ಮಧ್ಯ ಬೆರಳು ತೋರಿಸಿದ ಆರ್ಯನ್ ಖಾನ್ ಮೇಲೆ ದೂರು; ಅಲ್ಲೇನಾಯಿತು ವಿವರಿಸಿದ ಝೈದ್ ಖಾನ್

ಶಾರುಖ್ ಖಾನ್ ಮಗ ಆರ್ಯನ್ ಖಾನ್ ವಿವಾದಗಳ ಮೂಲಕವೇ ಹೆಚ್ಚು ಚರ್ಚೆ ಆಗಿದ್ದಾರೆ. ಬೆಂಗಳೂರಿಗೆ ಬಂದಾಗ ಅವರು ಎಡವಟ್ಟು ಮಾಡಿಕೊಂಡರು. ಜನರಿಗೆ ಮಧ್ಯ ಬೆರಳು ತೋರಿಸಿದ್ದರ ವಿಡಿಯೋ ವೈರಲ್ ಆಗಿತ್ತು. ಆರ್ಯನ್ ಖಾನ್ ವಿರುದ್ಧ ಎಲ್ಲರೂ ಕೋಪ ಹೊರಹಾಕಿದ್ದರು. ಈಗ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

ಮಧ್ಯ ಬೆರಳು ತೋರಿಸಿದ ಆರ್ಯನ್ ಖಾನ್ ಮೇಲೆ ದೂರು; ಅಲ್ಲೇನಾಯಿತು ವಿವರಿಸಿದ ಝೈದ್ ಖಾನ್
ಝೈದ್-ಆರ್ಯನ್

Updated on: Dec 06, 2025 | 9:56 AM

ಆರ್ಯನ್ ಖಾನ್ (Aryan Khan) ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅವರು ಎಡವಟ್ಟು ಮಾಡಿಕೊಂಡಿದ್ದರು. ಆರ್ಯನ್ ಖಾನ್ ಜನರತ್ತ ತಿರುಗಿ ಮಧ್ಯ ಬೆರಳು ತೋರಿಸಿ ದುರ್ವತನೆ ತೋರಿಸಿದ್ದರು. ಈ ವೇಳೆ ನಟ ಝೈದ್ ಖಾನ್ ಕೂಡ ಇದ್ದರು. ಈಗ ಆರ್ಯನ್ ಮೇಲೆ ದೂರು ದಾಖಲಾಗಿದೆ. ಈ ಎಲ್ಲಾ ವಿಚಾರವಾಗಿ ಝೈದ್ ಖಾನ್ ಮಾತನಾಡಿದ್ದಾರೆ. ಅವರು ಮಧ್ಯ ಬೆರಳು ತೋರಿದ್ದು ಗೆಳೆಯನಿಗೆ, ಜನರಿಗೆ ಅಲ್ಲ ಎಂದಿದ್ದಾರೆ.

ಘಟನೆ ಏನು?

ಶಾರುಖ್ ಖಾನ್ ಮಗ ಆರ್ಯನ್ ಖಾನ್ ವಿವಾದಗಳ ಮೂಲಕವೇ ಹೆಚ್ಚು ಚರ್ಚೆ ಆಗಿದ್ದಾರೆ. ಬೆಂಗಳೂರಿಗೆ ಬಂದಾಗ ಅವರು ಎಡವಟ್ಟು ಮಾಡಿಕೊಂಡರು. ಜನರಿಗೆ ಮಧ್ಯ ಬೆರಳು ತೋರಿಸಿದ್ದರ ವಿಡಿಯೋ ವೈರಲ್ ಆಗಿತ್ತು. ಆರ್ಯನ್ ಖಾನ್ ವಿರುದ್ಧ ಎಲ್ಲರೂ ಕೋಪ ಹೊರಹಾಕಿದ್ದರು. ಈಗ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

ದೂರು ದಾಖಲು

ಹುಸೇನ್ ಎಂಬುವವರು ಡಿಜಿ, ಐಜಿಪಿ ಮತ್ತು ಪೊಲೀಸ್ ಕಮಿಷನರ್​ಗೆ ದೂರು ನೀಡಿದ್ದಾರೆ. ‘ಆರ್ಯನ್ ಖಾನ್ ದುರ್ವತನೆ ತೋರಿದ್ದಾರೆ. ಮಹಿಳೆಯರಿಗೆ ಅಗೌರವ ತಂದಿದ್ದಾರೆ.ಕಳೆದ ಫೆಬ್ರವರಿಯಲ್ಲಿ ಚಾಮರಾಜಪೇಟೆಯಲ್ಲಿ ಇದೇ ರೀತಿ ಪ್ರಕರಣವಾಗಿತ್ತು.ಆ ವೇಳೆ ಚಾಮರಾಜಪೇಟೆ ವ್ಯಕ್ತಿ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಾಗಿತ್ತು.ಅದೇ ರೀತಿ ಕೇಸ್ ದಾಖಲಿಸಿ ತನಿಖೆ ಮಾಡಬೇಕು’ ಎಂದು ವಕೀಲರು ಮನವಿ ಮಾಡಿದ್ದಾರೆ.

ಝೈದ್ ಖಾನ್ ಹೇಳೋದೇನು?

ಘಟನೆ ನಡೆಯುವಾಗ ರಾಜಕಾರಣಿ ಜಮೀರ್ ಅಹ್ಮದ್ ಮಗ, ನಟ ಝೈದ್ ಖಾನ್ ಕೂಡ ಅಲ್ಲಿಯೇ ಇದ್ದರು. ಅವರು ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ‘ಆರ್ಯನ್ ಖಾನ್​ ನನಗೆ ಹಲವು ವರ್ಷಗಳಿಂದ ಗೊತ್ತು. ನಾವಿಬ್ಬರೂ ಒಂದೇ ಕಡೆ ನಟನೆ ಕಲಿತಿದ್ದೇವೆ. ಅವನು ಬೆಂಗಳೂರಿಗೆ ಬರುತ್ತಿದ್ದೇನೆ ಎಂದು ಮೆಸೇಜ್ ಮಾಡಿದ್ದ. ಹೀಗಾಗಿ ಒಂದು ಓಪನಿಂಗ್ ಸೆರಮನಿಗೆ ಹೋಗಿದ್ದೆವು’ ಎಂದಿದ್ದಾರೆ ಝೈದ್ ಖಾನ್.

ಇದನ್ನೂ ಓದಿ: ಬೆಂಗಳೂರಲ್ಲಿ ಮಧ್ಯ ಬೆರಳು ತೋರಿಸಿದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್

‘ಅಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಜನ ಸೇರಿದ್ದರು. ಇಷ್ಟು ಜನರಿದ್ದರೆ ನನ್ನಿಂದ ಸಾಧ್ಯವಿಲ್ಲ ಎಂದು ಆರ್ಯನ್ ಹೇಳಿದ. ಅವನ ಮ್ಯಾನೇಜರ್ (ಗೆಳೆಯ ಕೂಡ ಹೌದು) ಜನರನ್ನು ಚದುರಿಸುತ್ತೇನೆ ಎಂದು ಹೋದ. ಎಷ್ಟು ಹೊತ್ತಾದರೂ ಬರಲಿಲ್ಲ. ಆಗ ನಾವು ಬಾಲ್ಕನಿಗೆ ಹೋಗಿ ಏನಾಗಿದೆ ಎಂದು ನೋಡಿದೆವು. ಆಗ ಅವನು ಫ್ರೆಂಡ್ ಕಮ್ ಮ್ಯಾನೇಜರ್​ಗೆ ಆರ್ಯನ್ ಹಾಗೆ ತೋರಿಸಿದ್ದಾನೆ. ಅದು ಜನರಿಗೆ ತೋರಿಸಿದ್ದಲ್ಲ’ ಎಂದಿದ್ದಾರೆ ಝೈದ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.