ಕನ್ನಡದಲ್ಲಿ ಬಣ್ಣ ಹಚ್ಚಿದ ನಟಿಗೆ ಕಿರುಕುಳ ನೀಡಿದ ಆಂಧ್ರದ ಮೂರು ಐಪಿಎಸ್ ಅಧಿಕಾರಿಗಳು ವಜಾ

|

Updated on: Sep 16, 2024 | 5:01 PM

ಕಾದಂಬರಿ ಅವರು ಕನ್ನಡದಲ್ಲಿ ‘ಊಜಾ’ ಹೆಸರಿನ ಸಿನಿಮಾ ಮಾಡಿದ್ದಾರೆ. ತೆಲುಗಿನಲ್ಲಿ ‘ಆಟ’, ಮಲಯಾಳಂನಲ್ಲಿ ‘ಐ ಲವ್​ ಯೂ’ ಹೆಸರಿನ ಸಿನಿಮಾ ಮಾಡಿದ್ದಾರೆ. ಇದರ ಜೊತೆಗೆ ತೆಲುಗು ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ಅವರು ಈಗ ಮುಂದೆ ಬಂದು ಈ ಬಗ್ಗೆ ಮಾತನಾಡಿದ್ದಾರೆ.

ಕನ್ನಡದಲ್ಲಿ ಬಣ್ಣ ಹಚ್ಚಿದ ನಟಿಗೆ ಕಿರುಕುಳ ನೀಡಿದ ಆಂಧ್ರದ ಮೂರು ಐಪಿಎಸ್ ಅಧಿಕಾರಿಗಳು ವಜಾ
ಕಾದಂಬರಿ
Follow us on

ಚಿತ್ರರಂಗದಲ್ಲಿ ಒಬ್ಬರಾದ ಬಳಿಕ ಒಬ್ಬರು ಲೈಂಗಿಕ ಕಿರಕುಳ, ದೌರ್ಜನ್ಯದ ಆರೋಪ ಮಾಡುತ್ತಿದ್ದಾರೆ. ನಿರ್ಮಾಪಕರು, ನಟರ ವಿರುದ್ಧ ಹಲವು ನಟಿಯರ ವಿರುದ್ಧ ಈ ರೀತಿಯ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಈಗ ಮುಂಬೈ ಮೂಲದ ಕಾದಂಬರಿ ಜೆತ್ವಾನಿ ಅವರು ಆಂಧ್ರ ಪ್ರದೇಶದ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ಈ ಸಂಬಂಧ ಆ ಮೂವರನ್ನು ಅಮಾನತು ಮಾಡಲಾಗಿದೆ.

ಕಾದಂಬರಿ ಅವರು ಕನ್ನಡದಲ್ಲಿ ‘ಊಜಾ’ ಹೆಸರಿನ ಸಿನಿಮಾ ಮಾಡಿದ್ದಾರೆ. ತೆಲುಗಿನಲ್ಲಿ ‘ಆಟ’, ಮಲಯಾಳಂನಲ್ಲಿ ‘ಐ ಲವ್​ ಯೂ’ ಹೆಸರಿನ ಸಿನಿಮಾ ಮಾಡಿದ್ದಾರೆ. ಇದರ ಜೊತೆಗೆ ತೆಲುಗು ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ಅವರು ಈಗ ಮುಂದೆ ಬಂದು ಈ ಬಗ್ಗೆ ಮಾತನಾಡಿದ್ದಾರೆ. ಅವರನ್ನು ಕಾನೂನು ಬಾಹೀರವಾಗಿ ಬಂಧಿಸಿ, ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.

ಅಮಾನತುಗೊಂಡ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅಪರಾಧವನ್ನು ದಾಖಲಿಸುವ ಮೊದಲೇ ನಟಿಯನ್ನು ಬಂಧಿಸಲು ಆದೇಶ ನೀಡಿದ್ದರು. ಸರಿಯಾದ ಕಾನೂನು ಕಾರ್ಯವಿಧಾನಗಳನ್ನು ಅನುಸರಿಸದೆ ಈ ಮೌಖಿಕ ಸೂಚನೆಗಳನ್ನು ಪಾಲಿಸಿದ್ದಕ್ಕಾಗಿ ಮತ್ತೋರ್ವ ಅಧಿಕಾರಿಯೊಬ್ಬರು ಅಮಾನತುಗೊಂಡಿದ್ದಾರೆ. ಮತ್ತೋರ್ವ ಅಧಿಕಾರಿಯಿಂದಲೂ ಅಧಿಕಾರದ ದುರುಪಯೋಗ ಆಗಿರೋದು ಕಂಡು ಬಂದಿದೆ. ಹೀಗಾಗಿ, ಅವರನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ನಲ್ಲಿ ನಟಿಯರ ರಕ್ಷಣೆಗೆ ಬರುತ್ತಿದೆ ಪಾಶ್ ಸಮಿತಿ; ಇಲ್ಲಿದೆ ವಿವರ

ಆಂಧ್ರಪ್ರದೇಶ ಪೊಲೀಸರಿಗೆ ಆನ್‌ಲೈನ್‌ ಮೂಲಕ ಕಾದಂಬರಿ ಅವರು ದೂರನ್ನು ದಾಖಲು ಮಾಡಿದ್ದರು. ಆ ಬಳಿಕ ಪೊಲೀಸ್ ಮಹಾನಿರ್ದೇಶಕ ದ್ವಾರಕಾ ತಿರುಮಲ ರಾವ್ ಅವರು ಈ ಕ್ರಮ ಕೈಗೊಂಡಿದ್ದಾರೆ. ಗೃಹ ಸಚಿವೆ ವಿ.ಅನಿತಾ ಅವರು ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿತ್ತು.

ಏನಿದು ಪ್ರಕರಣ?

ಕಾದಂಬರಿ ವಿರುದ್ಧ ನಿರ್ಮಾಪಕ-ರಾಜಕಾರಣಿ ಫೋರ್ಜರಿ ಆರೋಪ ಮಾಡಿದ್ದರು.  ಈ ಪ್ರಕರಣಕ್ಕೆ ಸಂಬಂಧಿಸಿ ಅವರ ವಿರುದ್ಧ ಕೇಸ್ ದಾಖಲಾಗಿತ್ತು.  ನಂತರ ಅವರನ್ನು ಬಂಧಿಸಿ ವಿಜಯವಾಡಕ್ಕೆ ತರಲಾಗಿತ್ತು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಆರೋಪವನ್ನು ಅವರು ಅಲ್ಲಗಳೆದಿದ್ದರು. ‘ಬಾಂದ್ರಾ ಕುರ್ಲಾ ಪೊಲೀಸ್ ಠಾಣೆಯಲ್ಲಿ ನಾನು ಫೈಲ್ ಮಾಡಿದ ಕೇಸ್​ಗೆ ವಿರುದ್ಧವಾಗಿ ಅವರು ಈ ರೀತಿ ಕೇಸ್ ಹಾಕಿದ್ದಾರೆ. ಈ ನಿರ್ಮಾಪಕನಿಗೆ ಪೊಲೀಸರು ಬೆಂಬಲವಾಗಿ ನಿಂತಿದ್ದಾರೆ’ ಎಂದು ಕಾದಂಬರಿ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:00 pm, Mon, 16 September 24