ಸ್ಯಾಂಡಲ್​ವುಡ್​ನಲ್ಲಿ ನಟಿಯರ ರಕ್ಷಣೆಗೆ ಬರುತ್ತಿದೆ ಪಾಶ್ ಸಮಿತಿ; ಇಲ್ಲಿದೆ ವಿವರ

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರಿಗೆ ಆಗುತ್ತಿರುವ ಕಿರುಕುಳದ ಬಗ್ಗೆಹೇಮಾ ಸಮಿತಿ ವರದಿ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದೆ. ಈ ಸಭೆಗೆ ರಾಕ್​ಲೈನ್​ ವೆಂಕಟೇಶ್ ಅವರ ನೇತೃತ್ವ ಇತ್ತು. ಸಭೆಯ ನಂತರ ಸುದ್ದಿಗೋಷ್ಠಿ ನೀಡಿ ಮಾಹಿತಿ ನೀಡಲಾಗಿದೆ.

ಸ್ಯಾಂಡಲ್​ವುಡ್​ನಲ್ಲಿ ನಟಿಯರ ರಕ್ಷಣೆಗೆ ಬರುತ್ತಿದೆ ಪಾಶ್ ಸಮಿತಿ; ಇಲ್ಲಿದೆ ವಿವರ
ಸ್ಯಾಂಡಲ್​ವುಡ್​ನಲ್ಲಿ ನಟಿಯರ ರಕ್ಷಣೆಗೆ ಬರುತ್ತಿದೆ ಪಾಶ್ ಸಮಿತಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Sep 16, 2024 | 3:02 PM

ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದೆ. ಈ ಸಮಿತಿ ಸಾಕಷ್ಟು ವಿಚಾರಗಳನ್ನು ರಿವೀಲ್ ಮಾಡಿದೆ. ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರಿಗೆ ಆಗುತ್ತಿರುವ ಕಿರುಕುಳದ ಬಗ್ಗೆ ವಿವರಣೆ ನೀಡಲಾಗಿದೆ. ಅದೇ ರೀತಿ ಕನ್ನಡದಲ್ಲೂ ಒಂದು ಸಮಿತಿ ಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಇಂದು (ಸೆಪ್ಟೆಂಬರ್ 16) ಸಭೆ ಕರೆಯಲಾಗಿದೆ. ಈ ಸಭೆಗೆ ರಾಕ್​ಲೈನ್​ ವೆಂಕಟೇಶ್ ಅವರ ನೇತೃತ್ವ ಇತ್ತು. ಸಭೆಯ ನಂತರ ಸುದ್ದಿಗೋಷ್ಠಿ ನೀಡಿ ಮಾಹಿತಿ ನೀಡಲಾಗಿದೆ.

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮಾತನಾಡಿದ್ದಾರೆ. ‘ಚಿತ್ರರಂಗಕ್ಕೆ ಹೆಣ್ಣು ಮಕ್ಕಳು ಬರುತ್ತಾರೆ ಎಂದರೆ ತಂದೆ-ತಾಯಿ ಸುಲಭದಲ್ಲಿ ಕಳುಹಿಸಬೇಕು. ಆ ರೀತಿ ಚಿತ್ರರಂಗ ಆಗಬೇಕು. ಎಲ್ಲರೂ ಡಾಕ್ಟರ್ ಆಗಿ, ಇಂಜಿನಿತರ್ ಆಗಿ ಎನ್ನುತ್ತಾರೆ. ಆದರೆ, ಕೆಲವೇ ಕೆಲವರು ಮಾತ್ರ ನಟನೆಗೆ ಹೋಗಿ ಎಂದು ಹೇಳುತ್ತಾರೆ. ಚಿತ್ರರಂಗದಲ್ಲಿ ಹೆಣ್ಣುಮಕ್ಕಳು ಸುರಕ್ಷಿತವಾಗಿ ಇರ್ತಾರಾ ಎಂಬ ಪ್ರಶ್ನೆ ಮೂಡುವಂತೆ ಆಗಿದೆ’ ಎಂದಿದ್ದಾರೆ ನಾಗಲಕ್ಷ್ಮಿ.

‘ಕನ್ನಡ ಚಿತ್ರರಂಗದಲ್ಲಿ ಪಾಶ್ ಕಮಿಟಿ ಮಾಡಲಾಗುತ್ತಿದೆ. ವಾಣಿಜ್ಯ ಚಿತ್ರರಂಗಕ್ಕೆ ಪತ್ರ ಬರೆದಿದ್ದೇವೆ.  ಇವತ್ತು ಮೀಟಿಂಗ್​ಗೆ ಬಹಳ ಕಡಿಮೆ ನಟಿಯರು ಬಂದಿದ್ದಾರೆ. ಹೊರದೇಶದಲ್ಲಿ ಪ್ರೋಗ್ರಾಂ (ಸೈಮಾ) ಇತ್ತು. ಹೀಗಾಗಿ, ಅಲ್ಲಿಗೆ ಹೋಗಿದ್ದಾರೆ ಎಂದರು. ನನಗೆ ಅನಾರೋಗ್ಯ ಆಗಿದೆ. ಆದರೂ ಬಂದಿದ್ದೇನೆ. ಮುಂದಿನ ಸಭೆಯಲ್ಲಿ ಎಲ್ಲರೂ ಬರುವಂತೆ ಆಗಬೇಕು’ ಎಂದರು ಅವರು.

‘ಕಮಿಟಿ ಹೇಗೆ ಇರಬೇಕು ಎನ್ನುವ ಕುರಿತು ಕಾನೂನು ಇದೆ. ಅದೇ ರೀತಿಯಲ್ಲಿ ಸಮಿತಿ ರಚನೆ ಆಗಲಿದೆ. ಇದು ನಟಿಯರಿಗೆ ಫ್ಯಾಮಿಲಿ. ನಟಿಯರು ಸಿನಿಮಾದಲ್ಲಿ ನಟಿಸಬೇಕು ಎಂದಾಗ 17 ಪಾಯಿಂಟ್ಸ್​ ಇದೆ. ಯಾವ ಯಾವ ಫೆಸೆಲಿಟಿ ನೀಡಬೇಕು ಎಂಬುದರ ಉಲ್ಲೇಖ ಇದೆ. ಪಾಶ್ ಕಮಿಟಿ ಇರುತ್ತದೆ. ಸರ್ಕಾರದ ಗೆಜೆಟ್​ನಲ್ಲಿ ಈ ಸಮಿತಿ ಬರುತ್ತದೆ. ದೂರು ಬಂದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಿಎಂ ಭೇಟಿಯಾದ ನಟ-ನಟಿಯರು, ಕೇರಳದ ಹೇಮಾ ಸಮಿತಿ ಮಾದರಿ ಸಮಿತಿ ರವಿಸುವಂತೆ ಮನವಿ

‘ಸಮಿತಿ ಮಾಡಲೇಬೇಕು. ಅದನ್ನು ಯಾರೂ ಮಾಡಲ್ಲ ಎಂದು ಹೇಳೋಕೆ ಆಗಲ್ಲ. ಮಹಿಳೆಯರಿಗೆ ರಕ್ಷಣೆ ನೀಡಲು ಇದನ್ನು ಮಾಡಲೇಬೇಕು. ಇದನ್ನು ಮಾಡೇ ಮಾಡುತ್ತೇವೆ. ಈ ಸಮಿತಿಗೆ ಹಿರಿಯ ನಟಿ ಅಧ್ಯಕ್ಷರಾಗಿರಬೇಕು. ಅರ್ಧದಷ್ಟು ಸದಸ್ಯರು ಮಹಿಳೆಯರಾಗಬೇಕು. ಮಹಿಳೆಯರ ಪರ ಹೋರಾಡುವ ಒಬ್ಬರು ಈ ಸಮಿತಿಯಲ್ಲಿ ಇರಬೇಕು’ ಎಂದು ಮಾಹಿತಿ ನೀಡಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.