ಸೆಪ್ಟೆಂಬರ್ನಲ್ಲಿ ಕನ್ನಡ ಸಿನಿಮಾ ಪ್ರಿಯರಿಗೆ ಹಬ್ಬದ ವಾತಾವರಣ ನಿರ್ಮಾಣ ಆಗಲಿದೆ. ಇದಕ್ಕೆ ಕಾರಣ ‘ಭೈರತಿ ರಣಗಲ್’ ಹಾಗೂ ‘ಯುಐ’ ಸಿನಿಮಾಗಳು ಇದೇ ತಿಂಗಳಲ್ಲಿ ರಿಲೀಸ್ ಆಗುತ್ತಿರುವುದು. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಕನಿಷ್ಠ 15 ದಿನ ಅಂತರಗಳಲ್ಲಿ ಈ ಸಿನಿಮಾಗಳು ರಿಲೀಸ್ ಆಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಎರಡೂ ಸಿನಿಮಾಗಳ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡೋ ಸಾಧ್ಯತೆ ಇದೆ.
‘ಭೈರತಿ ರಣಗಲ್’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಇದು ‘ಮಫ್ತಿ’ ಚಿತ್ರದ ಪ್ರೀಕ್ವೆಲ್. ಈ ಕಾರಣಕ್ಕೆ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ. ನರ್ತನ್ ನಿರ್ದೇಶನದ ಈ ಚಿತ್ರ ಆಗಸ್ಟ್ 15ರಂದು ತೆರೆಮೇಲೆ ಬರಲಿದೆ ಎಂದು ಹೇಳಲಾಗಿತ್ತು. ಇತ್ತೀಚೆಗೆ ರಿಲೀಸ್ ಆದ ಟೀಸರ್ನಲ್ಲಿ ಸಿನಿಮಾನ ಸೆಪ್ಟೆಂಬರ್ನಲ್ಲಿ ರಿಲೀಸ್ ಮಾಡೋದಾಗಿ ಮಾಹಿತಿ ನೀಡಿದ್ದಾರೆ. ಈ ಚಿತ್ರವನ್ನು ಗೀತಾ ಶಿವರಾಜ್ಕುಮಾರ್ ನಿರ್ಮಾಣ ಮಾಡಿದ್ದಾರೆ.
ಈಗ ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ‘UI’ ಸಿನಿಮಾ ತಂಡಕ್ಕೂ ಸೆಪ್ಟೆಂಬರ್ನಲ್ಲೇ ಬಿಡುಗಡೆ ಮಾಡುವ ಆಲೋಚನೆ ಇದೆಯಂತೆ. ಸದ್ಯದ ಪ್ಲ್ಯಾನ್ ಪ್ರಕಾರ ಸೆಪ್ಟೆಂಬರ್ 9ರಂದು ಚಿತ್ರವನ್ನು ತೆರೆಮೇಲೆ ತರುವ ಪ್ರಯತ್ನ ನಡೆದಿದೆ. ಉಪೇಂದ್ರ ಅವರಿಗೆ ಸೆಪ್ಟೆಂಬರ್ ವಿಶೇಷ. ಇದಕ್ಕೆ ಕಾರಣ ಅವರ ಜನ್ಮದಿನ. ಸೆಪ್ಟೆಂಬರ್ 18 ಅವರ ಬರ್ತ್ಡೇ. ಹೀಗಾಗಿ, ಇದಕ್ಕೂ ಕೆಲವು ದಿನ ಮೊದಲು ಸಿನಿಮಾನ ರಿಲೀಸ್ ಮಾಡೋ ಆಲೋಚನೆ ತಂಡಕ್ಕೆ ಬಂದಿದೆ.
ಇದನ್ನೂ ಓದಿ: ಆನಂದ್ ಆಡಿಯೋ ಕೈ ಸೇರಿದ ‘ಭೈರತಿ ರಣಗಲ್’ ಆಡಿಯೋ ಹಕ್ಕು
ಒಂದೇ ತಿಂಗಳಲ್ಲಿ ಎರಡು ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿರುವುದರಿಂದ ಫ್ಯಾನ್ಸ್ ನಿಜಕ್ಕೂ ಖುಷಿಯಾಗಿದ್ದಾರೆ. ಇತ್ತೀಚೆಗೆ ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾ ರಿಲೀಸ್ ಆಗಿಲ್ಲ. ಹೀಗಾಗಿ, ಕನ್ನಡಿಗರ ಪಾಲಿಗೆ ಸೆಪ್ಟೆಂಬರ್ ವಿಶೇಷ ಎನಿಸಿಕೊಳ್ಳಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:31 pm, Wed, 17 July 24