ಕೊವಿಡ್ ಸಂಕಷ್ಟದ ಸಂದರ್ಭದಲ್ಲಿ ಆಂಬುಲೆನ್ಸ್ ಚಾಲಕನಾಗುವ ಮೂಲಕ ನಟ ಅರ್ಜುನ್ ಗೌಡ ಎಲ್ಲರಿಗೂ ಮಾದರಿಯಾಗಿದ್ದರು. ಈಗ ಅವರು ಮತ್ತೊಂದು ಮಹತ್ಕಾರ್ಯ ಮಾಡಿದ್ದಾರೆ. 90 ಶವಗಳ ಸುಟ್ಟ ಬೂದಿಯನ್ನು ಕಾಶಿಗೆ ಹೋಗಿ ಬಿಟ್ಟು ಬಂದಿದ್ದಾರೆ. ಅವರ ಕಾರ್ಯಕ್ಕೆ ಎಲ್ಲ ಕಡೆಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.
ಕೊರೊನಾದಿಂದ ಮೃತಪಟ್ಟ ಅನೇಕ ರೋಗಿಗಳನ್ನು ಸುಡಲಾಗಿದೆ. ಹೀಗೆ ಸುಟ್ಟ ನಂತರದಲ್ಲಿ ಅನೇಕ ಕುಟುಂಬದವರು ಬೂದಿ ಪಡೆಯೋಕೆ ಹಿಂಜರಿದಿದ್ದಾರೆ. ಇನ್ನೂ ಕೆಲವು ಅನಾಥ ಶವಗಳು. ಹೀಗೆ ಒಟ್ಟು 90 ಶವಗಳ ಬೂದಿಯನ್ನು ಸಂಗ್ರಹಿಸಿಟ್ಟು, ಅದನ್ನು ಕಾಶಿಗೆ ತೆಗೆದುಕೊಂಡು ಹೋಗಿ ಅರ್ಜುನ್ ಗೌಡ ವಿಸರ್ಜನೆ ಮಾಡಿದ್ದಾರೆ.
ಹಿಂದುಗಳಲ್ಲಿ ಯಾರೇ ಮೃತಪಟ್ಟರೂ ಅವರನ್ನು ಸುಟ್ಟ ನಂತರ ಸಿಗುವ ಬೂದಿಯನ್ನು ಗಂಗೆಯಲ್ಲಿ ಬಿಟ್ಟರೆ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂಬುದು ಅನೇಕರ ನಂಬಿಕೆ. ಈ ಕಾರಣಕ್ಕೆ ಅರ್ಜುನ್ ಅನಾಥರು ಹಾಗೂ ಬೂದಿ ತೆಗೆದುಕೊಳ್ಳಲು ಹಿಂದೇಟು ಹಾಕಿದವರಿಗೆ ಮುಕ್ತಿ ಕೊಡಿಸುವ ಕೆಲಸ ಮಾಡಿದ್ದಾರೆ.
ಕಷ್ಟದಲ್ಲಿದ್ದವರಿಗೆ ನೆರವಾಗಬೇಕು ಎಂದು ಅರ್ಜುನ್ ಗೌಡ ಆಂಬುಲೆನ್ಸ್ ಚಾಲಕನಾಗಿ ಸೇರಿಕೊಂಡಿದ್ದರು. ಅಷ್ಟೇ ಅಲ್ಲ, ಅನಾಥ ಶವಗಳ ಅಂತ್ಯ ಸಂಸ್ಕಾರಕ್ಕೂ ಅವರು ನೆರವಾಗಿದ್ದರು. ಈಗ ಬೂದಿಯನ್ನು ತೆಗೆದುಕೊಂಡು ಹೋಗಿ ಗಂಗೆಯಲ್ಲಿ ಬಿಡುವ ಮೂಲಕ ಸಾರ್ಥಕ ಭಾವನೆ ಪಡೆದಿದ್ದಾರೆ. ಬೇರೆಯವರಿಗೋಸ್ಕರ ನಾವಿದ್ದೇವೆ ಎನ್ನುವ ಭಾವನೆ ನನ್ನದು ಎಂದು ಅವರು ಹೇಳಿದ್ದಾರೆ. ಈ ಫೋಟೋಗಳನ್ನು ಅರ್ಜುನ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡದಲ್ಲಿ ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ದರ್ಶನ್ ಮುಂತಾದ ಸ್ಟಾರ್ ನಟರ ಚಿತ್ರಗಳಲ್ಲಿ ಅಭಿನಯಿಸಿರುವ ಅರ್ಜುನ್ ಗೌಡ ಅವರಿಗೆ ಫಿಟ್ನೆಸ್ ಬಗ್ಗೆ ಅಪಾರ ಆಸಕ್ತಿ. ರುಸ್ತುಂ, ಒಡೆಯ, ಯುವರತ್ನ ಮುಂತಾದ ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: Actor Arjun Gowda: ಜನರ ಕಷ್ಟ ನೋಡಲಾಗದೇ ಆ್ಯಂಬುಲೆನ್ಸ್ ಚಾಲಕನಾದ ಕನ್ನಡ ಸಿನಿಮಾ ನಟ ಅರ್ಜುನ್ ಗೌಡ
ಈ ಗಾಡಿಯಲ್ಲಿ ತುಂಬಾ ಹೆಣ ಸಾಗಿಸಿದ್ದೀನಿ, ಈಗ ಮಕ್ಕಳ ಶವವನ್ನೂ ಸಾಗಿಸಬೇಕಾ? ನಟ ಅರ್ಜುನ್ ಗೌಡ ಆತಂಕ