‘ಮಾರಿಗೆ ಬಿಡಿ ದಾರಿ’ ಟೋಬಿಯಲ್ಲಿ ರಾಜ್ ಬಿ ಶೆಟ್ಟಿಯ ರಕ್ತ-ಸಿಕ್ತ ಅವತಾರ

Raj B Shetty: ರಾಜ್ ಬಿ ಶೆಟ್ಟಿ ನಟನೆಯ ಹೊಸ ಸಿನಿಮಾ ಟೋಬಿಯ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದೆ.

'ಮಾರಿಗೆ ಬಿಡಿ ದಾರಿ' ಟೋಬಿಯಲ್ಲಿ ರಾಜ್ ಬಿ ಶೆಟ್ಟಿಯ ರಕ್ತ-ಸಿಕ್ತ ಅವತಾರ
ಟೋಬಿ
Follow us
ಮಂಜುನಾಥ ಸಿ.
|

Updated on: Jun 29, 2023 | 5:50 PM

ರಾಜ್ ಬಿ ಶೆಟ್ಟಿ (Raj B Shetty) ನಟನೆಯ ಹೊಸ ಸಿನಿಮಾ ಟೋಬಿಯ (Toby) ಫಸ್ಟ್ ಲುಕ್ ಟೀಸರ್ ಇಂದು (ಜೂನ್ 29) ಬಿಡುಗಡೆ ಆಗಿದೆ. ಟೀಸರ್​ ತುಂಬೆಲ್ಲ ರಕ್ತದ ಕೆಂಪು ರಾಚುತ್ತಿದೆ. ಕಡು ಕೆಂಪು ಬಣ್ಣದ ರಾಜ್ ಬಿ ಶೆಟ್ಟಿಯ ಕಣ್ಣುಗಳು ಅಸೀಮ ದ್ವೇಷವನ್ನು ತುಂಬಿಕೊಂಡಂತೆ ತೋರುತ್ತಿದೆ. ಶೆಟ್ಟರ ಮೂಗಿನ ಹೊಳೆವ ಮೂಗುತಿಯ ಗುಟ್ಟು ಸಿನಿಮಾ ಬಿಡುಗಡೆಯಂದೇ ತಿಳಿಯಬೇಕಿದೆ. ಒಟ್ಟಾರೆ ಗರುಡ ಗಮನ ವೃಷಭ ವಾಹನ ಸಿನಿಮಾದ ಶಿವ ಪಾತ್ರದ ಅಪ್​ಡೇಟೆಡ್ ಆವೃತ್ತಿಯಂತೆ ಟೋಬಿಯಲ್ಲಿ ರಾಜ್ ಬಿ ಶೆಟ್ಟಿ ಕಾಣುತ್ತಿದ್ದಾರೆ.

ಟೀಸರ್ ಅನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಾಜ್ ಬಿ ಶೆಟ್ಟಿ, ‘ಕುರಿಯ ಕೆಣಕಿದ್ದಕ್ಕೆ ಧನ್ಯವಾದಗಳು. ಕುರಿ ಈಗ ಮಾರಿಯಾಗಿ ನಿಮ್ಮ ಮುಂದೆ, ಟೋಬಿ ಬಂದಿದ್ದಾನೆ…. ಮಾರಿಗೆ ದಾರಿ” ಎಂದಿದ್ದಾರೆ. ಮುಂದುವರೆದು, ಕೆಣಕಿದ ಕುರಿ ಈಗ ಮಾರಿಯಾಗಿದೆ. ಟೋಬಿ ಬಂದಾಗಿದೆ, ಮಾರಿಗೆ ದಾರಿ ಬಿಡಿ” ಎಂದು ಸಹ ಬರೆದುಕೊಂಡಿದ್ದಾರೆ.

ಶೆಟ್ಟರ ಟೋಬಿಯ ಫಸ್ಟ್​ ಲುಕ್​ನಲ್ಲಿ ಅವರ ಲುಕ್​ನಷ್ಟೆ ಗಮನ ಸೆಳೆಯುತ್ತಿರುವುದು ಹಿನ್ನೆಲೆ ಸಂಗೀತ. ಇಂಟೆನ್ಸ್ ಆದ ಹಿನ್ನೆಲೆ ಸಂಗೀತ ಕೆಲವೇ ಸೆಕೆಂಡ್​ಗಳ ಫಸ್ಟ್​ ಲುಕ್ ಟೀಸರ್ ನಲ್ಲಿದೆ. ಅಂದಹಾಗೆ ಸಿನಿಮಾಕ್ಕೆ ಸಂಗೀತ ನೀಡಿರುವುದು ಮಿಧುನ್ ಮುಕುಂದನ್. ಈ ಸಿನಿಮಾವು ದ್ವೇಷ ತೀರಿಕೊಳ್ಳುವ ಒಬ್ಬ ಸಾಮಾನ್ಯನ ಕತೆಯನ್ನು ಒಳಗೊಂಡಿದೆ. ಶೆಟ್ಟರ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಆಕ್ಷನ್ ದೃಶ್ಯಗಳು ಇರಲಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಚಿತ್ರೀಕರಣಕ್ಕೆ ಮುಂಚೆಯೇ ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿಗೆ ಸಿನಿಮಾ ತೋರಿಸಿದ ಅರ್ಜುನ್ ಜನ್ಯ

ರಾಜ್ ಬಿ ಶೆಟ್ಟಿಯವರೇ ಕತೆ, ಚಿತ್ರಕತೆಯನ್ನು ಈ ಸಿನಿಮಾಕ್ಕೆ ಬರೆದಿದ್ದು ನಿರ್ದೇಶನದ ಜವಾಬ್ದಾರಿಯನ್ನು ತಮ್ಮದೇ ತಂಡದ ಬಾಸಿಲ್​ಗೆ ನೀಡಿದ್ದಾರೆ. ಸಿನಿಮಾದಲ್ಲಿ ಚೈತ್ರ ಆಚಾರ್ ಹಾಗೂ ಸಂಯುಕ್ತಾ ಹೊರನಾಡು ನಾಯಕಿಯರಾಗಿದ್ದಾರೆ. ಸಿನಿಮಾವನ್ನು ರಾಜ್ ಬಿ ಶೆಟ್ಟಿಯವರ ಲೈಟರ್ ಬುದ್ಧ ಫಿಲಮ್ಸ್ ಹಾಗೂ ಅಗಸ್ತ್ಯ ಫಿಲಮ್ಸ್ ಒಟ್ಟಾಗಿ ನಿರ್ಮಾಣ ಮಾಡುತ್ತಿದೆ. ಸಿನಿಮಾದ ಮೇಲೆ ಭರಪೂರ ನಿರೀಕ್ಷೆಯನ್ನು ಶೆಟ್ಟರು ಇರಿಸಿಕೊಂಡಿದ್ದಾರೆ. ಸಿನಿಮಾ ಆಗಸ್ಟ್ 25ಕ್ಕೆ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ