ನಟಿ ರಮ್ಯಾ ಕೃಷ್ಣನ್ (Ramya Krishna) ಎಲ್ಲರಿಗೂ ಚಿರಪರಿಚಿತರು. ಅವರು ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು ವಿವಿಧ ರೀತಿಯ ಫೋಟೋ ಹಂಚಿಕೊಳ್ಳುತ್ತಾರೆ. ಈಗ ಅವರು ‘ಜೈಲರ್’ (Jailer Movie) ಸಿನಿಮಾದ ‘ಕಾವಾಲಾ..’ ಹಾಡಿಗೆ ಮಸ್ತ್ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.
ರಜನಿಕಾಂತ್, ಶಿವರಾಜ್ಕುಮಾರ್ ನಟನೆಯ ‘ಜೈಲರ್’ ಸಿನಿಮಾ ಆಗಸ್ಟ್ 10ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಈ ಸಿನಿಮಾದ ‘ಕಾವಾಲಾ..’ ಹಾಡು ಯೂಟ್ಯೂಬ್ನಲ್ಲಿ ರಿಲೀಸ್ ಆಗಿ ಸದ್ದು ಮಾಡಿದೆ. ಕೇವಲ ಯೂಟ್ಯೂಬ್ ಮಾತ್ರವಲ್ಲದೆ ಇನ್ಸ್ಟಾಗ್ರಾಮ್ ರೀಲ್ಸ್ನಲ್ಲೂ ಈ ಹಾಡು ಜನಪ್ರಿಯತೆ ಪಡೆದಿದೆ. ಅನೇಕ ಸೆಲೆಬ್ರಿಟಿಗಳು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ತಮನ್ನಾ ಹಾಕಿದ ಸ್ಟೆಪ್ಸ್ನ ಸಾಕಷ್ಟು ಮಂದಿ ಕಾಪಿ ಮಾಡಿದ್ದಾರೆ.
ನಟಿ ರಮ್ಯಾ ಕೃಷ್ಣನ್ ಅವರು ‘ಕಾವಾಲಾ..’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹಾಗಂತ ಅವರು ತಮನ್ನಾ ಅವರನ್ನು ಕಾಪಿ ಮಾಡಿಲ್ಲ. ತಮ್ಮದೇ ಆದ ರೀತಿಯಲ್ಲಿ ಅವರು ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋಗೆ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. 52ನೇ ವಯಸ್ಸಿನಲ್ಲೂ ರಮ್ಯಾ ಕೃಷ್ಣನ್ ಡ್ಯಾನ್ಸ್ ಮಾಡಿದ ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇದನ್ನೂ ಓದಿ: ‘ನಮ್ಮ ಇಂಡಸ್ಟ್ರಿ ಬೆಳೆಯಬೇಕು’; ರಮ್ಯಾ ಕೇಸ್ ಬಗ್ಗೆ ಪ್ರತಿಕ್ರಿಯಿಸಿದ ಶಿವರಾಜ್ಕುಮಾರ್
ರಮ್ಯಾ ಕೃಷ್ಣನ್ ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಕನ್ನಡದಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಅಂಜನೀಪುತ್ರ’ ಸಿನಿಮಾದಲ್ಲಿ. ಈ ಚಿತ್ರ 2017ರಲ್ಲಿ ರಿಲೀಸ್ ಆಯಿತು. ‘ಜೈಲರ್’ ಸಿನಿಮಾದಲ್ಲೂ ರಮ್ಯಾ ಕೃಷ್ಣನ್ ನಟಿಸಿದ್ದಾರೆ. ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾದಲ್ಲಿ ಅವರು ಮಹೇಶ್ ಬಾಬು ತಾಯಿ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ‘ಜೈಲರ್’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ರಜನಿ-ಶಿವಣ್ಣ ಕಾಂಬಿನೇಷನ್ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ