ಬಿಗ್ಬಾಸ್: ಕೊನೆಯಲ್ಲಿ ಕೈಕೊಟ್ಟ ಅದೃಷ್ಟ, ರನ್ನರ್ ಅಪ್ ಆದ ಕನ್ನಡತಿ ತನುಜಾ
Bigg Boss Telugu 09: ತೆಲುಗು ಬಿಗ್ಬಾಸ್ನಲ್ಲಿ ಇಬ್ಬರು ಕನ್ನಡತಿಯರು ಭಾಗವಹಿಸಿದ್ದರು. ನಟಿ ಸಂಜನಾ ಗಲ್ರಾನಿ ಮತ್ತು ಕನ್ನಡ ಸಿನಿಮಾ ಮೂಲಕ ನಟನೆ ಆರಂಭಿಸಿದ ಈಗ ತೆಲುಗು ಧಾರಾವಾಹಿಗಳಲ್ಲಿ ಮಿಂಚುತ್ತಿರುವ ಕರ್ನಾಟಕದ ಹುಡುಗಿ ತನುಜಾ ಪುಟ್ಟಸ್ವಾಮಿ ಇಬ್ಬರೂ ಸಹ ತೆಲುಗು ಬಿಗ್ಬಾಸ್ ಫಿನಾಲೆಗೆ ಬಂದಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಇಬ್ಬರಿಗೂ ಅದೃಷ್ಟ ಕೈಕೊಟ್ಟಿದೆ.

ತೆಲುಗು ಬಿಗ್ಬಾಸ್ (Bigg Boss) ಫಿನಾಲೆ ಇಂದು (ಡಿಸೆಂಬರ್ 21) ನಡೆದಿದೆ. ಬರೋಬ್ಬರಿ 106 ದಿನಗಳ ಶೋ ಇದಾಗಿದ್ದು, ಫಿನಾಲೆಗೆ ಕರ್ನಾಟಕದ ಇಬ್ಬರು ಸ್ಪರ್ಧಿಯರು ಬಂದಿದ್ದರು. ಈ ಕಾರಣಕ್ಕೆ ಈ ಬಾರಿಯ ತೆಲುಗು ಬಿಗ್ಬಾಸ್ ಗಮನ ಸೆಳೆದಿತ್ತು. ನಟಿ ಸಂಜನಾ ಗಲ್ರಾನಿ ಮತ್ತು ಕನ್ನಡ ಸಿನಿಮಾ ಮೂಲಕ ನಟನೆ ಆರಂಭಿಸಿದ ಈಗ ತೆಲುಗು ಧಾರಾವಾಹಿಗಳಲ್ಲಿ ಮಿಂಚುತ್ತಿರುವ ಕರ್ನಾಟಕದ ಹುಡುಗಿ ತನುಜಾ ಪುಟ್ಟಸ್ವಾಮಿ ಇಬ್ಬರೂ ಸಹ ತೆಲುಗು ಬಿಗ್ಬಾಸ್ ಫಿನಾಲೆಗೆ ಬಂದಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಇಬ್ಬರಿಗೂ ಅದೃಷ್ಟ ಕೈಕೊಟ್ಟಿದೆ.
ಒಟ್ಟು ಐದು ಜನ ಫಿನಾಲೆಗೆ ಬಂದಿದ್ದರು. ಕಲ್ಯಾಣ್, ಇಮಾನ್ಯುಯೆಲ್, ಸಂಜನಾ ಗಲ್ರಾನಿ, ತನುಜಾ ಮತ್ತು ಪವನ್ ಅವರುಗಳು ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಐವರಲ್ಲಿ ಕಲ್ಯಾಣ್ ಮತ್ತು ತನುಜಾ ನಡುವೆ ಬಹಳ ಗಟ್ಟಿಯಾದ ಸ್ಪರ್ಧೆ ಇತ್ತು. ತನುಜಾ ಅವರು ಗೆಲ್ಲುವ ನಿರೀಕ್ಷೆ ಬಹಳ ಇತ್ತು. ಕಲ್ಯಾಣ್ಗೂ ಸಹ ಸಾಕಷ್ಟು ಅಭಿಮಾನಿಗಳಿದ್ದರು. ಇಂದು ನಡೆದ ಫಿನಾಲೆಯಲ್ಲಿ ಕಲ್ಯಾಣ್ ಅವರು ಬಿಗ್ಬಾಸ್ ತೆಲುಗು ಸೀಸನ್ 09ರ ವಿಜೇತರಾಗಿದ್ದಾರೆ. ತನುಜಾ ಅವರು ರನ್ನರ್ ಅಪ್ ಆಗಿದ್ದಾರೆ. ಆ ಮೂಲಕ ತನುಜಾ ಅಭಿಮಾನಿಗಳಿಗೆ ಭಾರಿ ನಿರಾಸೆ ಆಗಿದೆ.
ಫಿನಾಲೆ ವಾರದಲ್ಲಿ ಒಟ್ಟು ಐದು ಮಂದಿ ಸ್ಪರ್ಧಿಗಳಿದ್ದರು. ಅದರಲ್ಲಿ ಮೊದಲಿಗೆ ಇಮಾನ್ಯುಯೆಲ್ ನಾಲ್ಕನೇ ರನ್ನರ್ ಅಪ್ ಆದರು. ಬಳಿಕ ಸಂಜನಾ ಅವರು ಮೂರನೇ ರನ್ನರ್ ಅಪ್ ಆದರು. ಡಿಮಾನ್ ಪವನ್ ಎರಡನೇ ರನ್ನರ್ ಅಪ್ ಆದರೆ. ವೇದಿಕೆ ಹೋಗಿ ಮೊದಲ ರನ್ನರ್ ಅಪ್ ಆದರು ತನುಜಾ ಪುಟ್ಟಸ್ವಾಮಿ. ಕಲ್ಯಾಣ್ ಅವರು ವಿಜೇತರಾದರು. ತನುಜಾ ಅವರು ಇಡೀ ಸೀಸನ್ ಅದ್ಭುತವಾಗಿ ಆಟವಾಡುತ್ತಾ ಬಂದಿದ್ದರು ಆದರೆ ಕೊನೆಗೆ ರನ್ನರ್ ಅಪ್ ಆದರು.
ಇದನ್ನೂ ಓದಿ:ತಂದೆಯ ವಿರೋಧದ ನಡುವೆ ಸಾಧನೆ: ಕತೆ ಹೇಳಿಕೊಂಡ ತನುಜಾ
ತನುಜಾ ಅವರು ಗೆಲ್ಲುವ ಸ್ಪರ್ಧಿ ಎಂದೇ ಬಿಂಬಿತವಾಗಿದ್ದರು. ಆದರೆ ಕೊನೆಯ ಒಂದು ವಾರದಲ್ಲಿ ತನುಜಾ ಅವರು ಕನ್ನಡಿಗರು, ತೆಲುಗು ರಾಜ್ಯದವರಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಲು ಆರಂಭಿಸಿದರು. ಇದು ತನುಜಾ ಅವರಿಗೆ ಕೊನೆಯಲ್ಲಿ ತುಸು ನೆಗೆಟಿವ್ ಆಯ್ತು. ಆದರೂ ಸಹ ಪರಭಾಷೆ ನಟಿಯಾಗಿ ಫಿನಾಲೆ ವರೆಗೆ ಹೋಗಿದ್ದು ಸಾಮಾನ್ಯ ಸಾಧನೆಯಲ್ಲ.
ಇದರ ಜೊತೆಗೆ ಕಲ್ಯಾಣ್ ಸಹ ಒಳ್ಳೆಯ ಸ್ಪರ್ಧಿಯೇ ಆಗಿದ್ದರು. ಕಾಮನರ್ ಆಗಿ ಬಿಗ್ಬಾಸ್ ಮನೆಗೆ ಹೋಗಿದ್ದ ಕಲ್ಯಾಣ್ ತಮ್ಮ ಆಟ, ವ್ಯಕ್ತಿತ್ವದಿಂದ ಸ್ಪರ್ಧಿಗಳನ್ನು, ಪ್ರೇಕ್ಷಕರನ್ನು ಸೆಳೆದರು. ಅಂತಿಮವಾಗಿ ಬಿಗ್ಬಾಸ್ ವಿನ್ನರ್ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




