
[lazy-load-videos-and-sticky-control id=”qWUdRmdxZPA”]
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಜಾಲದ ನಂಟು ಇದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿ ನಟಿ ಸಂಜನಾ ಆಪ್ತ ರಾಹುಲ್ ಈಗಾಗಲೇ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನಟಿ ಸಂಜನಾಗೂ ಸಿಸಿಬಿಯಿಂದ ನೋಟಿಸ್ ಬರುವ ಸಾಧ್ಯತೆ ಇದೆ.
ಹೀಗಾಗಿ ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿಗೆ ಡವಡವ ಶುರುವಾಗಿದೆಯಂತೆ. ಮಾದಕ ಲೋಕದ ರಹಸ್ಯ ತಿಳಿಯಲು ಸಿಸಿಬಿ ಪೊಲೀಸರು ಸಂಜನಾಗೆ ವಿಚಾರಣೆಗೆ ಹಾಜರಾಗುವಂತೆ ಇಂದು ನೋಟಿಸ್ ನೀಡುವ ಸಾಧ್ಯತೆ ಇದೆ. ಸದ್ಯ ಈಗ ಸಂಜನಾ ಬೆಂಗಳೂರಿನ ಇಂದಿರಾನಗರದಲ್ಲಿರುವ ಸಾಯಿ ತೇಜಸ್ವಿ ಅಪಾರ್ಟ್ಮೆಂಟ್ನಲ್ಲಿದ್ದಾರೆ.
Published On - 10:18 am, Fri, 4 September 20