AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿ’ ಸಿನಿಮಾಕ್ಕೆ ಯೋಗಿ ಬೆಂಬಲ, ಹಾಡು ಬಿಡುಗಡೆ ಮಾಡಿದ ಲೂಸ್ ಮಾದ

‘ಸಿ’ ಹೆಸರಿನ ಕನ್ನಡ ಸಿನಿಮಾ ಒಂದು ತೆರೆಗೆ ಬರಲು ಸಜ್ಜಾಗಿದೆ. ತಂದೆ-ಮಗಳ ಬಂಧದ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾಕ್ಕೆ ಲೂಸ್ ಮಾದ ಯೋಗಿ ಬೆಂಬಲ ನೀಡಿದ್ದು, ಹಾಡು ಬಿಡುಗಡೆ ಮಾಡಿದ್ದಾರೆ.

‘ಸಿ’ ಸಿನಿಮಾಕ್ಕೆ ಯೋಗಿ ಬೆಂಬಲ, ಹಾಡು ಬಿಡುಗಡೆ ಮಾಡಿದ ಲೂಸ್ ಮಾದ
ಮಂಜುನಾಥ ಸಿ.
|

Updated on: Aug 06, 2024 | 12:47 PM

Share

‘ಎ’, ‘ಶ್’, ‘ಜೆಡ್’ ಈ ರೀತಿಯ ಒಂದೇ ಅಕ್ಷರದ ಹೆಸರಿರುವ ಸಿನಿಮಾಗಳು ಕನ್ನಡದಲ್ಲಿ ಬಂದಿವೆ. ಕೆಲವು ಹೆಸರು ಸಹ ಗಳಿಸಿವೆ. ಆದರೆ ಇತ್ತೀಚೆಗೆ ಈ ರೀತಿ ಒಂದು ಅಕ್ಷರದ ಹೆಸರಿರುವ ಸಿನಿಮಾಗಳು ಬಂದಿದ್ದು ಅಪರೂಪ. ಇದೀಗ ‘ಸಿ’ ಹೆಸರಿನ ಸಿನಿಮಾ ಒಂದು ಕನ್ನಡದಲ್ಲಿ ತಯಾರಾಗಿದ್ದು, ಸಿನಿಮಾಕ್ಕೆ ಲೂಸ್ ಮಾದ ಯೋಗಿ ಹಾಗೂ ಇನ್ನು ಕೆಲವು ಸೆಲೆಬ್ರಿಟಿಗಳು ಬೆಂಬಲಿಸಿದ್ದಾರೆ. ಇತ್ತೀಚೆಗಷ್ಟೆ ‘ಸಿ’ ಸಿನಿಮಾದ ಹಾಡೊಂದನ್ನು ಲೂಸ್ ಮಾದ ಯೋಗಿ ಬಿಡುಗಡೆ ಮಾಡಿದ್ದಾರೆ.

ಒಂದೇ ಅಕ್ಷರದ ಹೆಸರಿನ ಮೂಲಕ ಈಗಾಗಲೇ ಒಂದು ಮಟ್ಟಿಗಿನ ಕುತೂಹಲ ಮೂಡಿಸಿರುವ ಈ ಸಿನಿಮಾ ಇದೀಗ ಟೀಸರ್ ಮತ್ತು ‘ಕಂದಾ ಕಂದಾ’ ಎನ್ನುವ ಹಾಡಿನ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಇದೀಗ ‘ಇದು ಎ ಅಲ್ಲ ಬಿ ಅಲ್ಲ ಸಿ…’ ಎನ್ನುವ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ವಿ ನಾಗೇಂದ್ರ ಪ್ರಸಾದ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಹಾಡನ್ನು ಶಶಾಂಕ್ ಶೇಷಗಿರಿ, ಸುರಭಿ ಭಾರದ್ವಜ್ ಹಾಗೂ ಜ್ಞಾನ ಹಾಡಿದ್ದಾರೆ. ಹಾಡು ಬಿಡುಗಡೆ ಮಾಡಿರುವುದು ಲೂಸ್ ಮಾದ ಖ್ಯಾತಿಯ ನಟ ಯೋಗಿ.

‘ಸಿ’ ಕಿರಣ್ ಸುಬ್ರಮಣಿ ಚೊಚ್ಚಲ ನಿರ್ದೇಶನದ ಸಿನಿಮಾ. ನಿರ್ದೇಶನದ ಜೊತೆಗೆ ಸಿನಿಮಾದ ಮುಖ್ಯ ಪಾತ್ರದಲ್ಲಿಯೂ ಕಿರಣ್ ನಟಿಸಿದ್ದಾರೆ. ಹಾಡಿನ್ನು ರಿಲೀಸ್ ಮಾಡಿ ಸಿನಿಮಾ ತಂಡಕ್ಕೆ ಶುಭ ಹಾರೈಸಿರುವ ಯೋಗಿ. ಹೊಸ ತಂಡಕ್ಕೆ ಒಳಿತು ಹಾರೈಸಿದ್ದಾರೆ. ಇನ್ನು ಖ್ಯಾತ ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಕೂಡ ಸಿ ಸಿನಿಮಾದ ಹಾಡಿನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇಡೀ ಸಿನಿಮಾಗೆ ಒಳ್ಳೆದಾಗಲಿ ಕನ್ನಡ ಚಿತ್ರರಂಗ ಬೆಳೆಯಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: ‘ಸಿದ್ಲಿಂಗು 2’ ಚಿತ್ರದಲ್ಲಿ ರಮ್ಯಾ ಇರ್ತಾರಾ? ಉತ್ತರಿಸಿದ ‘ಲೂಸ್ ಮಾದ’ ಯೋಗಿ

‘ಸಿ’ ಕಣ್ಣು ಕಾಣದ ಮಗಳು ಹಾಗೂ ಅಪ್ಪನ ನಡುವಿನ ಬಾಂಧವ್ಯದ ಕತೆಯನ್ನು ಒಳಗೊಂಡಿದೆ. ಕಣ್ಣು ಕಾಣದ ಮಗಳ ಆಸೆಯನ್ನು ನೆರವೇರಿಸಲು ಅಪ್ಪ ಎಷ್ಟೆಲ್ಲ ಕಷ್ಟ ಪಡುತ್ತಾರೆ, ಮಗಳಿಗಾಗಿ ಅಪ್ಪನ ಹೋರಾಟದ ಕಥೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಕಿರಣ್ ಸುಬ್ರಮಣಿ. ನಿರ್ದೇಶಕ, ನಾಯಕ ಕಿರಣ್ ಅವರಿಗೆ ಇದು ಮೊದಲ ಸಿನಿಮಾ. ಆದರೆ ಚಿತ್ರರಂಗಕ್ಕೆ ಅವರು ಹಳಬರೆ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ನುರಿತ ತಂತ್ರಜ್ಞರೊಟ್ಟಿಗೆ ಕಿರಣ್ ಕೆಲಸ ಮಾಡಿದ್ದಾರೆ. ಇದೀಗ ‘ಸಿ’ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವಾತಂತ್ರ ನಿರ್ದೇಶಕರಾಗಿದ್ದಾರೆ.

‘ಸಿ’ ಸಿನಿಮಾ ತಂದೆ-ಮಗಳ ಬಾಂಧವ್ಯದ ಜೊತೆಗೆ ಮೆಡಿಕಲ್ ಮಾಫಿಯಾದ ಬಗ್ಗೆ ಇದೆ. ಎಜಿಎಸ್ ಪ್ರೊಡಕ್ಷನ್ ನಡಿ ನಿರ್ದೇಶಕ, ನಾಯಕ ಕಿರಣ್ ಅವರ ತಂದೆ ಸುಬ್ರಮಣಿ ಅವರು ಈ ಸಿನಿಮಾ ನಿರ್ಮಿಸಿದ್ದಾರೆ. ಸದ್ಯ ಟೀಸರ್ ಮೂಲಕ ಗಮನ ಸೆಳೆಯುತ್ತಿರುವ ಸಿ ಸಿನಿಮಾ ಆಗಸ್ಟ್‌ 23ಕ್ಕೆ ತೆರೆಗೆ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ