ಆಂಬುಲೆನ್ಸ್ ಡ್ರೈವರ್ ಕಹಾನಿ; ‘ನಾಟ್ ಔಟ್’ ಹೀರೋ ಜನ್ಮದಿನಕ್ಕೆ ವಿಶೇಷ ಟೀಸರ್

|

Updated on: Jun 25, 2024 | 10:33 PM

ಅಜಯ ಪೃಥ್ವಿ, ರಚನಾ ಇಂದರ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ‘ನಾಟ್​ ಔಟ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಹೀರೋ ಜನ್ಮದಿನಕ್ಕೆ ವಿಶೇಷ ಟೀಸರ್​ ಬಂದಿದೆ. ವಾಸುಕಿ ವೈಭವ್ ಹಾಡಿದ ಶೀರ್ಷಿಕೆ ಗೀತೆ ಈಗಾಗಲೇ ಬಿಡುಗಡೆ ಆಗಿದೆ. ಜ್ಯೂಡಾ ಸ್ಯಾಂಡಿ ಅವರ ಸಂಗೀತ ಈ ಸಿನಿಮಾಗಿದೆ. ಅದಿತಿ ಸಾಗರ್​ ಹಾಡಿದ ಸಾಂಗ್​ ಕೂಡ ಬಿಡುಗಡೆಗೆ ಸಜ್ಜಾಗಿದೆ.

ಆಂಬುಲೆನ್ಸ್ ಡ್ರೈವರ್ ಕಹಾನಿ; ‘ನಾಟ್ ಔಟ್’ ಹೀರೋ ಜನ್ಮದಿನಕ್ಕೆ ವಿಶೇಷ ಟೀಸರ್
ರಚನಾ ಇಂದರ್, ಅಜಯ ಪೃಥ್ವಿ
Follow us on

ಕನ್ನಡದಲ್ಲಿ ಸ್ಟಾರ್​ ನಟರ ಸಿನಿಮಾಗಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂಬ ಮಾತು ಒಂದು ಕಡೆ ಇದೆ. ಆದರೆ ಹೊಸ ಪ್ರತಿಭೆಗಳ ಸಿನಿಮಾಗಳು ಸಾಲು ಸಾಲಾಗಿ ಬರುತ್ತಿವೆ. ಡಿಫರೆಂಟ್​ ಆದ ಕಥಾಹಂದರಗಳು ಇರುವಂತಹ ಸಿನಿಮಾಗಳು ಸಿದ್ಧವಾಗುತ್ತಿವೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ಎಂದರೆ ನಾಟ್​ ಔಟ್​’ (Not Out) ಸಿನಿಮಾ. ಈ ಸಿನಿಮಾದಲ್ಲಿ ಆಂಬ್ಯುಲೆನ್ಸ್​ ಡ್ರೈವರ್​ ಕಥೆ ಇರಲಿದೆ. ಈ ಚಿತ್ರದಲ್ಲಿ ಅಜಯ ಪೃಥ್ವಿ (Ajaya Prithvi) ಅವರು ಹೀರೋ ಆಗಿ ನಟಿಸಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ವಿಶೇಷ ಟೀಸರ್​ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಅವರ ಹುಟ್ಟುಹಬ್ಬಕ್ಕೆ ವಿಶ್​ ಮಾಡಿದ್ದಾರೆ ಚಿತ್ರತಂಡದವರು. ಅಜಯ ಪೃಥ್ವಿ ಜೊತೆ ರಚನಾ ಇಂದರ್ (Rachana Inder), ರವಿಶಂಕರ್, ಕಾಕ್ರೋಚ್ ಸುಧಿ, ಗೋಪಾಲಕೃಷ್ಣ ದೇಶಪಾಂಡೆ, ಪ್ರಶಾಂತ್ ಸಿದ್ದಿ, ಗೋವಿಂದೇಗೌಡ, ಸಲ್ಮಾನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

‘ನಾನ್​ ಔಟ್​’ ಸಿನಿಮಾವನ್ನು ‘ರಾಷ್ಟ್ರಕೂಟ ಪಿಕ್ಚರ್ಸ್’ ಸಂಸ್ಥೆಯ ಮೂಲಕ ರವಿಕುಮಾರ್ ಮತ್ತು ಶಂಶುದ್ದೀನ್ ಅವರು ನಿರ್ಮಿಸಿದ್ದಾರೆ. ಅಂಬರೀಶ್ ಎಂ. ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅಜಯ್ ಪೃಥ್ವಿ ಅವರು ಈ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಅವರ ಹುಟ್ಟುಹಬ್ಬವನ್ನು ಖುಷಿಯಿಂದ ಆಚರಿಸಲಾಗಿದೆ. ಈ ಸಂಭ್ರಮವನ್ನು ಹೆಚ್ಚಿಸಲು ವಿಶೇಷವಾದ ಟೀಸರ್ ಮತ್ತು ಪೋಸ್ಟರ್ ರಿಲೀಸ್​ ಮಾಡಲಾಗಿದೆ. ಈ ಸಿನಿಮಾದಲ್ಲಿ ಡಾರ್ಕ್ ಹ್ಯೂಮರ್ ಕಥಾಹಂದರ ಇರಲಿದೆ. ಜುಲೈ 4ರಂದು ‘ನಾಟ್ ಔಟ್’ ಸಿನಿಮಾದ ಟ್ರೇಲರ್ ರಿಲೀಸ್​ ಆಗಲಿದೆ.

ಪ್ರಚಾರ ಕಾರ್ಯದಲ್ಲಿ ‘ನಾಟ್​ ಔಟ್​’ ಸಿನಿಮಾ ತಂಡ ನಿರತವಾಗಿದೆ. ಇತ್ತೀಚೆಗೆ ವಾಸುಕಿ ವೈಭವ್ ಅವರು ಹಾಡಿದ ಟೈಟಲ್​ ಟ್ರ್ಯಾಕ್​ ಬಿಡುಗಡೆ ಮಾಡಲಾಯಿತು. ಅದನ್ನು ಕೇಳಿ ಸಿನಿಪ್ರಿಯರು ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. ಈಗ ಇದೇ ಸಿನಿಮಾಗಾಗಿ ಅದಿತಿ ಸಾಗರ್ ಹಾಡಿರುವ ಹೊಸ ಹಾಡನ್ನು ಬಿಡುಗಡೆ ಮಾಡಲು ತಯಾರಿ ನಡೆದಿದೆ. ಜೂನ್ 27ರಂದು ‘ದುಃಖ ದುಗುಡಗಳ..’ ಎಂಬ ಈ ಸಾಂಗ್​ ರಿಲೀಸ್​ ಆಗಲಿದೆ.

ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’ ಶೀರ್ಷಿಕೆಯಲ್ಲಿ ಮತ್ತೊಂದು ಸಿನಿಮಾ; ಈ ಬಾರಿಯೂ ಹಾರರ್​

‘ನಾಟ್​ ಔಟ್​’ ಚಿತ್ರಕ್ಕೆ ಜೂಡಾ ಸ್ಯಾಂಡಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ದುಃಖ ದುಗುಡಗಳ..’ ಗೀತೆಗೆ ನಿರ್ದೇಶಕ ಅಂಬರೀಷ್​ ಅವರೇ ಸಾಹಿತ್ಯ ರಚಿಸಿದ್ದಾರೆ. ತಮ್ಮ ಜೀವನವನ್ನೇ ಪಣಕ್ಕಿಟ್ಟು ಮತ್ತೊಬ್ಬರ ಜೀವ ಉಳಿಸುವಂತಹ ಕೆಲಸ ಮಾಡುವ ಆಂಬ್ಯುಲೆನ್ಸ್ ಡ್ರೈವರ್​ಗಳ ಜೀವನದ ಬಗ್ಗೆ ವಿವರಿಸುವಂತಹ ಹಾಡು ಇದಾಗಿರಲಿದೆ. ಈ ಹಾಡಿನ ಬಗ್ಗೆ ನಿರ್ದೇಶಕರು ಸಖತ್​ ಭರವಸೆ ಇಟ್ಟುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.