ಯುವ ದಸರಾ ವೇದಿಕೆ ಮೇಲೆ ಕನ್ನಡದ ಈ ನಟನ ಹಾಡು ಕೇಳುತ್ತಿದ್ದಂತೆ ಎಮೋಷನಲ್ ಆದ ಬಾದ್​ಶಾ

|

Updated on: Oct 09, 2024 | 10:39 AM

ಬಾದ್​ಶಾ ಅವರು ಬಾಲಿವುಡ್ ಸಿಂಗರ್. ಅವರು ಜನಿಸಿದ್ದು ದೆಹಲಿಯಲ್ಲಿ. ಸೆಪ್ಟೆಂಬರ್ 8ರಂದು ಯುವ ದಸರಾ ಕಾರ್ಯಕ್ರಮದಲ್ಲಿ ಬಾದ್​ಶಾ ಭಾಗಿ ಆಗಿದ್ದರು. ಈ ವೇಳೆ ಕನ್ನಡದಲ್ಲಿ ಮಾತನಾಡಿದ ಅವರು, ಕನ್ನಡದ ಒಂದು ಹಾಡು ಕೇಳಿ ಸಖತ್ ಎಮೋಷನಲ್ ಆದರು.

ಯುವ ದಸರಾ ವೇದಿಕೆ ಮೇಲೆ ಕನ್ನಡದ ಈ ನಟನ ಹಾಡು ಕೇಳುತ್ತಿದ್ದಂತೆ ಎಮೋಷನಲ್ ಆದ ಬಾದ್​ಶಾ
ಬಾದ್​ಶಾ
Follow us on

ಮೈಸೂರಿನಲ್ಲಿ ‘ಯುವ ದಸರಾ’ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಅನೇಕ ಸೆಲೆಬ್ರಿಟಿಗಳು ಬಂದು ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಸೆಪ್ಟೆಂಬರ್ 8ರಂದು ಬಾಲಿವುಡ್ ಗಾಯಕ ಬಾದ್​ಶಾ ಆಗಮಿಸಿದ್ದರು. ಕನ್ನಡದಲ್ಲಿ ಮಾತನಾಡಿದ್ದೂ ಅಲ್ಲದೆ, ಕನ್ನಡದ ಒಂದು ಹಾಡು ಕೇಳಿ ಅವರು ಸಖತ್ ಎಮೋಷನಲ್ ಆದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ಸ್ ಮಾಡುತ್ತಿದ್ದಾರೆ.

ಕನ್ನಡದಲ್ಲಿ ಮಾತನಾಡಿದ ಬಾದ್​ಶಾ, ‘ಯಾರೂ ಸ್ಟಾರ್ ಅಲ್ಲ, ಯಾರೂ ಸೂಪರ್​ಸ್ಟಾರ್ ಕೂಡ ಅಲ್ಲ. ನಾನು ಸಿಂಗರ್ ಅಲ್ಲ, ನಾನು ಬರಹಗಾರ. ನನಗೆ ಹೇಗೆ ಬರೆಯಬೇಕು ಎಂಬುದು ಗೊತ್ತಷ್ಟೇ. ನಾನು ಫೀಲೀಂಗ್ಸ್​ನ ಬರೆಯುತ್ತೇನೆ. ನಾನು ನಿಮ್ಮಲ್ಲಿ ಒಬ್ಬ. ನಿಮ್ಮ ಆಶೀರ್ವಾದಿಂದ ಇಲ್ಲಿದ್ದೇನೆ. ನಾನು ನಿಮಗೆ ಸದಾ ಚಿರರುಣಿ’ ಎಂದು ಕನ್ನಡದಲ್ಲಿ ಮಾತನಾಡಿದರು ಬಾದ್​ಶಾ. ಅವರ ಈ ಮಾತು ಕೇಳಿ ನೆರೆದಿದ್ದವರು ಥ್ರಿಲ್ ಆದರು.

ಆ ಬಳಿಕ ಪುನೀತ್ ರಾಜ್​ಕುಮಾರ್ ಅವರ  ನಟನೆಯ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತೆ..’ ಹಾಡನ್ನು ಹಾಕಲಾಯಿತು. ಈ ವೇಳೆ ಬಾದ್​ಶಾ ಅವರು ಎಮೋಷನಲ್ ಆದರು. ಅವರಿಗೆ ಹಾಡಲೂ ಆಗದೆ ಒಂದು ಕಡೆಯಲ್ಲಿ ಕುಳಿತು, ಕೈ ಮುಗಿದು ಬಿಟ್ಟರು. ಪುನೀತ್ ರಾಜ್​ಕುಮಾರ್ ಮೇಲೆ ಅವರಿಗೆ ಇರೋ ಗೌರವವನ್ನು ಇದು ತೋರಿಸುತ್ತದೆ.

ಇದನ್ನೂ ಓದಿ: ಗಾಯಕ ಬಾದ್​ಶಾ ಬಳಿ ಇದೆ 22 ಲಕ್ಷ ಬೆಲೆಯ ಶೂ, ರೋಲ್ಸ್ ರಾಯ್ಸ್ ಕಾರು ವೇಸ್ಟ್ ಅಂತೆ

ಆದಿತ್ಯ ಪ್ರತೀಕ್ ಸಿಂಗ್ ಅನ್ನೋದು ಅವರ ಹೆಸರು. ಅವರು ಬಾಲಿವುಡ್​ನಲ್ಲಿ ಬಾದ್​ಶಾ ಎಂದೇ ಫೇಮಸ್ ಆಗಿದ್ದಾರೆ. ಅವರು ಜನಿಸಿದ್ದು ದೆಹಲಿಯಲ್ಲಿ. ಅವರು ರ‍್ಯಾಪರ್, ಸಿಂಗರ್, ಗೀತ ಸಾಹಿತಿ, ನಿರ್ಮಾಪಕ ಕೂಡ ಹೌದು. ಅವರು ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ‘ಅಭಿ ತೋ ಪಾರ್ಟಿ ಶುರು ಹುಯೀ ಹೇ’, ‘ಸೆಲ್ಫಿ ಲೇ ಲೇ ರೇ..’ ರೀತಿಯ ಹಾಡುಗಳನ್ನು ಅವರು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:04 am, Wed, 9 October 24