ತಮಗೆ ತಾವೇ ಪೂಜೆ ಮಾಡಿಕೊಂಡಿದ್ದು ಏಕೆ? ವಿವರಿಸಿದ ಚೈತ್ರಾ ಕುಂದಾಪುರ

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಚೈತ್ರಾ ಕುಂದಾಪುರ ಅವರು ಮಾಡಿದ ಸ್ವಯಂ ಪೂಜೆ ದೊಡ್ಡ ಸುದ್ದಿಯಾಗಿದೆ. ದೇವರ ಮುಂದೆ ನಿಂತು ತಾವೇ ತಮಗೆ ಪೂಜೆ ಮಾಡಿಕೊಂಡಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ, ಅದು ಏನೆಂದು ಸುದೀಪ್ ಸಹ ನಿನ್ನೆ ಪ್ರಶ್ನೆ ಮಾಡಿದರು. ತಮಗೆ ತಾವೇ ಪೂಜೆ ಮಾಡಿಕೊಂಡಿದ್ದು ಏಕೆಂದು ಚೈತ್ರಾ ಕುಂದಾಪುರ ವಿವರಿಸಿದ್ದಾರೆ.

ತಮಗೆ ತಾವೇ ಪೂಜೆ ಮಾಡಿಕೊಂಡಿದ್ದು ಏಕೆ? ವಿವರಿಸಿದ ಚೈತ್ರಾ ಕುಂದಾಪುರ
Follow us
ಮಂಜುನಾಥ ಸಿ.
|

Updated on:Nov 10, 2024 | 7:27 AM

ಬಿಗ್​ಬಾಸ್ ಕನ್ನಡ ಸೀಸನ್ 11ರ ಮನೆಯಲ್ಲಿ ಕಳೆದ ವಾರ ಸಾಕಷ್ಟು ಜಗಳ, ಗಲಾಟೆಗಳೆಲ್ಲ ಆದವು. ಮನೆಗೆ ಹೊಸ ಕ್ಯಾಪ್ಟನ್ ಸಿಕ್ಕರು, ಮಂಜು-ಗೌತಮಿ-ಮೋಕ್ಷಿತಾ ಅವರುಗಳ ಗೆಳೆತನ ಒಡೆಯಿತು. ಆದರೆ ಇದೆಲ್ಲದರ ನಡುವೆ ಗಮನ ಸೆಳೆದಿದ್ದು ಮಾತ್ರ ಚೈತ್ರಾ ಕುಂದಾಪುರ. ಹೊರಗೆ ಉಗ್ರ ಭಾಷಣಕಾರ್ತಿಯಾಗಿ ಗಮನ ಸೆಳೆದಿರುವ ಚೈತ್ರಾ ಕುಂದಾಪುರ ಒಳಗೆ ಸಹ ಆಗಾಗ್ಗೆ ತಮ್ಮ ಉಗ್ರಾವತಾರ ತೋರುತ್ತಿರುತ್ತಾರೆ. ಆದರೆ ಕಳೆದ ವಾರ ಚೈತ್ರಾ ಕುಂದಾಪುರ ಅವರು ಬಿಗ್​ಬಾಸ್ ಮನೆಯಲ್ಲಿ ಮಾಡಿದ ಒಂದು ಕಾರ್ಯ ಎಲ್ಲರನ್ನೂ ಶಾಕ್​ಗೆ ಒಳಗೆ ಮಾಡಿತು.

ಚೈತ್ರಾ ಕುಂದಾಪುರ, ಬಿಗ್​ಬಾಸ್ ಮನೆಯಲ್ಲಿ ದೇವರ ಮುಂದೆ ನಿಂತು ಗಂಟೆ ಭಾರಿಸುತ್ತಾ, ದೇವರಿಗೆ ಊದಿನ ಕಟ್ಟಿ ಬೆಳಗುವ ಬದಲಿಗೆ ತಮಗೆ ತಾವೇ ಊದುಬತ್ತಿ ಬೆಳಗಿಕೊಳ್ಳುತ್ತಿದ್ದರು. ಇದನ್ನು ನೋಡಿದ ಜನರಿಗೆ ಆಶ್ಚರ್ಯವಾಯ್ತು, ಮಾತ್ರವಲ್ಲ ಚೈತ್ರಾರ ಸ್ವಯಂ ಪೂಜೆಯನ್ನು ನೋಡಿದ ಕೆಲ ಬಿಗ್​ಬಾಸ್​ ಮನೆ ಮಂದಿಗೆ ಸಹ ಆಶ್ಚರ್ಯವಾಯ್ತು. ಚೈತ್ರಾ ಅವರು ತಮಗೆ ತಾವೇ ಗಂಟೆ ಬಾರಿಸಿಕೊಂಡು ಪೂಜೆ ಮಾಡಿಕೊಳ್ಳುತ್ತಿರುವುದು ನೋಡಿ ಶಿಶಿರ್ ಅಂತೂ ಅವಾಕ್ಕಾಗಿ ಹೋಗಿದ್ದರು.

ನಿನ್ನೆ (ನವೆಂಬರ್ 09) ಬಿಗ್​ಬಾಸ್​ ವಾರದ ಪಂಚಾಯಿತಿ ನಡೆಸಿಕೊಡಲು ಬಂದಿದ್ದ ಸುದೀಪ್, ಚೈತ್ರಾ ಅವರಿಗೆ ನೀವು ಮಾಡಿದ್ದೇನು? ನಿಮಗೆ ನೀವೇ ಏಕೆ ಪೂಜೆ ಮಾಡಿಕೊಂಡಿರಿ ಎಂದು ಪ್ರಶ್ನೆ ಮಾಡಿದರು. ಮಾತ್ರವಲ್ಲದೆ, ಚೈತ್ರಾ ಅವರ ಆ ಪೂಜೆಯ ಕುರಿತಾಗಿ ಹರಿದಾಡುತ್ತಿರುವ ಮೀಮ್​ಗಳನ್ನು ಸಹ ಮನೆಯ ಸದಸ್ಯರಿಗೆ ತೋರಿಸಿದರು. ಮೀಮ್​ಗಳನ್ನು ನೋಡಿ ಚೈತ್ರಾ ಸೇರಿದಂತೆ ಮನೆಯ ಸದಸ್ಯರೆಲ್ಲರೂ ನಕ್ಕು ಸುಸ್ತಾದರು.

ಇದನ್ನೂ ಓದಿ:ಬಿಗ್​ಬಾಸ್: ಹನುಮಂತನಿಗೆ ಸಾಕಾಗಿದೆ ಕ್ಯಾಪ್ಟನ್ಸಿ ರಗಳೆ

ಆ ನಂತರ ತಾವು ಮಾಡಿದ್ದು ಏನೆಂದು ಚೈತ್ರಾ ಕುಂದಾಪುರ ವಿವರಿಸಿದರು. ಅಸಲಿಗೆ ಚೈತ್ರಾ ಅವರು ದೇವರ ಮುಂದೆ ನಿಂತು ತಮಗೆ ತಾವೆ ಪೂಜೆ ಮಾಡಿಕೊಂಡಿರಲಿಲ್ಲ, ದೇವರ ವಿಗ್ರಹದ ಪಕ್ಕ ಕನ್ನಡಿಯೊಂದು ಇದ್ದು, ಕನ್ನಡಿ ಎದುರು ಗಂಟೆ ಭಾರಿಸುತ್ತಾ ತಮಗೆ ತಾವೇ ಊದುಬತ್ತಿ ಬೆಳಗಿ ಪೂಜೆ ಮಾಡಿಕೊಂಡಿದ್ದರು. ಚೈತ್ರಾ ಕುಂದಾಪುರ ನಿನ್ನೆಯ ಎಪಿಸೋಡ್​ನಲ್ಲಿ ಹೇಳಿದಂತೆ, ಅವರು ತಮಗೆ ಪೂಜೆ ಮಾಡಿಕೊಳ್ಳುತ್ತಿರಲಿಲ್ಲವಂತೆ ಬದಲಿಗೆ ಅದನ್ನು ‘ಓರಾ ಕ್ಲೆಂಜಿಂಗ್’ ಎಂದು ಕರೆಯುತ್ತಾರಂತೆ. ಒಂದು ರೀತಿ ದೃಷ್ಟಿ ತೆಗೆಯುವ ಪದ್ಧತಿ ಅದು.

ಮ್ಯಾನಿಫೆಸ್ಟೇಷನ್ ನಲ್ಲಿ ನಂಬಿಕೆ ಇಡುವವರು ಹೀಗೆ ತಮಗೆ ತಾವೇ ಪೂಜಾ ಮಾಡಿಕೊಂಡು ಓರಾ ಕ್ಲೆಂಜಿಂಗ್ ಮಾಡಿಕೊಳ್ಳುತ್ತಾರೆ. ಇದರಿಂದ ದೇಹದಲ್ಲಿರುವ, ನಮ್ಮ ಸುತ್ತ-ಮುತ್ತಲೂ ಇರುವ ನೆಗೆಟಿವ್ ಎನರ್ಜಿ ದೂರಾಗಿ ಪಾಸಿಟಿವಿಟಿ ಹತ್ತಿರವಾಗುತ್ತದೆ ಎಂಬುದು ನಂಬಿಕೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:24 am, Sun, 10 November 24