‘ಅಪ್ಪು’ ಜೀವನ ಚರಿತ್ರೆ, ಇದು ಅಶ್ವಿನಿ ಕನಸು, ಇರಲಿವೆ ಹಲವು ವಿಶೇಷತೆ

Appu Biography: ಅಪ್ಪು ಕುರಿತು ಹಲವಾರು ಮಂದಿ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಎಷ್ಟೇ ಹೇಳಿದರು, ಎಷ್ಟೇ ಕೇಳಿದರು ಆ ವ್ಯಕ್ತಿಯ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಹೇಳುವುದು ಬಾಕಿ ಉಳಿದಿದೆ. ಇದೀಗ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಅಪ್ಪು ಬಗೆಗಿನ ಜೀವನ ಚರಿತ್ರೆ ಪುಸ್ತಕ ಹೊರತರುತ್ತಿದ್ದಾರೆ.

‘ಅಪ್ಪು’ ಜೀವನ ಚರಿತ್ರೆ, ಇದು ಅಶ್ವಿನಿ ಕನಸು, ಇರಲಿವೆ ಹಲವು ವಿಶೇಷತೆ
Appu Biography

Updated on: Mar 18, 2025 | 9:41 PM

‘ಅಪ್ಪು’ ತಮ್ಮ ಸಿನಿಮಾಗಳು, ಮಾಡಿದ ಸಾಮಾಜಿ ಕಾರ್ಯ, ತೋರಿದ ಸರಳ, ಸ್ನೇಹಮಯಿ ವ್ಯಕ್ತಿತ್ವದಿಂದ ಈಗಾಗಲೇ ಅಮರರಾಗಿದ್ದಾರೆ. ಅಪ್ಪು ಕುರಿತು ಹಲವಾರು ಮಂದಿ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಎಷ್ಟೇ ಹೇಳಿದರು, ಎಷ್ಟೇ ಕೇಳಿದರು ಆ ವ್ಯಕ್ತಿಯ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಹೇಳುವುದು ಬಾಕಿ ಉಳಿದಿದೆ. ಇದೀಗ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಅಪ್ಪು ಅವರ ಜೀವನ ಚರಿತ್ರೆ (ಬಯೋಗ್ರಫಿ) ಹೊರಗೆ ತರುತ್ತಿದ್ದಾರೆ. ಈ ಜೀವನ ಚರಿತ್ರೆ ಹಲವು ವಿಶೇಷತೆಗಳನ್ನು ಒಳಗೊಂಡಿರಲಿದೆ. ಇಲ್ಲಿದೆ ಅದರ ಮಾಹಿತಿ…

ರಾಜ್​ಕುಮಾರ್ ಅವರ ಬಗ್ಗೆ ಪುನೀತ್ ರಾಜ್​ಕುಮಾರ್ ಅವರು ಬರೆದಿರುವ ಅಪರೂಪದ ಪುಸ್ತಕದ ಬಗ್ಗೆ ಹಲವರಿಗೆ ಗೊತ್ತೇ ಇದೆ. ಆ ಪುಸ್ತಕವನ್ನು ಪುನೀತ್ ರಾಜ್​ಕುಮಾರ್ ಮತ್ತು ಪ್ರಕೃತಿ ಬನವಾಸಿ ಅವರು ಒಟ್ಟಿಗೆ ಸಂಪಾದಿಸಿದ್ದರು. ಇದೀಗ ಅಪ್ಪು ಅವರ ಬಯೋಗ್ರಫಿ ಅನ್ನು ಅದೇ ಪ್ರಕೃತಿ ಬನವಾಸಿ ಅವರು ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರೊಟ್ಟಿಗೆ ಸೇರಿ ಬರೆಯುತ್ತಿದ್ದಾರೆ. ಅಪ್ಪು ಅವರ ಬಯೋಗ್ರಫಿಯನ್ನು ಅಶ್ವಿನಿ ಮತ್ತು ಬನವಾಸಿ ಅವರು ಜಂಟಿಯಾಗಿ ಸಂಪಾದಿಸಿದ್ದಾರೆ.

ಇದನ್ನೂ ಓದಿ:ಅಜಾತಶತ್ರು ಪುನೀತ್ ರಾಜ್​ಕುಮಾರ್ 

ಈ ಬಯೋಗ್ರಫಿಯಲ್ಲಿ ಸುಮಾರು 225 ಮಂದಿ ನಟರು, ತಂತ್ರಜ್ಞರು ಅಪ್ಪುಗೆ ಸಂಬಂಧಸಿದವರು ಮಾತನಾಡಿದ್ದಾರೆ ಅಥವಾ ಲೇಖನಗಳನ್ನು ಬರೆದಿದ್ದಾರೆ. ಈ ಎಲ್ಲ ಲೇಖನಗಳನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ ಮತ್ತು ಪ್ರಕೃತಿ ಬನವಾಸಿ ಅವರು ಸಂಪಾದಿಸಿದ್ದಾರೆ. ಅಪ್ಪು ಅವರ ಬಾಲ್ಯದಿಂದ ಆರಂಭಿಸಿ ಕೊನೆಯ ಕ್ಷಣದ ವರೆಗಿನ ಮಾಹಿತಿ ಈ ಪುಸ್ತಕದಲ್ಲಿ ಇರಲಿದೆ. ಈ ಪುಸ್ತಕದ ಮೇಲೆ ಕಳೆದ ಎರಡು ವರ್ಷದಿಂದಲೂ ಕೆಲಸ ಮಾಡುತ್ತಿರುವುದಾಗಿ ಪ್ರಕೃತಿ ಬನವಾಸಿ ಹೇಳಿಕೊಂಡಿದ್ದಾರೆ.

ಈ ಪುಸ್ತಕಕ್ಕಾಗಿ ಅಶ್ವಿನಿ ಅವರು ಮಾತ್ರವೇ ಅಲ್ಲದೆ ಅವರ ಮಕ್ಕಳಿಬ್ಬರೂ ಸಹ ಕೆಲಸ ಮಾಡಿದ್ದಾರೆ. ಡಿಸೈನ್, ಚಿತ್ರಗಳು ಇನ್ನಿತರೆ ಜವಾಬ್ದಾರಿಗಳನ್ನು ಅಪ್ಪು ಅವರ ಇಬ್ಬರು ಪುತ್ರಿಯರು ನೋಡಿಕೊಂಡಿದ್ದಾರೆ. ಅಪ್ಪು ಅವರ ಬಗ್ಗೆ ಎಲ್ಲೂ ಮಾತನಾಡದ ಹಲವರು ಈ ಪುಸ್ತಕಕ್ಕಾಗಿ ಲೇಖನಗಳನ್ನು ನೀಡಿದ್ದಾರೆ. ಅಪ್ಪು ಅವರ ಜೀವನದಲ್ಲಿ ನಡೆದ ಹಲವಾರು ಘಟನೆಗಳು, ಅವರು ಆಡಿದ ಮಾತುಗಳು, ನಂಬಿದ ಆದರ್ಶ ಇನ್ನೂ ಹಲವು ವಿಷಯಗಳನ್ನು ಪುಸ್ತಕ ಒಳಗೊಂಡಿರಲಿದೆ.

ರಶ್ಮಿಕಾ ಮಂದಣ್ಣ ಸೇರಿದಂತೆ ಹಲವಾರು ಕಲಾವಿದರು ಈ ಪುಸ್ತಕಕ್ಕಾಗಿ ಲೇಖನ ಒದಗಿಸಿದ್ದಾರೆ. ಮಾತನಾಡಿದ್ದಾರೆ. ಹಲವಾರು ಮಂದಿ ತಮ್ಮ ಬಳಿ ಇರುವ ಅಪರೂಪದ ಚಿತ್ರಗಳನ್ನು ಪುಸ್ತಕಕ್ಕಾಗಿ ನೀಡಿದ್ದಾರೆ. ‘ಅಂಜನೀಪುತ್ರ’ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್​ನಲ್ಲಿ ತೆಗೆದ ಅಪರೂಪದ ಚಿತ್ರವನ್ನು ಈ ಪುಸ್ತಕದ ಮುಖಪುಟಕ್ಕೆ ಬಳಸಲಾಗಿದೆ. ಇನ್ನೂ ಹಲವು ವಿಶೇಷತೆಗಳನ್ನು ಈ ಪುಸ್ತಕ ಒಳಗೊಂಡಿದ್ದು, ಆದಷ್ಟು ಬೇಗ ಪುಸ್ತಕ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ