ನಿಮ್ಮಂತಹ ಹುಟ್ಟು ಕಲಾವಿದ ಇನ್ನೂ ಇರಬೇಕಿತ್ತು ಇರ್ಫಾನ್ ಖಾನ್​

ನಿಮ್ಮಂತಹ ಹುಟ್ಟು ಕಲಾವಿದ ಇನ್ನೂ ಇರಬೇಕಿತ್ತು ಇರ್ಫಾನ್ ಖಾನ್​

ಮುಂಬೈ: ಬಾಲಿವುಡ್​ನ ಖ್ಯಾತ ನಟ ಇರ್ಫಾನ್ ಖಾನ್ (54) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ತಾಯಿಯನ್ನು ಹಿಂಬಾಲಿಸಿದ ಹುಟ್ಟು ಕಲಾವಿದ: ಇರ್ಫಾನ್ ಖಾನ್ ಮೃತಪಟ್ಟಿರುವ ಬಗ್ಗೆ ಟ್ವೀಟ್ ಮೂಲಕ ನಿರ್ದೇಶಕ ಸುಜಿತ್ ಸರ್ಕಾರ್ ಮಾಹಿತಿ ನೀಡಿದ್ದಾರೆ. ಇರ್ಫಾನ್ ತಾಯಿ ಸಯೀದಾ ಬೇಗಂ ಕೆಲ ದಿನಗಳ ಹಿಂದಷ್ಟೇ ಜೈಪುರದಲ್ಲಿ ಮೃತಪಟ್ಟಿದ್ದರು. ಆದ್ರೆ ಲಾಕ್​ಡೌನ್ ಪರಿಣಾಮ ಅಂತ್ಯಸಂಸ್ಕಾರಕ್ಕೂ ಹೋಗಲೂ ಸಾಧ್ಯವಾಗಿರಲಿಲ್ಲ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕವೇ ತಾಯಿಯ ಅಂತಿಮ ದರ್ಶನ ಪಡೆದಿದ್ದರು.

https://www.facebook.com/Tv9Kannada/videos/551716332448047/

Published On - 12:08 pm, Wed, 29 April 20

Click on your DTH Provider to Add TV9 Kannada