ರೀಲ್ಸ್ ಶೋಕಿದಾರನಿಂದ ಸ್ಯಾಂಡಲ್​ವುಡ್​ಗೆ ಸಂಕಷ್ಟ; ಡಮ್ಮಿ ಗನ್ ಬಳಸೋಕೆ ಇರೋ ನಿಯಮಗಳೇನು?

ಗೀತಾ ಪಿಕ್ಚರ್ಸ್, ಹೊಂಬಾಳೆ ಫಿಲ್ಮ್ಸ್ ನಂತಹ ಬ್ಯಾನರ್​ಗಳ ಸಿನಿಮಾಗಳಿಗೆ ಸಾಹಿಲ್ ಅವರು ಡಮ್ಮಿ ಗನ್ ನೀಡುತ್ತಿದ್ದರು. ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ‘ಕಬ್ಜ’, ‘ಮಫ್ತಿ’ ಸಿನಿಮಾಗಳಲ್ಲಿ ಭರ್ಜರಿಯಾಗಿ ಗನ್ ಬಳಕೆ ಆಗಿತ್ತು. ಈ ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸಿದವರು ಸಾಹಿಲ್. ಅರುಣ್ ಮಾಡಿದ ತಪ್ಪಿನಿಂದ ಇವರಿಗೆ ನೋಟಿಸ್ ಹೋಗಿದೆ.

ರೀಲ್ಸ್ ಶೋಕಿದಾರನಿಂದ ಸ್ಯಾಂಡಲ್​ವುಡ್​ಗೆ ಸಂಕಷ್ಟ; ಡಮ್ಮಿ ಗನ್ ಬಳಸೋಕೆ ಇರೋ ನಿಯಮಗಳೇನು?
ರೀಲ್ಸ್ ಶೋಕಿದಾರನಿಂದ ಸ್ಯಾಂಡಲ್​ವುಡ್​ಗೆ ಸಂಕಷ್ಟ; ಡಮ್ಮಿ ಗನ್ ಬಳಸೋಕೆ ಇರೋ ನಿಯಮಗಳೇನು?
Follow us
|

Updated on:Jul 04, 2024 | 11:01 AM

ರೀಲ್ಸ್ ಮಾಡಿ ಫೇಮಸ್ ಆಗುವ ತವಕದಲ್ಲಿದ್ದ ಅರುಣ್ ಕಟಾರೆ ಇತ್ತೀಚೆಗೆ ಅರೆಸ್ಟ್ ಆಗಿದ್ದಾರೆ. ಸಾರ್ವಜನಿಕವಾಗಿ ರೀಲ್ಸ್ ಮಾಡಲು ಡಮ್ಮಿ ಗನ್ ಬಳಸಿ ಅವರು ಬೆಂಗಳೂರಿನ ಕೊತ್ತನೂರು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಬೀದಿಬೀದಿಯಲ್ಲಿ ಗನ್‌ ಹಿಡಿದು ಓಡಾಡಿದ್ದನ್ನು ಕಂಡು ಜನ ಆತಂಕಕ್ಕೊಳಗಾಗಿದ್ದರು. ಈ ಕಾರಣದಿಂದಲೇ ಅರುಣ್ ಅರೆಸ್ಟ್ ಆಗಿದ್ದರು. ಈಗ ಅರುಣ್ ಮಾಡಿದ ತಪ್ಪಿನಿಂದ ಸ್ಯಾಂಡಲ್​ವುಡ್​ಗೆ ಸಂಕಷ್ಟ ಎದುರಾಗಿದೆ. ಕನ್ನಡದ ಹಿಟ್ ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸುವ ತಂತ್ರಜ್ಞ ಸಾಹಿಲ್ ಅವರಿಗೆ ನೋಟಿಸ್ ಬಂದಿದೆ.

ಹೊಂಬಾಳೆ ಫಿಲ್ಮ್ಸ್, ಗೀತಾ ಪಿಕ್ಚರ್ಸ್ ನಂತಹ ಬ್ಯಾನರ್​ಗಳ ಸಿನಿಮಾಗಳಿಗೆ ಸಾಹಿಲ್ ಅವರು ಡಮ್ಮಿ ಗನ್ ನೀಡುತ್ತಿದ್ದರು. ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ‘ಕಬ್ಜ’, ‘ಮಫ್ತಿ’ ಸಿನಿಮಾಗಳಲ್ಲಿ ಭರ್ಜರಿಯಾಗಿ ಗನ್ ಬಳಕೆ ಆಗಿತ್ತು. ಈ ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸಿದವರು ಸಾಹಿಲ್. ಅರುಣ್ ಮಾಡಿದ ತಪ್ಪಿನಿಂದ ಇವರಿಗೆ ನೋಟಿಸ್ ಹೋಗಿದೆ.

ಇದನ್ನೂ ಓದಿ: ಮೈಮೇಲೆ ಕೆಜಿಗಟ್ಟಲೇ ಚಿನ್ನ, ಕೈಯಲ್ಲಿ ಎಕೆ 47 ಹಿಡ್ಕೊಂಡು ಸುಂದರಿಯರ ಜತೆ ರೀಲ್ಸ್‌ ಮಾಡ್ತಿದ್ದವ ಜೈಲುಪಾಲು!

ಅರುಣ್ ಕಟಾರೆ ಅವರು ಡಮ್ಮಿ ಗನ್​ನ ಬಾಡಿಗೆ ಪಡೆದಿದ್ದು ಸಾಹಿಲ್​ನಿಂದ. ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಲು ಅರುಣ್ ಕಟಾರೆ ಈ ಗನ್ ಬಳಕೆ ಮಾಡಿಕೊಂಡಿದ್ದರು. ಸಾಹಿಲ್ ಅವರಿಂದ ಸಾರ್ವಜನಿಕರಲ್ಲಿ ಆತಂಕ ಎದುರಾಗಿತ್ತು. ಹೀಗಾಗಿ ಅರುಣ್ ಅವರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದರು. ಅರುಣ್ ಅವರ ವಿಚಾರಣೆ ಮಾಡಿದಾಗ ಡಮ್ಮಿ ಗನ್​ನ ಸಾಹಿಲ್​ನಿಂದ ಪಡೆದಿರುವುದಾಗಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಕೊತ್ತನೂರು ಪೊಲೀಸರಿಂದ ಸಾಹಿಲ್​ಗೆ ನೊಟೀಸ್ ನೀಡಲಾಗಿದೆ.

ಸಿನಿಮಾ ಶೂಟಿಂಗ್ ಗನ್ ಬಳಸುವಾಗ ಒಪ್ಪಿಗೆ ಬೇಕೆ?

ಸಿನಿಮಾದಲ್ಲಿ ಯಥೇಚ್ಛವಾಗಿ ಗನ್ ಬಳಕೆ ಆಗುತ್ತದೆ. ಇವರೆಲ್ಲ ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಬರುತ್ತದೆ. ಇದಕ್ಕೆ ನಿರ್ದೇಶಕ ಮಂಸೋರೆ ಅವರು ಮಾಹಿತಿ ನೀಡಿದ್ದಾರೆ. ‘ನೀವು ಏಕಾಏಕಿ ಸಾರ್ವಜನಿಕವಾಗಿ ಹೋಗಿ ಗನ್ ತೋರಿಸಿದರೆ ಜನರು ಭಯ ಬೀಳುತ್ತಾರೆ. ಆ ರೀತಿ ಮಾಡುವಂತಿಲ್ಲ. ಸಾರ್ವಜನಿಕವಾಗಿ ಶೂಟ್ ಮಾಡುವಾಗ ಅದರಲ್ಲೂ ಆ್ಯಕ್ಷನ್ ದೃಶ್ಯಗಳನ್ನು ಮಾಡುವಾಗ ಸ್ಥಳೀಯ ಪೊಲೀಸರಿಂದ ಒಪ್ಪಿಗೆ ಪಡೆಯಬೇಕು. ಯಾವ ರೀತಿಯಲ್ಲಿ ಶೂಟಿಂಗ್ ನಡೆಯಲಿದೆ ಎಂಬುದನ್ನು ಮೊದಲೇ ಮಾಹಿತಿ ನೀಡಬೇಕು’ ಎಂದಿದ್ದಾರೆ ಮಂಸೋರೆ. ಸ್ಟುಡಿಯೋ ಮೊದಲಾದ ಕಡೆಗಳಲ್ಲಿ ನಕಲಿ ಗನ್ ಬಳಸಿ ಶೂಟಿಂಗ್ ಮಾಡೋದಾದರೆ ಯಾವುದೇ ಒಪ್ಪಿಗೆ ಬೇಡ.

ಮಂಸೋರೆ ಅವರು ಕನ್ನಡದಲ್ಲಿ ಹಲವು ಭಿನ್ನ ಸಿನಿಮಾಗಳನ್ನು ನೀಡಿದವರು. ಅವರಿಗೆ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿದೆ. ‘ಹರಿವು’, ಆ್ಯಕ್ಟ್ 1878’, ‘ನಾತಿಚರಾಮಿ’ ರೀತಿಯ ಸಿನಿಮಾಗಳನ್ನು ಅವರು ನಿರ್ಮಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:00 am, Thu, 4 July 24

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ