ದಾವಣಗೆರೆಯಲ್ಲಿ ನಟ ವಿಷ್ಣುವರ್ಧನ್ ಅಭಿಮಾನಿ ಆತ್ಮಹತ್ಯೆ

| Updated By: ಸಾಧು ಶ್ರೀನಾಥ್​

Updated on: Aug 29, 2020 | 4:15 PM

ದಾವಣಗೆರೆ: ನಟ ವಿಷ್ಣುವರ್ಧನ್ ಅಪ್ಪಟ ಅಭಿಮಾನಿ ಲೋಕೇಶ್ (45) ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆಯ ಭಗತ್ ಸಿಂಗ್ ನಗರದ ತಮ್ಮ ಮನೆಯಲ್ಲಿ ತಡ ರಾತ್ರಿ ನೇಣಿಗೆ ಶರಣಾಗಿದ್ದಾರೆ. ಲೋಕೇಶ್‌ ದಾವಣಗೆರೆ ಕೇಂದ್ರ ಬಸ್ ನಿಲ್ದಾಣದ ಬಳಿ ಪಾನ್ ಶಾಪ್ ನಡೆಸುತ್ತಿದ್ದರು. ಪ್ರತಿ ನಿತ್ಯ ನಟ ವಿಷ್ಣು ವರ್ಧನ್ ತಮ್ಮ ಸಿನಿಮಾಗಳಲ್ಲಿ ಧರಿಸುವ ಉಡುಪುಗಳಂತೆ ಬಟ್ಟೆ ಹಾಕಿ‌ ಗಮನ ಸೆಳೆಯುತ್ತಿದ್ದರು. ಇದರಿಂದಲೇ ಜನರೆಲ್ಲ ಅವರನ್ನು ವಿಷ್ಣು ಅಭಿಮಾನಿ ಅಂತಿದ್ರು. ಆದ್ರೆ ನಿನ್ನೆ ತಡ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ […]

ದಾವಣಗೆರೆಯಲ್ಲಿ ನಟ ವಿಷ್ಣುವರ್ಧನ್ ಅಭಿಮಾನಿ ಆತ್ಮಹತ್ಯೆ
Follow us on

ದಾವಣಗೆರೆ: ನಟ ವಿಷ್ಣುವರ್ಧನ್ ಅಪ್ಪಟ ಅಭಿಮಾನಿ ಲೋಕೇಶ್ (45) ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆಯ ಭಗತ್ ಸಿಂಗ್ ನಗರದ ತಮ್ಮ ಮನೆಯಲ್ಲಿ ತಡ ರಾತ್ರಿ ನೇಣಿಗೆ ಶರಣಾಗಿದ್ದಾರೆ.

ಲೋಕೇಶ್‌ ದಾವಣಗೆರೆ ಕೇಂದ್ರ ಬಸ್ ನಿಲ್ದಾಣದ ಬಳಿ ಪಾನ್ ಶಾಪ್ ನಡೆಸುತ್ತಿದ್ದರು. ಪ್ರತಿ ನಿತ್ಯ ನಟ ವಿಷ್ಣು ವರ್ಧನ್ ತಮ್ಮ ಸಿನಿಮಾಗಳಲ್ಲಿ ಧರಿಸುವ ಉಡುಪುಗಳಂತೆ ಬಟ್ಟೆ ಹಾಕಿ‌ ಗಮನ ಸೆಳೆಯುತ್ತಿದ್ದರು. ಇದರಿಂದಲೇ ಜನರೆಲ್ಲ ಅವರನ್ನು ವಿಷ್ಣು ಅಭಿಮಾನಿ ಅಂತಿದ್ರು.

ಆದ್ರೆ ನಿನ್ನೆ ತಡ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ‌. ಈ ಬಗ್ಗೆ ದಾವಣಗೆರೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರಿಂದ ತನಿಖೆ ಆರಂಭವಾಗಿದೆ.

Published On - 4:27 pm, Fri, 28 August 20