಬಚ್ಚನ್ ಅವರು ತಾಯಿ ಐಶ್ವರ್ಯಾ ರೈ ಜೊತೆ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅದೇ ರೀತಿ ಆರಾಧ್ಯಾ ಅವರು ಶಿವರಾಜ್​ಕುಮಾರ್ ಆಶೀರ್ವಾದ ಪಡೆಯುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.

ಎಂಥಾ ಸಂಸ್ಕಾರ; ಶಿವರಾಜ್​ಕುಮಾರ್ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಐಶ್ವರ್ಯಾ ಮಗಳು
Follow us
ರಾಜೇಶ್ ದುಗ್ಗುಮನೆ
|

Updated on:Sep 19, 2024 | 10:43 AM

ಐಶ್ವರ್ಯಾ ರೈ ಅವರು ತಮ್ಮ ಮಗಳು ಆರಾಧ್ಯ ಅವರನ್ನು ತುಂಬಾನೇ ಪ್ರೀತಿಯಿಂದ ಬೆಳೆಸಿದ್ದಾರೆ. ಕೆಲವರು ಪ್ರೀತಿ ಕೊಟ್ಟಿದ್ದರೂ ಸಂಸ್ಕಾರ ಕೊಟ್ಟಿರುವುದಿಲ್ಲ. ಆದರೆ, ಐಶ್ವರ್ಯಾ ಹಾಗಲ್ಲ. ಪ್ರೀತಿಯ ಜೊತೆಗೆ ಸಂಸ್ಕಾರವನ್ನೂ ನೀಡಿದ್ದಾರೆ. ಇದಕ್ಕೆ ಸಾಕ್ಷಿ ಆಗುವಂಥ ಘಟನೆ ಸೈಮಾದಲ್ಲಿ ನಡೆದಿದೆ. ಕನ್ನಡದ ಸ್ಟಾರ್ ಹೀರೋ ಶಿವರಾಜ್​ಕುಮಾರ್ ಅವರನ್ನು ನೋಡುತ್ತಿದ್ದಂತೆ ಆರಾಧ್ಯಾ ಅವರು ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಐಶ್ವರ್ಯಾ ರೈ ಹಾಗೂ ಅವರ ಮಗಳು ಆರಾಧ್ಯಾ ಇತ್ತೀಚೆಗೆ ಸೈಮಾ ಅವಾರ್ಡ್ಸ್​​ಗೆ ತೆರಳಿದ್ದರು. ದುಬೈನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಕನ್ನಡದ ಹಲವು ಹೀರೋಗಳು ಇದರಲ್ಲಿ ಭಾಗಿ ಆಗಿದ್ದರು. ಶಿವರಾಜ್​ಕುಮಾರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಐಶ್ವರ್ಯಾ ಹಾಗೂ ಶಿವರಾಜ್​ಕುಮಾರ್ ಅವರ ಭೇಟಿ ಆಗಿದೆ.

ಶಿವರಾಜ್​ಕುಮಾರ್ ಹಾಗೂ ವಿಕ್ರಂ ಭೇಟಿ ಆದರು. ಈ ವೇಳೆ ಅಲ್ಲೇ ಇದ್ದ ಐಶ್ವರ್ಯಾ ರೈ ಅವರು ಶಿವರಾಜ್​ಕುಮಾರ್ ಅವರನ್ನು ನೋಡುತ್ತಿದ್ದಂತೆ ಓಡೋಡಿ ಬಂದು ಶಿವಣ್ಣನಿಗೆ ಶೇಕ್​ಹ್ಯಾಂಡ್ ಮಾಡಿದರು. ಇದರ ಜೊತೆಗೆ ಅಲ್ಲೇ ಇದ್ದ ಮಗಳಿಗೆ ಶಿವರಾಜ್​ಕುಮಾರ್ ಅವರನ್ನು ಪರಿಚಯಿಸಿದರು. ಆಗ ಆರಾಧ್ಯಾ ಅಲ್ಲಿಯೇ ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಶಿವಣ್ಣ ಆರಾಧ್ಯಾಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಆರಾಧ್ಯಾ ಅವರು ಎಲ್ಲೇ ಹೋದರು ತಾಯಿ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ತಾಯಿ ಜೊತೆ ಅನೇಕ ಕಾರ್ಯಕ್ರಮಗಳಲ್ಲಿ ಈ ಮೊದಲು ಭಾಗಿ ಆಗಿದ್ದರು. ಸೈಮಾ ಅವಾರ್ಡ್ಸ್​​ಗೂ ತಾಯಿ ಜೊತೆಯಲ್ಲಿ ಆರಾಧ್ಯಾ ಮಿಂಚಿದ್ದಾರೆ. ಅವರ ಕ್ಯೂಟ್ ಫೋಟೋಗಳು ಈ ಮೊದಲು ವೈರಲ್ ಆಗಿ ಗಮನ ಸೆಳೆದಿದ್ದವು.

ಇದನ್ನೂ ಓದಿ: ಶಿವರಾಜ್​ಕುಮಾರ್ ಜೊತೆ ಸಣ್ಣ ಪಾತ್ರ ಮಾಡಿದ್ದ ಈ ಕಲಾವಿದ ಈಗ ಬಾಲಿವುಡ್​ನ ಸ್ಟಾರ್ ಹೀರೋ

ಶಿವರಾಜ್​ಕುಮಾರ್ ಅವರ ವಿಚಾರಕ್ಕೆ ಬಂದರೆ ಅವರು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರ ಪರಿಚಯ ಅನೇಕರಿಗೆ ಇದೆ. ಹಲವು ಸೆಲೆಬ್ರಿಟಿಗಳು ಶಿವಣ್ಣ ಅವರನ್ನು ನೋಡಿದರೆ ಪರಭಾಷೆಯವರೇ ಬಂದು ಮಾತನಾಡಿಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:29 am, Thu, 19 September 24