ಸುದೀಪ್ ಸಿನಿಮಾ ಪೈರಸಿ ಮಾಡಿದ್ದ ‘ಪೈಲ್ವಾನ್’ ಆರೋಪಿ ಅಂದರ್
ಇತ್ತೀಚೆಗಷ್ಟೇ ಬಿಡುಗಡೆಯಾದ ಸ್ಯಾಂಡಲ್ವುಡ್ನ ಬಾದ್ಷಾ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರ ಮೊದಲ ದಿನವೇ ಪೈರಸಿಯಾಗಿತ್ತು. ಪಂಚ ಭಾಷೆಗಳಲ್ಲಿ ರಿಲೀಸ್ ಆಗಿದ್ದ ಚಿತ್ರ ಅಂದೇ ಎಲ್ಲರ ಮೊಬೈಲ್ಗಳಲ್ಲಿ ಹರಿದಾಡುತ್ತಿತ್ತು. ಇದೀಗ ಬೆಂಗಳೂರು ಸಿಸಿಬಿ ಪೊಲೀಸರು ನೆಲಮಂಗಲದ ಇಮಚೇನಹಳ್ಳಿ ನಿವಾಸಿ ರಾಕೇಶ್ನನ್ನು ಬಂಧಿಸಿದ್ದಾರೆ. ಆರೋಪಿ ರಾಕೇಶ್ ಸಿನಿಮಾ ರಿಲೀಸ್ ಆದ ದಿನವೇ ತನ್ನ ಖಾತೆಯಿಂದ ಪೂರ್ತಿ ಸಿನಿಮಾವನ್ನು ಅಪ್ಲೋಡ್ ಮಾಡಿದ್ದ. ಕಿಚ್ಚ ಸುದೀಪ್ ಮನೆಗೆ ಬೆಂಗಳೂರು ಪೊಲೀಸ್ ಆಯುಕ್ತರು ಇನ್ನು ಇದೇ ಬೆಳವಣಿಗೆಯಲ್ಲಿ, ಬೆಂಗಳೂರಿನ ಜೆಪಿ ನಗರದ ಕಿಚ್ಚ […]
ಇತ್ತೀಚೆಗಷ್ಟೇ ಬಿಡುಗಡೆಯಾದ ಸ್ಯಾಂಡಲ್ವುಡ್ನ ಬಾದ್ಷಾ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರ ಮೊದಲ ದಿನವೇ ಪೈರಸಿಯಾಗಿತ್ತು. ಪಂಚ ಭಾಷೆಗಳಲ್ಲಿ ರಿಲೀಸ್ ಆಗಿದ್ದ ಚಿತ್ರ ಅಂದೇ ಎಲ್ಲರ ಮೊಬೈಲ್ಗಳಲ್ಲಿ ಹರಿದಾಡುತ್ತಿತ್ತು. ಇದೀಗ ಬೆಂಗಳೂರು ಸಿಸಿಬಿ ಪೊಲೀಸರು ನೆಲಮಂಗಲದ ಇಮಚೇನಹಳ್ಳಿ ನಿವಾಸಿ ರಾಕೇಶ್ನನ್ನು ಬಂಧಿಸಿದ್ದಾರೆ. ಆರೋಪಿ ರಾಕೇಶ್ ಸಿನಿಮಾ ರಿಲೀಸ್ ಆದ ದಿನವೇ ತನ್ನ ಖಾತೆಯಿಂದ ಪೂರ್ತಿ ಸಿನಿಮಾವನ್ನು ಅಪ್ಲೋಡ್ ಮಾಡಿದ್ದ.
ಕಿಚ್ಚ ಸುದೀಪ್ ಮನೆಗೆ ಬೆಂಗಳೂರು ಪೊಲೀಸ್ ಆಯುಕ್ತರು ಇನ್ನು ಇದೇ ಬೆಳವಣಿಗೆಯಲ್ಲಿ, ಬೆಂಗಳೂರಿನ ಜೆಪಿ ನಗರದ ಕಿಚ್ಚ ಸುದೀಪ್ ನಿವಾಸಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಕಿಚ್ಚ ಸುದೀಪ್ ಮತ್ತು ಭಾಸ್ಕರ್ ರಾವ್ ಹಿಂದಿನಿಂದಲೂ ಸ್ನೇಹಿತರು, ಹೀಗಾಗಿ ಸೌಹಾರ್ದಯುತ ಭೇಟಿ ನೀಡಿದ್ದಾರೆ. ಇನ್ನು ಇದೇ ವೇಳೆ ಪೈಲ್ವಾನ್ ಸಿನಿಮಾದ ಪೈರಸಿ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಪೈಲ್ವಾನ್ ಪೈರಸಿಯಿಂದ ‘ಕಿಚ್ಚ-ದಚ್ಚು’ ಫ್ಯಾನ್ಸ್ ವಾರ್ ಪೈಲ್ವಾನ್ ಸಿನಿಮಾ ಪೈರಸಿಯಾಗಿದ್ದೇ ತಡ ದರ್ಶನ್ ಮತ್ತು ಸುದೀಪ್ ಫ್ಯಾನ್ಸ್ ವಾರ್ ಶುರುವಾಯಿತು. ಸಾಮಾಜಿಕ ತಾಲತಾಣಗಳಲ್ಲಿ ‘ಕಿಚ್ಚ-ದಚ್ಚು’ ಫ್ಯಾನ್ಸ್ ನಡುವೆ ಆರೋಪ, ಪ್ರತ್ಯಾರೋಪಗಳು ಜೋರಾದವು. ದರ್ಶನ್ ಅಭಿಮಾನಿಗಳು ಕಿಚ್ಚ ಸುದೀಪ್ ಹೆಸರೇಳದೆ ಬಹಿರಂಗ ಪತ್ರ ಬರೆದು ಪರೋಕ್ಷವಾಗಿ ಸುದೀಪ್ಗೆ ಕೆಲವು ಪ್ರಶ್ನೆಗಳನ್ನ ಮುಂದಿಟ್ಟರು. ಇದರಿಂದ ಕೆರಳಿದ ಕಿಚ್ಚನ ಅಭಿಮಾನಿಗಳೂ ಸಹ ಬಹಿರಂಗ ಪತ್ರ ಬರೆದು ದರ್ಶನ್ ಫ್ಯಾನ್ಸ್ಗೆ ಟಾಂಗ್ ನೀಡಿದ್ರು.
ಅಭಿಮಾನಿಗಳ ವಾರ್ಗೆ ದರ್ಶನ್, ಸುದೀಪ್ ಟ್ವೀಟ್ ‘ಕಿಚ್ಚ-ದಚ್ಚು’ ಫ್ಯಾನ್ಸ್ ವಾರ್ ತಾರಕಕ್ಕೇರುತ್ತಿದ್ದಂತೆ ಚಾಲೆಂಜಿಂಗ್ ಸ್ಟಾರ್ ಸಹ ಟ್ವೀಟ್ ಮಾಡಿ, ಅನ್ನದಾತರು ಮತ್ತು ಸೆಲೆಬ್ರೆಟಿಗಳನ್ನು ಪ್ರಚೋದಿಸಬೇಡಿ ಅಂತ ವಾರ್ನಿಂಗ್ ನೀಡಿದ್ರು. ಬಳಿಕ ಕಿಚ್ಚ ಸುದೀಪ್ ಸಹ ಟ್ವೀಟ್ ಮಾಡಿ, ಕೆಲವೊಂದು ಮಾತುಗಳಿಗೆ ಕಣ್ಣು ಕಾಣಿಸದಂತೆ, ಕಿವಿ ಕೇಳಿಸದಂತೆ ಇರುವುದು ಒಳಿತು. ಪೈರಸಿ ಬಗ್ಗೆ ಯಾರ ಹೆಸರನ್ನೂ ನಾವು ತೆಗೆದುಕೊಂಡಿಲ್ಲ ಅಂತ ಸುದೀರ್ಘವಾದ ಪತ್ರ ಬರೆದರು.
ಇನ್ನು ಈ ಕುರಿತು ನಿರ್ಮಾಪಕಿ ಸ್ವಪ್ನಾ ಕೃಷ್ಣ ಸಹ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
Published On - 2:31 pm, Fri, 20 September 19