Bhajarangi 2 Teaser: ಶಿವಣ್ಣನ ಹುಟ್ಟುಹಬ್ಬದಂದೇ ಭಜರಂಗಿ-2 ಸಿನಿಮಾ ಟೀಸರ್ ಬಿಡುಗಡೆ; ರಗಡ್ ಲುಕ್ನಲ್ಲಿ ಮಿಂಚುತ್ತಿರುವ ಹ್ಯಾಟ್ರಿಕ್ ಹೀರೋ
ಭಜರಂಗಿ-2 ಟೀಸರ್: ಸಿನಿಮಾದಲ್ಲಿ ಶಿವರಾಜ್ಕುಮಾರ್ ಜತೆ ಭಾವನಾ ಮೆನನ್ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ಇದೀಗ ಟೀಸರ್ನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಮಾಡಲಾಗಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರಿಗೆ ಇಂದು 59ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಇದೇ ಹೊತ್ತಲ್ಲಿ ಅವರ ಭಜರಂಗಿ-2 (Bhajarangi 2) ಸಿನಿಮಾದ ಟೀಸರ್ (Teaser) ಬಿಡುಗಡೆ ಮಾಡಲಾಗಿದೆ. ಒಂದು ನಿಮಿಷ 23 ಸೆಕೆಂಡ್ಗಳ 4k ಟೀಸರ್ನಲ್ಲಿ ಶಿವಣ್ಣನ ಖಡಕ್ ಲುಕ್ ಗಮನಸೆಳೆಯುತ್ತದೆ. ಶಿವಣ್ಣನ ಹುಟ್ಟುಹಬ್ಬಕ್ಕೆ ಭಜರಂಗಿ-2 ಸಿನಿಮಾ ತಂಡ ನೀಡಿರುವ ವಿಶೇಷ ಉಡುಗೊರೆ ಇದಾಗಿದ್ದು, ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.
ಭಜರಂಗಿ-2 ಸಿನಿಮಾ ಜಯಣ್ಣ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿಬಂದಿದ್ದು, ಎ.ಹರ್ಷ ನಿರ್ದೇಶನ ಮಾಡಿದ್ದಾರೆ. ಶಿವಣ್ಣನ ಬರ್ತ್ ಡೇ ದಿನ ಭಜರಂಗಿ-2 ಸಿನಿಮಾದ ಟೀಸರ್ ಬಿಡುಗಡೆ ಮಾಡುವುದಾಗಿ ಹರ್ಷಾ ಅವರು ಜು.8ರಂದು ಟ್ವೀಟ್ ಮಾಡಿದ್ದರು. ಶಿವಣ್ಣ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಒರಟಾದ ನೋಟ ಬೀರುತ್ತ ಹೆಜ್ಜೆ ಹಾಕುತ್ತಿರುವ ದೃಶ್ಯದ ಟೀಸರ್ ಇದಾಗಿದೆ. ಶಿವಣ್ಣ ಮತ್ತು ಐಂದ್ರಿತಾ ರೈ ಅಭಿನಯದ ಭಜರಂಗಿ ಸಿನಿಮಾ 2013ರಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಅದೊಂದು ಆ್ಯಕ್ಷನ್ ಸಿನಿಮಾ ಆಗಿತ್ತು. ಇದೀಗ ಭಜರಂಗಿ-2 ಬಗ್ಗೆಯೂ ಬಹು ನಿರೀಕ್ಷೆ ಇದೆ.
ಸಿನಿಮಾದಲ್ಲಿ ಶಿವರಾಜ್ಕುಮಾರ್ ಜತೆ ಭಾವನಾ ಮೆನನ್ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ಇದೀಗ ಟೀಸರ್ನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಮಾಡಲಾಗಿದೆ. ಟೀಸರ್ ರಿಲೀಸ್ ಆದ 2 ತಾಸಿನಲ್ಲಿ ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ. ಸದ್ಯ ಟ್ರೆಂಡ್ ಆಗುತ್ತಿದೆ. ಈ ಬಾರಿ ಶಿವರಾಜ್ ಕುಮಾರ್ ಕೊವಿಡ್ 19 ಕಾರಣದಿಂದ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕುಟುಂಬದವರೊಂದಿಗೆ ಕೇಕ್ ಕತ್ತರಿಸಿದ್ದಾರೆ.
ಇದನ್ನೂ ಓದಿ: ಯಾವುದೇ ಕಪ್ಪು ಚುಕ್ಕೆ ಇಲ್ಲ, ನನಗೆ ಅನುಭವ ಚೆನ್ನಾಗಿದೆ, ಮುಖ್ಯಮಂತ್ರಿ ಆಗುವ ಯೋಗ್ಯತೆ ನನಗಿದೆ: ಸಚಿವ ಉಮೇಶ ಕತ್ತಿ
Bajrangi 2 Film Teaser released on shivrajkumar birthday as Special Gift
Published On - 1:17 pm, Mon, 12 July 21