ನಟಿ ಸುಧಾರಾಣಿ ಅವರಿಗೆ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಸಾಕಷ್ಟು ಬೇಡಿಕೆ ಇದೆ. ಈ ಮೊದಲು ಹೀರೋಯಿನ್ ಆಗಿ ಮಿಂಚುತ್ತಿದ್ದ ಅವರು ಈಗ ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ‘ಯುವ’ ಸಿನಿಮಾದಲ್ಲಿ ಕಥಾ ನಾಯಕನ ತಾಯಿ ಪಾತ್ರ ಮಾಡಿದ್ದರು. ಅದೇ ರೀತಿ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡರು. ಅವರು 1999ರಲ್ಲಿ ಡಾ. ಸಂಜಯ್ ಅವರನ್ನು ಮದುವೆ ಆಗಿ ಅಮೆರಿಕಕ್ಕೆ ತೆರಳಿದರು. ಆದರೆ, ಪತಿಯ ಕಿರುಕುಳವನ್ನು ತಡೆಯಲಾರದೆ ವಿಚ್ಛೇದನ ಪಡೆದರು. ಆ ಬಗ್ಗೆ ಅವರು ಮಾತನಾಡಿದ್ದಾರೆ.
ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಸುಧಾರಾಣಿ ಮಾತನಾಡಿದ್ದಾರೆ. ‘ನಾನು ಮದುವೆ ಆಗಿ ಅಮೆರಿಕಕ್ಕೆ ಹೋದಾಗ ಕಷ್ಟ ಆಯ್ತು. ಅಮೆರಿಕಕ್ಕೆ ಹೋದಾಗ ಅಲ್ಲಿ ಎಲ್ಲವನ್ನು ನಾವೇ ಮಾಡಿಕೊಳ್ಳಬೇಕಿತ್ತು. ಕಲಿಯಲಿಲ್ಲ ಅಂದರೆ ಬದುಕೋಕೆ ಸಾಧ್ಯವಿಲ್ಲ. ನನ್ನಲ್ಲಿ ಇನ್ನೋರ್ವ ವ್ಯಕ್ತಿ ಇದ್ದಾನೆ ಅನ್ನೋದು ಆಗ ಗೊತ್ತಾಯಿತು. ನನಗೆ ಹೊಸ ಸುಧಾರಾಣಿ ಕಾಣಿಸಿದರು’ ಎಂದಿದ್ದಾರೆ ಅವರು.
‘ನಾನು ನನ್ನ ಕರಿಯರ್ನಲ್ಲಿ ಮಾಡಿದ ಪಾತ್ರಗಳು ಸಹಾಯ ಮಾಡ್ತು. ನನಗೆ ಅವು ಶಕ್ತಿ ನೀಡಿದವು. ನನ್ನ ಕೈಲಾದ ಪ್ರಯತ್ನ ಮಾಡಿದೆ. ಆಗಲ್ಲ ಎನ್ನುವ ಹಂತಕ್ಕೆ ಹೋದಾಗ ನಾನು ಬಿಟ್ಟೆ. ಆ ವ್ಯಕ್ತಿ ಮಾನಸಿಕ ಸಮಸ್ಯೆಗಳು ಇದ್ದವು. ಟ್ರೀಟ್ಮೆಂಟ್ ನೀಡಬೇಕು ಎಂದಾಗ ಯಾರೂ ರೆಡಿ ಇರಲಿಲ್ಲ. ಸರಿಹೋಗಬಹುದು ಎಂದು ಕಾದೆ. ಆದರೆ, ಸರಿಹೋಗಲ್ಲ ಎಂದಾಗ ನಾನು ಬಂದೆ’ ಎಂದಿದ್ದಾರೆ ಸುಧಾರಾಣಿ.
ಇದನ್ನೂ ಓದಿ: ಮಾಳವಿಕಾ ಮನೆಗೆ ಶ್ರುತಿ, ಸುಧಾರಾಣಿ ಸರ್ಪ್ರೈಸ್ ಎಂಟ್ರಿ; ಹೇಗಿತ್ತು ನೋಡಿ ಜನ್ಮದಿನದ ಸೆಲೆಬ್ರೇಷನ್
‘ಆಗ ನನಗೆ 22 ವರ್ಷ. ಶಿಕ್ಷಣ ಕೂಡ ಪೂರ್ಣಗೊಂಡಿರಲಿಲ್ಲ. ಭಾರತಕ್ಕೆ ಮರಳಿದರೆ ಏನು ಕಥೆ ಎನ್ನುವ ಭಯ ಇತ್ತು. ನಾನು ನನ್ನ ಭಯವನ್ನು ಎದುರಿಸಬೇಕಿತ್ತು. ಕರಿಯರ್ ಇಲ್ಲ ಎಂದರೆ ಅದನ್ನು ಮಾಡಿಕೋ. ಸಮಾಜ ಮಾತನಾಡುತ್ತದೆ. ಒಳಗೆ ನಡೆದಿದ್ದು ಅವರಿಗೆ ಗೊತ್ತಿರುವುದಿಲ್ಲ. ಸಿನಿಮಾ ಕೆಲವರಿಗೆ ಇಷ್ಟ ಆಗುತ್ತದೆ, ಕೆಲವರಿಗೆ ಇಷ್ಟ ಆಗುವುದಿಲ್ಲ. ಅದೇ ರೀತಿ ಕಮೆಂಟ್ಗಳನ್ನು ತೆಗೆದುಕೊಂಡೆ ಎಂದಿದ್ದಾರೆ’ ಸುಧಾರಾಣಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.