ಅರ್ಜುನ್​ ಸರ್ಜಾ ಕಟ್ಟಿಸಿದ ಆಂಜನೇಯ ಸ್ವಾಮಿ ಅದ್ಭುತ ದೇವಾಲಯದ ಕುಂಭಾಭಿಷೇಕ ನೋಡಲು ಇಲ್ಲಿದೆ ಅವಕಾಶ

|

Updated on: Jun 29, 2021 | 12:00 PM

Arjun Sarja Anjaneya Temple: ಅರ್ಜುನ್​ ಸರ್ಜಾ ನಿರ್ಮಿಸಿರುವ ಆಂಜನೇಯ ಸ್ವಾಮಿ ದೇವಾಲಯದ ಕುಂಭಾಭಿಷೇಕ ಸಮಾರಂಭಕ್ಕೆ ದಿನಾಂಕ ನಿಗದಿ ಆಗಿದೆ. ಎಲ್ಲರಿಗೂ ಈ ಸಮಾರಂಭದ ನೇರ ಪ್ರಸಾರ ನೋಡಲು ಅವಕಾಶ ಮಾಡಿಕೊಡಲಾಗುತ್ತಿದೆ.

ಅರ್ಜುನ್​ ಸರ್ಜಾ ಕಟ್ಟಿಸಿದ ಆಂಜನೇಯ ಸ್ವಾಮಿ ಅದ್ಭುತ ದೇವಾಲಯದ ಕುಂಭಾಭಿಷೇಕ ನೋಡಲು ಇಲ್ಲಿದೆ ಅವಕಾಶ
ಅರ್ಜುನ್​ ಸರ್ಜಾ
Follow us on

ಬಹುಭಾಷಾ ನಟ ಅರ್ಜುನ್​ ಸರ್ಜಾ ಅವರ ಇಡೀ ಕುಟುಂಬವೇ ಆಂಜನೇಯ ಸ್ವಾಮಿಯ ಭಕ್ತರು. ಸಿನಿಮಾಗಳಲ್ಲಿ ಮಾತ್ರವಲ್ಲದೆ ರಿಯಲ್​ ಲೈಫ್​ನಲ್ಲಿಯೂ ಪವನಪುತ್ರ ಹನುಮಂತನ ಬಗ್ಗೆ ಅಪಾರವಾದ ಭಕ್ತಿ ಹೊಂದಿದ್ದಾರೆ ಅರ್ಜುನ್ ಸರ್ಜಾ. ಹಾಗಾಗಿ ಆಂಜನೇಯನಿಗೆ ಅದ್ಭುತವಾದ ಒಂದು ದೇವಸ್ಥಾನ ನಿರ್ಮಿಸಬೇಕು ಎಂಬುದು ಅವರ ಅನೇಕ ವರ್ಷಗಳ ಕನಸು. ಬಹಳ ಹಿಂದೆಯೇ ಆ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಅಂತೂ ಈಗ ದೇವಾಲಯದ ಕೆಲಸ ಪೂರ್ಣಗೊಂಡಿದೆ. ಈ ಬಗ್ಗೆ ಸ್ವತಃ ಅರ್ಜುನ್​ ಸರ್ಜಾ ಮಾಹಿತಿ ಹಂಚಿಕೊಂಡಿದ್ದಾರೆ.

‘ನನ್ನ ಬಹುದಿನಗಳ ಆಸೆಯಂತೆ, ನಮ್ಮ ಕುಟುಂಬದಿಂದ ನಿರ್ಮಾಣ ಆಗುತ್ತಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯ ಈಗ ಸಂಪೂರ್ಣ ಆಗಿದೆ. ಈ ದೇವಸ್ಥಾನದ ಕುಂಭಾಭಿಷೇಕ ಸಮಾರಂಭವನ್ನು ಜು.1 ಮತ್ತು ಜು.2ರಂದು ಚೆನ್ನೈನಲ್ಲಿ ಇಟ್ಟುಕೊಂಡಿದ್ದೇವೆ. ಸ್ನೇಹಿತರು, ಬಂಧುಗಳು ಹಾಗೂ ಭಕ್ತಾಧಿಗಳನ್ನು ಕರೆದು ತುಂಬ ಅದ್ದೂರಿಯಾಗಿ ಈ ಸಮಾರಂಭ ಮಾಡಬೇಕು ಎಂದುಕೊಂಡಿದ್ದೆ. ಆದರೆ, ಈಗಿರುವ ಕೊರೊನಾ ಪರಿಸ್ಥಿತಿಯಲ್ಲಿ, ಜನರ ಹಿತವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾರನ್ನೂ ಆಹ್ವಾನಿಸೋಕೆ ಸಾಧ್ಯವಾಗುತ್ತಿಲ್ಲ’ ಎಂದು ಅರ್ಜುನ್​ ಸರ್ಜಾ ಹೇಳಿದ್ದಾರೆ.

‘ಆದರೂ ಈ ಸಮಾರಂಭ ಜನರಿಗೆ ಮಿಸ್​ ಆಗಬಾರದು ಎಂದು ಯೂಟ್ಯೂಬ್​ ಮೂಲಕ ಜ.1 ಮತ್ತು 2ರಂದು ಲೈವ್​ ಪ್ರಸಾರ ಮಾಡುತ್ತಿದ್ದೇವೆ. ಈ ಕೊರೊನಾ ಸಂಕಷ್ಟ ಮುಗಿದ ನಂತರ ನೀವು ಕುಟುಂಬ ಸಮೇತ ಬಂದು ನೇರವಾಗಿ ದೇವರ ದರ್ಶನ ಪಡೆದು, ಅನುಗ್ರಹಕ್ಕೆ ಪಾತ್ರರಾಗಬೇಕು’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಇರುವ ತಮ್ಮೆಲ್ಲ ಅಭಿಮಾನಿಗಳಿಗೆ, ಆಂಜನೇಯ ಸ್ವಾಮಿ ಭಕ್ತರಿಗೆ ವಿಡಿಯೋ ಮೂಲಕ ಈ ಸಂದೇಶವನ್ನು ಅರ್ಜುನ್​ ಸರ್ಜಾ ರವಾನಿಸಿದ್ದಾರೆ. ಅವರ ‘ಆ್ಯಕ್ಷನ್​ ಕಿಂಗ್​’ ಯೂಟ್ಯೂಬ್​ ಚಾನಲ್​ನಲ್ಲಿ ಜು.1 ಮತ್ತು ಜ.2ರಂದು ಕುಂಭಾಭಿಷೇಕ ಕಾರ್ಯಕ್ರಮ ನೇರಪ್ರಸಾರ ಆಗಲಿದೆ. ಅದನ್ನು ಕಣ್ತುಂಬಿಕೊಳ್ಳಲು ಮಾರುತಿರಾಯನ ಭಕ್ತರು ಕಾದಿದ್ದಾರೆ. ಅಪ್ಪಟ ಆಂಜನೇಯನ ಭಕ್ತನಾಗಿರುವ ನಟ ಧ್ರುವ ಸರ್ಜಾ ಕೂಡ ಈ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಅರ್ಜುನ್​ ಸರ್ಜಾ ಅವರ ‘ಆ್ಯಕ್ಷನ್​ ಕಿಂಗ್​’ ಯೂಟ್ಯೂಬ್​ ಲಿಂಕ್​:

(https://www.youtube.com/channel/UCvrodPUhIkTCfo0YdjcfUcg)

ಇದನ್ನೂ ಓದಿ:

ಚಿರು ನೆನಪಿಸಿಕೊಂಡು ಭಾವನಾತ್ಮಕ ಸಂದೇಶ ನೀಡಿದ ಅರ್ಜುನ್ ಸರ್ಜಾ

Dhruva Sarja : ಚಿರು ಸಮಾಧಿಗೆ ಧ್ರುವಾ ಸರ್ಜಾ ಕುಟುಂಬಸ್ಥರಿಂದ ಪೂಜೆ