ಐಪಿಎಲ್ (IPL) ಫೀವರ್ ಶುರುವಾಗುವ ಮುನ್ನವೇ ಆರ್ಸಿಬಿ (RCB) ಫೀವರ್ ಶುರುವಾಗಿದೆ. ಪ್ರತಿ ವರ್ಷದಂತೆಯೇ ಈ ವರ್ಷವೂ ಆರ್ಸಿಬಿ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ. ನಾಳೆ (ಮಾರ್ಚ್ 15) ಆರ್ಸಿಬಿ ಅನ್ಬಾಕ್ಸಿಂಗ್ ಇವೆಂಟ್ ಇದ್ದು, ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಇದರ ನಡುವೆ ಆರ್ಸಿಬಿ ಸಹ ಈಗಾಗಲೇ ಪ್ರೊಮೋನಲ್ ವಿಡಿಯೋಗಳ ಮೂಲಕ ಈ ಬಾರಿ ಟೀಂನಲ್ಲಿ ಆಗಲಿರುವ ಮಹತ್ತರವಾದ ಬದಲಾವಣೆ ಬಗ್ಗೆ ಸುಳಿವು ನೀಡುತ್ತಿದೆ. ರಿಷಬ್ ಶೆಟ್ಟಿ, ‘ಕಾಂತಾರ’ ಶಿವನ ಅವತಾರದಲ್ಲಿ ಆರ್ಸಿಬಿ ಜಾಹೀರಾತಿನಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದಾರೆ. ಇದೀಗ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಸಹ ಆರ್ಸಿಬಿ ಕುಟುಂಬ ಸೇರಿಕೊಂಡಿದ್ದಾರೆ.
ಆರ್ಸಿಬಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋನಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಕಾಣಿಸಿಕೊಂಡಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್, ತಮ್ಮ ಲ್ಯಾಪ್ಟ್ಯಾಪ್ನ ಪಾಸ್ವರ್ಡ್ ಬದಲಾಯಿತುತ್ತಿರುತ್ತಾರೆ. ವಿಡಿಯೋನಲ್ಲಿ ಮೊದಲಿಗೆ ಅಣ್ಣಾವ್ರ ಚಿತ್ರ ತೋರಿಸಲಾಗುತ್ತದೆ, ಬಳಿಕ ಪುನೀತ್ರ ಸಣ್ಣ ಪುತ್ಥಳಿ ತೋರಿಸಲಾಗುತ್ತದೆ. ಬಳಿಕ ಅಶ್ವಿನಿ ಅವರು ಲ್ಯಾಪ್ಟಾಪ್ನಲ್ಲಿ ‘ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್’ ಎಂದು ಇಂಗ್ಲೀಷ್ನಲ್ಲಿ ಪಾಸ್ವರ್ಡ್ ಅಪ್ಡೇಟ್ ಮಾಡುತ್ತಾರೆ. ಆದರೆ ಆ ಪಾಸ್ವರ್ಡ್ ಅನ್ನು ಲ್ಯಾಪ್ಟಾಪ್ ಅಕ್ಸೆಪ್ಟ್ ಮಾಡದೆ, ‘ಹಳೆಯ ಪಾಸ್ವರ್ಡ್ ಅನ್ನು ಮತ್ತೊಮ್ಮೆ ಬಳಸುವಂತಿಲ್ಲ’ ಎನ್ನುತ್ತದೆ. ಆಗ ಅಶ್ವಿನಿ ಅವರು ‘ಬ್ಯಾಂಗಲೂರ್’ (Bangalore) ಅನ್ನು ಅಳಿಸಿ ಹೊಸ ಪಾಸ್ವರ್ಡ್ ಸೆಟ್ ಮಾಡುತ್ತಾರೆ. ಬಳಿಕ ಕ್ಯಾಮೆರಾ ಕಡೆ ತಿರುಗಿ ‘ಅರ್ಥವಾಯ್ತಾ?’ ಎಂದು ಕೇಳುತ್ತಾರೆ.
ಇದನ್ನೂ ಓದಿ:ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ 5 ಆಟಗಾರರು
ಮಾರ್ಚ್ 15ರಂದು ಅದ್ಧೂರಿಯಾಗಿ ನಡೆಯಲಿರುವ ಆರ್ಸಿಬಿ ಅನ್ಬಾಕ್ಸಿಂಗ್ ಇವೆಂಟ್ನ ಪ್ರಚಾರ ಜಾಹೀರಾತು ಇದಾಗಿದೆ. ಇಷ್ಟು ದಿನ ಆರ್ಸಿಬಿ ಹೆಸರು ‘ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್’ ಎಂದಿತ್ತು. ಆದರೆ ಅದನ್ನು ಈ ಬಾರಿ ಬದಲಾಯಿಸಲಾಗುತ್ತಿದ್ದು, ಇನ್ನು ಮುಂದೆ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (Royal Challengers Bengaluru) ಎಂದು ಮಾಡಲಾಗುತ್ತಿದೆ. ಆರ್ಸಿಬಿ ಅನ್ಬಾಕ್ಸಿಂಗ್ ಇವೆಂಟ್ನಲ್ಲಿ ಈ ಬದಲಾವಣೆ ಮಾಡಲಾಗುತ್ತದೆ. ಕಳೆದ ಬಾರಿ ಈ ಕಾರ್ಯಕ್ರಮ ಬಹು ಅದ್ಧೂರಿಯಾಗಿ ನಡೆದಿತ್ತು. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಅಭಿಮಾನಿಗಳ ಆರ್ಭಟ್ಟಕ್ಕೆ ಸ್ಟೇಡಿಯಂನಲ್ಲಿ ಕಂಪನವೇ ಎದ್ದಿತ್ತು. ಈ ಬಾರಿಯೂ ಸಹ ಅಷ್ಟೆ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.
ಅಶ್ವಿನಿ ಪುನೀತ್ ರಾಜಕುಮಾರ್ ಅವರು ಎನ್ ಮಾಡ್ತಿದ್ದಾರೆ ಅರ್ಥ ಆಯ್ತಾ?
Any idea what Ashwini Puneeth Rajkumar is doing here?
Find out more at the RCB Unbox event on 19th March. Last few tickets remaining!@Ashwini_PRK #ArthaAytha #RCBUnbox #PlayBold #ನಮ್ಮRCB pic.twitter.com/AmKTYC8mUJ
— Royal Challengers Bangalore (@RCBTweets) March 14, 2024
ಐಪಿಎಲ್ 2024 ರ ಮೊದಲ ಪಂದ್ಯ ಮಾರ್ಚ್ 22ರಂದು ನಡೆಯಲಿದೆ. ಮೊದಲ ಪಂದ್ಯವೇ ಆರ್ಸಿಬಿ ಹಾಗೂ ಚೆನ್ನೈ ನಡುವೆ ನಡೆಯಲಿದೆ. ಸುಮಾರು ಒಂದು ತಿಂಗಳ ವರೆಗೆ ಪಂದ್ಯಾವಳಿ ನಡೆಯಲಿದೆ. ಕಳೆದ ಕೆಲ ಸೀಸನ್ನಿಂದ ಹೊಂಬಾಳೆ ಫಿಲಮ್ಸ್ನವರು ಆರ್ಸಿಬಿ ಜೊತೆ ಪಾರ್ಟನರ್ ಆಗಿದ್ದು, ಆರ್ಸಿಬಿಯ ಸೋಷಿಯಲ್ ಮೀಡಿಯಲಾ ಕಂಟೆಂಟ್ ಅನ್ನು ನೋಡಿಕೊಳ್ಳುತ್ತಿದ್ದಾರೆ. ಇದೀಗ ಹೊಂಬಾಳೆಯವರೇ ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ವಿಡಿಯೋ ನಿರ್ಮಿಸಿ ಅಪ್ಲೋಡ್ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:10 am, Thu, 14 March 24