ಆತ್ಮಹತ್ಯೆ ಮಾಡಿಕೊಂಡಿದ್ದ ಶ್ರೀಧರ್, ದರ್ಶನ್ ಫಾರ್ಮ್​ಹೌಸ್​ ಮ್ಯಾನೇಜರ್ ಅಲ್ಲ

|

Updated on: Jun 18, 2024 | 7:09 PM

ಏಪ್ರಿಲ್ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಆನೇಕಲ್​ನ ಶ್ರೀಧರ್, ದರ್ಶನ್ ರ ಫಾರಂಹೌಸ್​ನ ಮೇಲ್ವಿಚಾರಣೆ ನಡೆಸುತ್ತಿದ್ದ ಎನ್ನಲಾಗಿತ್ತು. ಆದರೆ ಅದು ಸುಳ್ಳೆನ್ನಲಾಗಿದೆ. ಶ್ರೀಧರ್​ಗೂ, ದರ್ಶನ್​ಗೂ ಯಾವುದೇ ಸಂಪರ್ಕ, ಸಂಬಂಧ ಇಲ್ಲವೆಂದು ಅವರ ಕುಟುಂಬದವರು ಸ್ಪಷ್ಟಪಡಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿದ್ದ ಶ್ರೀಧರ್, ದರ್ಶನ್ ಫಾರ್ಮ್​ಹೌಸ್​ ಮ್ಯಾನೇಜರ್ ಅಲ್ಲ
ಶ್ರೀಧರ್
Follow us on

ದರ್ಶನ್​ರ (Darshan) ಮ್ಯಾನೇಜರ್ ಮಲ್ಲಿ ಕಾಣೆಯಾದ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದ ಬೆನ್ನಲ್ಲೆ, ಇಂದು ಅನೆಕಲ್​ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀಧರ್ ಎಂಬಾತನ ಆತ್ಮಹತ್ಯೆ ಪ್ರಕರಣ ಸುದ್ದಿಯಾಗಿತ್ತು. ಏಪ್ರಿಲ್ 17 ರಂದು ಆನೇಕಲ್ ತಾಲೂಕಿನ ಬಗ್ಗನದೊಡ್ಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಶ್ರೀಧರ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವ್ಯಕ್ತಿ ದರ್ಶನ್​ರ ಫಾರಂಹೌಸ್​ನ ಮೇಲ್ವಿಚಾರಣೆ ನಡೆಸುತ್ತಿದ್ದರು, ಒಂದು ವರ್ಷದ ಕಾಲ ದರ್ಶನ್ ಗಾಗಿ ಕೆಲಸ ಮಾಡಿದ್ದ ಎನ್ನಲಾಗಿತ್ತು. ಆದರೆ ಈಗ ಬೆಳಕಿಗೆ ಬಂದಿರುವ ಸುದ್ದಿಯಂತೆ ಶ್ರೀಧರ್​, ದರ್ಶನ್​ರ ಫಾರಂಹೌಸ್​ನಲ್ಲಿ ಕೆಲಸ ಮಾಡುತ್ತಿರಲಿಲ್ಲ ಎನ್ನಲಾಗಿದೆ.

ದರ್ಶನ್​ ಫಾರಂ ಹೌಸ್​ನಲ್ಲಿ ಶ್ರೀಧರ್ ಕೆಲಸ ಮಾಡಿರಲಿಲ್ಲ ಎನ್ನಲಾಗಿದ್ದು, ಬದಲಿಗೆ ದುರ್ಗ ಕನ್​ಸ್ಟ್ರಕ್ಷನ್​ನಲ್ಲಿ ಕೆಲಸ ಮಾಡುತ್ತಿದ್ದನಂತೆ. ಕಳೆದ ಐದು ವರ್ಷ ರೈಟರ್ ಆಗಿ ಶ್ರೀಧರ್ ಕೆಲಸ ಮಾಡಿದ್ದ, ಅಲ್ಲಿ ವೇತನ ಕೊಡದೇ ಆತನನ್ನು ದುಡಿಸಿಕೊಂಡಿದ್ದ ಆರೋಪವಿದೆ. ದುಡಿಮೆಯ ಬಗ್ಗೆ ಪೋಷಕರು ಪ್ರಶ್ನಿಸಿದಕ್ಕೆ ಆತ್ಮಹತ್ಯೆಗೆ ಸಹ ಪ್ರಯತ್ನ ಪಟ್ಟಿದ್ದ. ವರ್ಷದ ಹಿಂದೆ ಇಲಿ ಪಾಷಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ, ಆತ ಖಿನ್ನತೆಯಲ್ಲಿಯೂ ಇದ್ದ ಎನ್ನಲಾಗುತ್ತಿದೆ.

ಇದನ್ನೂ ಓದಿ:ದರ್ಶನ್ ಪತ್ನಿ ಇರುವ ಅಪಾರ್ಟ್​ಮೆಂಟ್ ನಲ್ಲಿ ದಿನಕ್ಕೊಂದು ಕರ್ಮಕಾಂಡ ನಡೆಯುತ್ತೆ: ಪ್ರಶಾಂತ್ ಸಂಬರ್ಗಿ

ವೇತನ ಕೊಡದೇ ದುಡಿಸಿಕೊಂಡಿದ್ದ ದುರ್ಗ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಬಿಟ್ಟಿದ್ದ ಶ್ರೀಧರ್, ಖಿನ್ನತೆಗೆ ಜಾರಿದ್ದ, ಬಳಿಕ ಮತ್ತೆ ಅದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ, ನಿವೇಶನ ನೀಡಿ ಮನೆ ಕಟ್ಟಿ ಕೊಡುವುದಾಗಿ ಕಂಪೆನಿಯವರು ಹೇಳಿದ್ದರಂತೆ. ಆದರೆ ಕಂಪನಿಯವರು ಮನೆ, ಹಣ ಯಾವುದೂ ನೀಡದೇ ಇದ್ದಿದ್ದಕ್ಕೆ ಶ್ರೀಧರ್ ಬೇಸರಗೊಂಡಿದ್ದ ಎನ್ನಲಾಗಿದೆ.

ಇದೇ ಕಾರಣಕ್ಕೆ ಡೆತ್ ನೋಟ್ ಬರೆದು ಶ್ರೀಧರ್ ಆತ್ಮಹತ್ಯೆಗೆ ಶರಣಾಗಿದ್ದ. ಸಾಯುವ ಮುನ್ನ ವಿಡಿಯೋ ಸಹ ಮಾಡಿದ್ದ. ಶ್ರೀಧರ್​ಗೂ ದರ್ಶನ್​ಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಹಾಗೂ ಶ್ರೀಧರ್ ಕುಟುಂಬದವರು ಸಹ ಸ್ಪಷ್ಟನೆ ನೀಡಿದ್ದಾರೆ. ಸಂಸ್ಥೆಯೊಂದರಿಂದ ಶ್ರೀಧರ್​ಗೆ ಮೋಸವಾಗಿದ್ದು, ಆತನ ಸಾವಿಗೆ ಅದೇ ಕಾರಣ, ಹಾಗಾಗಿ ಶ್ರೀಧರ್ ಸಾವಿಗೆ ನ್ಯಾಯ ಕೊಡಬೇಕೆಂದು ಕುಟುಂಬದವರು ಆರೋಪಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:08 pm, Tue, 18 June 24