ಅನುಶ್ರೀ ಬಳಿಕ ಮದುವೆ ಬಗ್ಗೆ ಬಿಗ್ ಅಪ್​ಡೇಟ್ ಕೊಟ್ಟ ರಚಿತಾ ರಾಮ್

ನಟಿ ರಚಿತಾ ರಾಮ್ ಅವರು ಮದುವೆ ಬಗ್ಗೆ ದೊಡ್ಡ ಅಪ್​ಡೇಟ್ ಒಂದನ್ನು ಕೊಟ್ಟಿದ್ದಾರೆ. ಬರ್ತ್​ಡೇ ದಿನವೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಭಿಮಾನಿಗಳ ಜೊತೆ ಬರ್ತ್​ಡೇ ಆಚರಿಸಿಕೊಂಡ ಅವರು ಮದುವೆ ಬಗೆಗಿನ ಪ್ಲ್ಯಾನ್ ಕುರಿತು ಅಪ್​ಡೇಟ್ ಕೊಟ್ಟಿದ್ದಾರೆ.  ಇದು ಫ್ಯಾನ್ಸ್​ಗೆ ಖುಷಿ ಕೊಟ್ಟಿದೆ.

ಅನುಶ್ರೀ ಬಳಿಕ ಮದುವೆ ಬಗ್ಗೆ ಬಿಗ್ ಅಪ್​ಡೇಟ್ ಕೊಟ್ಟ ರಚಿತಾ ರಾಮ್
ರಚಿತಾ ರಾಮ್

Updated on: Oct 03, 2025 | 1:02 PM

ಆ್ಯಂಕರ್ ಅನುಶ್ರೀ ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ಮೊದಲಿನಿಂದಲೂ ಕೇಳುತ್ತಾ ಬರಲಾಗುತ್ತಾ ಇತ್ತು. ಕೊನೆಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಆಗಸ್ಟ್ 28ರಂದು ಅವರು ವಿವಾಹ ಆದರು. ಈಗ ರಚಿತಾ ರಾಮ್ (Rachita Ram) ಅವರು ವಿವಾಹದ ಬಗ್ಗೆ ಮಾಹಿತಿ ನೀಡಿದ್ದಾರೆ. ಬರ್ತ್​ಡೇ ಸಮಯದಲ್ಲೇ ಮಾಹಿತಿ ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ತಲೆಯಲ್ಲಿ ಹುಳು ಬಿಟ್ಟುಕೊಂಡಿದ್ದಾರೆ.

ರಚಿತಾ ರಾಮ್​ಗೆ ಈಗ 33 ವರ್ಷ. ಅವರು ಇನ್ನೂ ಮದುವೆ ಬಗ್ಗೆ ಚಿಂತಿಸಿಲ್ಲ. ಅವರು ತಮ್ಮ ಪಾಲಿಗೆ ಬಂದ  ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಈಗ ಅವರು ವಿವಾಹದ ಬಗ್ಗೆ ಗಂಭೀರವಾಗಿ ಯೋಚಿಸಿದಂತೆ ಇದೆ. ಬರ್ತ್​ಡೇದಿನ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ಅವರು, ‘ವಿವಾಹ ಆಗಬೇಕು ಅಂತ ನಿರ್ಧರಿಸಿದ್ದೇನೆ.  ಆದಷ್ಟು ಬೇಗ ಮದುವೆ ಆಗುತ್ತೇನೆ. ಮನೆಯಲ್ಲಿ ಹುಡುಗನ ಹುಡುಕುತ್ತಾ ಇದ್ದಾರೆ. ನಾನು ಅರೇಂಜ್ ಮ್ಯಾರೇಜ್ ಆಗ್ತೀನಿ’ ಎಂದು ಹೇಳಿದ್ದಾರೆ.

ಈ ಮೊದಲು ಅನುಶ್ರೀ ಕೂಡ ಅರೇಂಜ್ ಮ್ಯಾರೇಜ್ ಆಗ್ತೀನಿ ಎಂದೇ ಹೇಳಿದ್ದರು. ಆ ಬಳಿಕ ಅವರು ಲವ್ ಮ್ಯಾರೇಜ್ ಆಗಿದ್ದರು. ಈಗ ರಚಿತಾ ಮದುವೆ ಬಗ್ಗೆ ಕುತೂಹಲ ಮೂಡಿದೆ. ಅವರು ಮದುವೆ ಆಗುವ ಹುಡುಗನನ್ನು ಮನೆಯವರೇ ನಿರ್ಧರಿಸುತ್ತಾರೋ ಅಥವಾ ಇವರೇ ಆಯ್ಕೆ ಮಾಡಿಕೊಳ್ಳುತ್ತಾರೋ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ
ರಚಿತಾ ರಾಮ್​ಗೆ ಡಿ ಬಾಸ್ ದರ್ಶನ್ ಮೇಲೆ ಯಾಕೆ ಅಷ್ಟು ವಿಶೇಷ ಗೌರವ ಗೊತ್ತಾ?
ಕಾಕ್ರೋಚ್ ಸುಧಿ ಕಾರಣಕ್ಕೆ ಹೊತ್ತಿ ಉರಿಯಿತು ಬಿಗ್ ಬಾಸ್ ಮನೆ
‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

ಮದುವೆ ಬಗ್ಗೆ ರಚಿತಾ ಮಾಹಿತಿ

ಹರಿಪ್ರಿಯಾ ಅವರು ಕನ್ನಡದ ಬೇಡಿಕೆಯ ನಟಿ ಆಗಿದ್ದರು. ವಿವಾಹದ ಬಳಿಕ ಅವರು ಸಿನಿಮಾ ರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಈಗ ಮಗು ಜನಿಸಿದ್ದು, ಅದರ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ರಚಿತಾ ವಿವಾಹ ಆದರೆ ಅವರು ಇಂಡಸ್ಟ್ರಿ ತೊರೆಯಬಾರದು ಎಂಬುದು ಅಭಿಮಾನಿಗಳ ಕೋರಿಕೆ.

ಇದನ್ನೂ ಓದಿ: ರಚಿತಾ ರಾಮ್​ಗೆ ಡಿ ಬಾಸ್ ದರ್ಶನ್ ಮೇಲೆ ಯಾಕೆ ಅಷ್ಟು ವಿಶೇಷ ಗೌರವ ಗೊತ್ತಾ?

ರಚಿತಾ ರಾಮ್ ಅವರಿಗೆ ಈಗ ಪರಭಾಷೆಯಿಂದ ಬೇಡಿಕೆ ಸೃಷ್ಟಿ ಆಗುತ್ತಿದೆ. ತಮಿಳಿನಿ ರಜಿನಕಾಂತ್ ನಟನೆಯ ‘ಕೂಲಿ’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಈಗ ಲೋಕೇಶ್ ಕನಗರಾಜ್ ಹೀರೋ ಆಗಿ ನಟಿಸುತ್ತಿರುವ ತಮಿಳು ಸಿನಿಮಾಗೆ ಇವರು ನಾಯುಕಿ ಎಂಬ ಮಾತುಗಳು ಕೂಡ ಕೇಳಿ ಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.