ಇಂದಿನಿಂದ ಓಟ ಶುರು ಮಾಡಿದ ಸ್ಟೈಲಿಶ್ ಸ್ಟಾರ್, ಕೈ ಹಿಡಿತಾರ ಪ್ರೇಕ್ಷಕ ಪ್ರಭುಗಳು

ಇಂದಿನಿಂದ ಓಟ ಶುರು ಮಾಡಿದ ಸ್ಟೈಲಿಶ್ ಸ್ಟಾರ್, ಕೈ ಹಿಡಿತಾರ ಪ್ರೇಕ್ಷಕ ಪ್ರಭುಗಳು

ಟಾಲಿವುಡ್‌ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಅಲಾ ವೈಕುಂಠಪುರಮುಲೋ ಚಿತ್ರ ಇಂದು ತೆರೆಗೆ ಬರ್ತಿದೆ. ಈಗಾಗಲೇ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಚಿತ್ರ ಒಂದು ದಿನ ಮೊದಲೇ ರಿಲೀಸ್ ಆಗಿದ್ದು, ಎರಡೂ ಚಿತ್ರಗಳಲ್ಲಿ ಯಾವ ಚಿತ್ರ ಪ್ರೇಕ್ಷಕರ ಮನಮುಟ್ಟಲಿದೆ ಅನ್ನೋ ಕ್ಯೂರಿಯಾಸಿಟಿ ಹುಟ್ಟಿಸಿದೆ. ಟಾಲಿವುಡ್ ಅಂಗಳದಲ್ಲಿ ಸಂಕ್ರಾಂತಿ ಸಡಗರಕ್ಕೆ ಇಬ್ಬರು ಬಿಗ್‌ಸ್ಟಾರ್‌ಗಳ ಸಿನಿಮಾಗಳು ರಿಲೀಸ್ ಆಗಿ ಕಮಾಲ್ ಮಾಡಲಿವೆ. ಅದ್ರಲ್ಲಿ ಈಗಾಗ್ಲೇ ಆಕ್ಷನ್ ಪ್ರಿನ್ಸ್ ಮಹೇಶ್‌ ಬಾಬು ಅಭಿನಯದ ಸರಿಲೇರು ನೀಕೆವ್ವರು ಚಿತ್ರ ಒಂದು […]

sadhu srinath

|

Jan 12, 2020 | 8:10 AM

ಟಾಲಿವುಡ್‌ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಅಲಾ ವೈಕುಂಠಪುರಮುಲೋ ಚಿತ್ರ ಇಂದು ತೆರೆಗೆ ಬರ್ತಿದೆ. ಈಗಾಗಲೇ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಚಿತ್ರ ಒಂದು ದಿನ ಮೊದಲೇ ರಿಲೀಸ್ ಆಗಿದ್ದು, ಎರಡೂ ಚಿತ್ರಗಳಲ್ಲಿ ಯಾವ ಚಿತ್ರ ಪ್ರೇಕ್ಷಕರ ಮನಮುಟ್ಟಲಿದೆ ಅನ್ನೋ ಕ್ಯೂರಿಯಾಸಿಟಿ ಹುಟ್ಟಿಸಿದೆ.

ಟಾಲಿವುಡ್ ಅಂಗಳದಲ್ಲಿ ಸಂಕ್ರಾಂತಿ ಸಡಗರಕ್ಕೆ ಇಬ್ಬರು ಬಿಗ್‌ಸ್ಟಾರ್‌ಗಳ ಸಿನಿಮಾಗಳು ರಿಲೀಸ್ ಆಗಿ ಕಮಾಲ್ ಮಾಡಲಿವೆ. ಅದ್ರಲ್ಲಿ ಈಗಾಗ್ಲೇ ಆಕ್ಷನ್ ಪ್ರಿನ್ಸ್ ಮಹೇಶ್‌ ಬಾಬು ಅಭಿನಯದ ಸರಿಲೇರು ನೀಕೆವ್ವರು ಚಿತ್ರ ಒಂದು ದಿನ ಮುಂಚಿತವಾಗಿ ಅಂದ್ರೆ ಜನವರಿ 11ರಂದು ರಿಲೀಸ್ ಆಗಿದೆ. ಸದ್ಯ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಕೂಡ ಸಿಗ್ತಿದೆ.

ಕಳೆದ ಕೆಲ ದಿನಗಳಿಂದ ಮಹೇಶ್‌ ಬಾಬು ಹಾಗೂ ಅಲ್ಲು ಅರ್ಜುನ್‌ ಸಿನಿಮಾಗಳ ನಡುವೆ ವಾರ್‌ ನಡೆಯುತ್ತೆ ಅನ್ನೋ ಮಾತಿಗೆ ಬ್ರೇಕ್‌ ಬಿದ್ದಿದೆ. 2018ರಲ್ಲಿ ರಿಲೀಸ್ ಆಗಿದ್ದ ನಾ ಪೇರು ಸೂರ್ಯ ಸಿನಿಮಾ ನಂತ್ರ ಅಲ್ಲು ಅರ್ಜುನ್‌ ಈ ಚಿತ್ರದಲ್ಲಿ ನಟಿಸ್ತಿದ್ದಾರೆ. ಹೀಗಾಗಿ ಸಹಜವಾಗೇ ಅಲ್ಲು ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಾಗಿದೆ. ಈಗಾಗ್ಲೇ ರಿಲೀಸ್ ಆಗಿರೋ ಟೀಸರ್‌ಗೂ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಕಾರ್ಪೊರೇಟ್ ದಲ್ಲಾಳಿಗಳು ಮತ್ತು ಗ್ರಾಮೀಣ ಪ್ರದೇಶದ ಮುಗ್ಧ ಜನ್ರ ನಟುವಿನ ಕಥಾ ಹಂದರದ ಎಳೆ ಟೀಸರ್‌ನಲ್ಲಿ ನೋಡಿದ ಫ್ಯಾನ್ಸ್‌ ಫರ್ಸ್ಟ್‌ ಡೇ ಫಸ್ಟ್‌ ಶೋ ನೋಡೋದಕ್ಕೆ ರೆಡಿಯಾಗಿದ್ದಾರೆ.

ಒಟ್ನಲ್ಲಿ ಅಲಾ ವೈಕುಂಠಪುರಮುಲೋ ಸಿನಿಮಾ ಒಂದಲ್ಲಾ ಒಂದು ಕಾರಣಕ್ಕೆ ಕ್ಯೂರಿಯಾಸಿಟಿ ಹುಟ್ಟಿಸಿದ್ದು, ನಾಯಕಿಯಾಗಿ ಪೂಜಾ ಹೆಗಡೆ ಹೇಗೆ ಕಮಾಲ್ ಮಾಡಲಿದ್ದಾರೆ. ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಏನ್ ಸ್ಪೆಷಲ್‌ ಕಥೆ ಹೇಳಿ ಸಂಕ್ರಾಂತಿಗೂ ಮುಂಚೆಯೇ ಸಿನಿಮಾ ಕ್ರಾಂತಿಗೆ ಸಜ್ಜಾಗಿದ್ದಾರೆ ಅನ್ನೋದನ್ನ ಕಾದುನೋಡ್ಬೇಕಿದೆ.

Follow us on

Related Stories

Most Read Stories

Click on your DTH Provider to Add TV9 Kannada