ಅಗಸ್ತ್ಯ ನಟನೆ, ನಿರ್ದೇಶನದ ‘ಮಾರಿಗೆ ದಾರಿ’ ಸಿನಿಮಾದ ಫಸ್ಟ್​ ಲುಕ್​ ಟೀಸರ್​​ ಬಿಡುಗಡೆ

|

Updated on: May 28, 2024 | 8:37 PM

‘ಮಾರಿಗೆ ದಾರಿ’ ಸಿನಿಮಾದಲ್ಲಿ ಅಗಸ್ತ್ಯ ಅವರು ಹೀರೋ ಆಗಿ ನಟಿಸಿದ್ದಾರೆ. ನಿರ್ದೇಶನ ಕೂಡ ಅವರದ್ದೇ. ಈಗಾಗಲೇ ಈ ಚಿತ್ರಕ್ಕೆ ಶೂಟಿಂಗ್​ ಮುಕ್ತಾಯ ಆಗಿದೆ. ಈಗ ಫಸ್ಟ್​ ಲುಕ್​ ಟೀಸರ್​ ಬಿಡುಗಡೆ ಮಾಡಲಾಗಿದೆ. ‘ರಾಧಾ ಫಿಲ್ಮ್ಸ್​’ ಮೂಲಕ ‘ಮಾರಿಗೆ ದಾರಿ’ ಸಿದ್ಧವಾಗಿದೆ. ಮಹಾಲಕ್ಷ್ಮಿ, ವರ್ಧನ್, ಕಾಕ್ರೋಚ್ ಸುಧಿ ಮುಂತಾದವರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ಅಗಸ್ತ್ಯ ನಟನೆ, ನಿರ್ದೇಶನದ ‘ಮಾರಿಗೆ ದಾರಿ’ ಸಿನಿಮಾದ ಫಸ್ಟ್​ ಲುಕ್​ ಟೀಸರ್​​ ಬಿಡುಗಡೆ
ಅಗಸ್ತ್ಯ
Follow us on

ಪ್ರತಿದಿನವೂ ಚಿತ್ರರಂಗ ಹೊಸ ಪ್ರತಿಭೆಗಳನ್ನು ಕೈಬೀಸಿ ಕರೆಯುತ್ತದೆ. ಅಂತಹ ಆಕರ್ಷಣೆ ಈ ಬಣ್ಣದ ಲೋಕಕ್ಕೆ ಇದೆ. ಕನ್ನಡ ಚಿತ್ರರಂಗದಲ್ಲಿ (Kannada Film Industry) ಹೊಸಬರು ಆಗಾಗ ಕಮಾಲ್​ ಮಾಡುತ್ತಾರೆ. ಈಗ ಸ್ಯಾಂಡಲ್​ವುಡ್ ಅಂಗಳಲ್ಲಿ ಇನ್ನೊಂದು ಹೊಸ ಟೀಮ್​ನ ಎಂಟ್ರಿ ಆಗಿದೆ. ಮಾರಿಗೆ ದಾರಿ’ (Maarige Daari) ಎಂದು ಟೈಟಲ್​ ಇಟ್ಟುಕೊಂಡು ಈ ತಂಡದವರು ಸಿನಿಮಾ ಮಾಡಿದ್ದಾರೆ. ರಾಜ್​ ಬಿ. ಶೆಟ್ಟಿ ನಟನೆಯ ‘ಟೋಬಿ’ ಸಿನಿಮಾದಲ್ಲಿ ‘ಮಾರಿಗೆ ದಾರಿ..’ ಎಂಬ ಲೈನ್​ ಫೇಮಸ್​ ಆಗಿತ್ತು. ಅದೇ ಈಗ ಹೊಸ ಸಿನಿಮಾಗೆ (Kannada Cinema) ಶೀರ್ಷಿಕೆ ಆಗಿದೆ. ಆ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

‘ಮಾರಿಗೆ ದಾರಿ’ ಸಿನಿಮಾಗೆ ಈಗಾಗಲೇ ಶೂಟಿಂಗ್​ ಮುಕ್ತಾಯ ಆಗಿದೆ. ಈಗ ಈ ಚಿತ್ರತಂಡದವರು ಫಸ್ಟ್​ಲುಕ್​ ಟೀಸರ್​ ಬಿಡುಗಡೆ ಮಾಡಿದ್ದಾರೆ. ಟೈಟಲ್ ಹಾಗೂ ಫಸ್ಟ್​ ಲುಕ್ ನೋಡಿದರೆ ಹೊಸತನ ಕಾಣಿಸುತ್ತಿದೆ. ಚಿತ್ರದ ಟೀಸರ್​ನಲ್ಲಿ ತಂಡದವರು ಕಥೆಯ ಎಳೆಯನ್ನು ಬಿಟ್ಟುಕೊಟ್ಟಿಲ್ಲ. ಬದಲಿಗೆ, ಕಥಾನಾಯಕನ ಪಾತ್ರದ ಝಲಕ್​ ನೀಡಲಾಗಿದೆ. ಈ ಸಿನಿಮಾದಲ್ಲಿ ಮಾಸ್​ ಕಥಾಹಂದರ ಇದೆ ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ.

ಇದನ್ನೂ ಓದಿ: ಚಂದನ್​ ಶೆಟ್ಟಿ ನಟನೆಯ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದ ಟ್ರೇಲರ್​ ಹೇಗಿದೆ ನೋಡಿ..

ಅಗಸ್ತ್ಯ ಅವರು ‘ಮಾರಿಗೆ ದಾರಿ’ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಅವರೇ ಹೀರೋ ಆಗಿಯೂ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅವರ ಕೆಲವು ಲುಕ್​ಗಳು ಫಸ್ಟ್ ಲುಕ್ ಟೀಸರ್​ನಲ್ಲಿ ಹೈಲೈಟ್​ ಆಗಿವೆ. ಈ ಸಿನಿಮಾದಲ್ಲಿ ಕನ್ನಡದ ಸೊಗಡಿನ ಕಹಾನಿ ಇರಲಿದೆ ಎಂಬ ಝಲಕ್​ ಕಾಣಿಸಿದೆ. ಫಸ್ಟ್​ ಲುಕ್ ಮೂಲಕ ಸಿನಿಪ್ರಿಯರ ಕೌತುಕ ಹೆಚ್ಚಿಸಲಾಗಿದೆ.

‘ಮಾರಿಗೆ ದಾರಿ’ ಸಿನಿಮಾದ ಫಸ್ಟ್​ಲುಕ್​ ಟೀಸರ್​:

‘ಮಾರಿಗೆ ದಾರಿ’ ಚಿತ್ರವು ‘ರಾಧಾ ಫಿಲ್ಮ್ಸ್​’ ಬ್ಯಾನರ್​ ಮೂಲಕ ನಿರ್ಮಾಣ ಆಗಿದೆ. ಕನ್ನಡದ ಸಿನಿಪ್ರಿಯರಿಗೆ ಹೊಸತು ಎನಿಸುವ ಕಥೆಯನ್ನು ಈ ಸಿನಿಮಾ ಮೂಲಕ ತೋರಿಸುವುದಾಗಿ ನಿರ್ದೇಶಕರು ಹೇಳಿದ್ದಾರೆ. ಟೀಸರ್​ನಲ್ಲಿ ಆ ಸೂಚನೆ ಕಾಣಿಸಿದೆ. ಅಗಸ್ತ್ಯ ಜೊತೆ ಮಹಾಲಕ್ಷ್ಮಿ, ವರ್ಧನ್, ಕಾಕ್ರೋಚ್ ಸುಧಿ, ಪ್ರದೀಪ್ ಪೂಜಾರಿ, ಬಾಲರಾಜ ವಾಡಿ, ಬೆನಕ ನಂಜಪ್ಪ ಮುಂತಾದ ಕಲಾವಿದರು ನಟಿಸಿದ್ದಾರೆ. ‘ಮಾರಿಗೆ ದಾರಿ’ ಸಿನಿಮಾಗೆ ಜಗದೀಶ್ ಗೌಡ ಅವರು ಛಾಯಾಗ್ರಹಣ ಮಾಡಿದ್ದಾರೆ. ಸ್ವಾಮಿನಾಥನ್ ಆರ್.ಕೆ. ಅವರು ಸಂಗೀತ ನಿರ್ದೇಶನ ಮಾಡಿದ್ದು, ಜಗದೀಶ್ ಗೌಡ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.