ಆದಿತ್ಯಗೆ 25, ಎಸ್​. ನಾರಾಯಣ್​ಗೆ 50ನೇ ಸಿನಿಮಾ; ‘5 ಡಿ’ ಬಿಡುಗಡೆಗೆ ತಯಾರಿ

|

Updated on: Jan 09, 2024 | 6:36 PM

‘ನಾನು ಹೆಮ್ಮೆಯಿಂದ ಇದು ನನ್ನ 25ನೇ ಸಿನಿಮಾ ಎಂದು ಹೇಳಬಹುದು. ಇದರಲ್ಲಿ ಎಲ್ಲ ಕಮರ್ಷಿಯಲ್​ ಅಂಶಗಳು ಇವೆ. ಈ ಚಿತ್ರ ಭಿನ್ನವಾಗಿದೆ. ಇದರಲ್ಲಿ ಕ್ಲೈಮ್ಯಾಕ್ಸ್​ ಬೇರೆ ರೀತಿ ಇದೆ. ಅದು ನನಗೆ ಈ ಚಿತ್ರದಲ್ಲಿ ಫೇವರಿಟ್​. ಯಾರೂ ಊಹಿಸದ ಕ್ಲೈಮ್ಯಾಕ್ಸ್​ ಇದೆ’ ಎಂದು ನಟ ಆದಿತ್ಯ ಹೇಳಿದ್ದಾರೆ.

ಆದಿತ್ಯಗೆ 25, ಎಸ್​. ನಾರಾಯಣ್​ಗೆ 50ನೇ ಸಿನಿಮಾ; ‘5 ಡಿ’ ಬಿಡುಗಡೆಗೆ ತಯಾರಿ
ಆದಿತ್ಯ, ಎಸ್​. ನಾರಾಯಣ್​
Follow us on

ನಟ ಆದಿತ್ಯ ಅಭಿನಯದ ‘5 ಡಿ’ ಸಿನಿಮಾ (5D Movie) ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾಗೆ ಎಸ್​. ನಾರಾಯಣ್​ ನಿರ್ದೇಶನ ಮಾಡಿದ್ದಾರೆ. ಇದು ಆದಿತ್ಯ ನಟನೆಯ 25ನೇ ಸಿನಿಮಾ. ಹಾಗೆಯೇ, ಎಸ್​. ನಾರಾಯಣ್​ (S Narayan) ನಿರ್ದೇಶನದ 50ನೇ ಸಿನಿಮಾ ಇದು. ಹಾಗಾಗಿ ಅವರಿಬ್ಬರಿಗೂ ಈ ಸಿನಿಮಾ ವಿಶೇಷವಾಗಿದೆ. ಬಿಡುಗಡೆ ಹೊಸ್ತಿಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ. ‘5 ಡಿ’ ಎಂದರೆ ಏನು ಎಂಬ ಕುತೂಹಲ ಸಿನಿಪ್ರಿಯರಿಗೆ ಇದೆ. ‘ಅದು ಏನು ಅಂತ ನಾನು ಈಗಲೇ ಹೇಳಲ್ಲ. ಚಿತ್ರಕ್ಕೆ ಆ ಶೀರ್ಷಿಕೆ ಸೂಕ್ತವಾಗಿದೆ’ ಎಂದು ಆದಿತ್ಯ (Aditya) ಹೇಳಿದ್ದಾರೆ. ಈ ಸಿನಿಮಾದಲ್ಲಿ ಆದಿತ್ಯ ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ.

ಫೆಬ್ರವರಿ 9ರಂದು ‘5 ಡಿ’ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಸ್ವಾತಿ ಕುಮಾರ್​ ಬಂಡವಾಳ ಹೂಡಿದ್ದಾರೆ. ‘ಬಹಳ ಹಿಂದೆಯೇ ನಾನು ಎಸ್​. ನಾರಾಯಣ್​ ಸರ್​ ಜೊತೆ ಸಿನಿಮಾ ಮಾಡಬೇಕಿತ್ತು. ಆದರೆ 25ನೇ ಸಿನಿಮಾಗೆ ಅದು ಕೂಡಿಬಂತು. ಅಂಥ ಹಿರಿಯ ನಿರ್ದೇಶಕರ ಜೊತೆ ಸಿನಿಮಾ ಮಾಡಬೇಕು ಎಂದರೆ ನನಗೂ ಕೂಡ ಅನುಭವ ಬೇಕು. ಅದಕ್ಕಾಗಿಯೇ ನನ್ನ 25ನೇ ಸಿನಿಮಾ ಅವರ ಜೊತೆ ಆಗಿದೆ ಎನಿಸುತ್ತದೆ. ಇಡೀ ತಂಡಕ್ಕೆ ನನ್ನ ಧನ್ಯವಾದಗಳು’ ಎಂದು ಆದಿತ್ಯ ಹೇಳಿದ್ದಾರೆ.

‘ನಾನು ಹೆಮ್ಮೆಯಿಂದ ಇದು ನನ್ನ 25ನೇ ಸಿನಿಮಾ ಎಂದು ಹೇಳಬಹುದು. ಇದರಲ್ಲಿ ಎಲ್ಲ ಕಮರ್ಷಿಯಲ್​ ಅಂಶಗಳು ಇವೆ. ಈ ಚಿತ್ರ ಭಿನ್ನವಾಗಿದೆ. ಇದರಲ್ಲಿ ಕ್ಲೈಮ್ಯಾಕ್ಸ್​ ಬೇರೆ ರೀತಿ ಇದೆ. ಅದು ನನಗೆ ಈ ಚಿತ್ರದಲ್ಲಿ ಫೇವರಿಟ್​. ಯಾರೂ ಊಹಿಸದ ಕ್ಲೈಮ್ಯಾಕ್ಸ್​ ಇದೆ. ಕಥಾನಾಯಕನನ್ನು ಬಿಟ್ಟು ಬೇರೆ ಎಲ್ಲರೂ ಕ್ಲೈಮ್ಯಾಕ್ಸ್​ನಲ್ಲಿ ಟೆನ್ಷನ್​ ಆಗಿರುತ್ತಾರೆ. ಅದು ಯಾಕೆ ಎಂಬುದನ್ನು ನೀವು ಸಿನಿಮಾದಲ್ಲೇ ನೋಡಬೇಕು’ ಎಂದಿದ್ದಾರೆ ಆದಿತ್ಯ.

‘ಕಂಟೆಂಟ್​ ಇರುವ ಸಿನಿಮಾಗಳನ್ನು ಜನರು ಇಷ್ಟಪಟ್ಟಿದ್ದಾರೆ. ಆ ನಂಬಿಕೆ ಮೇಲೆ ನಾನು ಈ ಸಿನಿಮಾ ಮಾಡಿದ್ದೇನೆ. ಒಬ್ಬ ನಿರ್ದೇಶಕ 50 ಸಿನಿಮಾ ಮಾಡುವುದು ಸುಲಭವಲ್ಲ. ಕೆಲವೇ ನಿರ್ದೇಶಕರು ಮಾತ್ರ 50 ಸಿನಿಮಾ ಪೂರೈಸಿದ್ದಾರೆ. ದಿಗ್ಗಜರ ಜೊತೆ ಕೆಲಸ ಮಾಡಿದ್ದೇನೆ. ಈ ಜರ್ನಿ ನನಗೆ ಹೆಮ್ಮೆ ಎನಿಸುತ್ತದೆ. ಈಗ 5ಡಿ ಸಿನಿಮಾ ಮಾಡಿದ್ದೇನೆ. ನಾವು ಗೊತ್ತಿಲ್ಲದೇ ಕೆಲವು ತಪ್ಪು ಮಾಡುತ್ತಿರುತ್ತೇವೆ. ಅದರಿಂದ ಸಮಾಜಕ್ಕೆ ತೊಂದರೆ ಆಗುತ್ತದೆ. ಅದನ್ನು ಜನರಿಗೆ ತಿಳಿಸುವ ಕಥೆ ಈ ಸಿನಿಮಾದಲ್ಲಿದೆ’ ಎಂದು ಎಸ್​. ನಾರಾಯಣ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ