‘ಸಮಾಜದಲ್ಲಿ ಸೇವೆ ಮಾಡಿದ ನನಗಿಂತ ಹಿರಿಯರಿದ್ದಾರೆ’; ಗೌರವ ಡಾಕ್ಟರೇಟ್ ನಿರಾಕರಿಸಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಅವರು ನಟನಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಇದನ್ನು ಗಮನಿಸಿ ಕಿಚ್ಚ ಸುದೀಪ್​ಗೆ ಗೌರವ ಡಾಕ್ಟರೇಟ್ ನೀಡಲು ತುಮಕೂರು ವಿವಿ ನಿರ್ಧರಿಸಿತ್ತು. ವಿವಿ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆಸಿ ಸುದೀಪ್ ಗಮನಕ್ಕೆ ತರಲಾಗಿತ್ತು.ಆದರೆ, ಇದನ್ನು ಅವರು ನಿರಕಾರಿಸಿದ್ದಾರೆ.

‘ಸಮಾಜದಲ್ಲಿ ಸೇವೆ ಮಾಡಿದ ನನಗಿಂತ ಹಿರಿಯರಿದ್ದಾರೆ’; ಗೌರವ ಡಾಕ್ಟರೇಟ್ ನಿರಾಕರಿಸಿದ ಕಿಚ್ಚ ಸುದೀಪ್
ಸುದೀಪ್
Follow us
ಮಹೇಶ್ ಇ, ಭೂಮನಹಳ್ಳಿ
| Updated By: ರಾಜೇಶ್ ದುಗ್ಗುಮನೆ

Updated on:Aug 06, 2024 | 8:27 AM

ಕಿಚ್ಚ ಸುದೀಪ್ ಅವರು ಹೀರೋ ಆಗಿ ಗಮನ ಸೆಳೆದಿದ್ದಾರೆ. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಇದರ ಜೊತೆಗೆ ಅವರು ಸಾಕಷ್ಟು ಸಮಾಜಮುಖಿ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಸುದೀಪ್ ಅವರ ಒಳ್ಳೆಯ ಕೆಲಸವನ್ನು ಗಮನಿಸಿ ತುಮಕೂರು ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಆದರೆ, ಇದನ್ನು ಕಿಚ್ಚ ಸುದೀಪ್ ನಿರಾಕರಿಸಿದ್ದಾರೆ. ಕಿಚ್ಚ ಸುದೀಪ್ ಮಾದರಿ ನಡೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕಿಚ್ಚ ಸುದೀಪ್​ಗೆ ಗೌರವ ಡಾಕ್ಟರೇಟ್ ನೀಡಲು ತುಮಕೂರು ವಿವಿ ನಿರ್ಧರಿಸಿತ್ತು. ವಿವಿ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆಸಿ ಸುದೀಪ್ ಗಮನಕ್ಕೆ ತರಲಾಗಿತ್ತು. ವಿವಿ ನಿರ್ಧಾರಕ್ಕೆ ಹೃದಯಪೂರ್ವಕ ಧನ್ಯವಾದ ತಿಳಿಸಿರುವ ಸುದೀಪ್ ಅವರು, ಇದನ್ನು ವಿನಮ್ರವಾಗಿ ನಿರಾಕರಿಸಿದ್ದಾರೆ. ‘ಸಮಾಜದಲ್ಲಿ ಸೇವೆ ಮಾಡಿದ ನನಗಿಂತ ಹಿರಿಯರು ಇದ್ದಾರೆ. ಅವರಿಗೆ ಡಾಕ್ಟರೇಟ್ ನೀಡಿ’ ಎಂದು ಸುದೀಪ್ ಕೋರಿದ್ದಾರೆ.

ಪಿಎ ಮುಖಾಂತರ ಮಾಹಿತಿ..

ಮನೋರಂಜನೆ ಹಾಗೂ ನಟನೆಯಲ್ಲಿ ಸುದೀಪ್ ಸಲ್ಲಿಸಿದ ಸೇವೆ ಗುರುತಿಸಿ ಈ ಗೌರವ ನೀಡಲು ನಿರ್ಧರಿಸಿಲಾಗಿತ್ತು. ಈ ಬಗ್ಗೆ ಸುದೀಪ್ ಪಿಎ ಮುಖಾಂತರ ಮಾಹಿತಿ ರವಾನಿಸಲಾಗಿತ್ತು. ಆದರೆ, ಇದನ್ನು ನಿರಾಕರಿಸಿರುವುದಾಗಿ ಸುದೀಪ್ ತಿಳಿಸಿದ್ದರು.

ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ ಆ ಮಾತು ನಿಮಗೆ ನೆನಪಿದೆಯೇ?

ಯಾರ್ಯಾರಿಗೆ?

ಆಗಸ್ಟ್ 17ರಂದು ತುಮಕೂರು ವಿವಿ ಆವರಣದಲ್ಲಿ ಗೌರವ‌ ಡಾಕ್ಟರೇಟ್ ಪ್ರಧಾನ ನಡೆಯಲಿದೆ. ಈ ಬಾರಿ ತುಮಕೂರು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿದೆ. ಜಲಕ್ರೀಡಾ ಸಾಹಸಿಗ ಮತ್ತು‌ ಸಾಮಾಜಿಕ ಕಾರ್ಯಕರ್ತ ಸಿ.ಎಸ್. ನಾಗಾನಂದನ ಸ್ವಾಮಿ, ಕೈಗಾರಿಕೋದ್ಯಮಿ ಎಚ್. ಜಿ‌.ಚಂದ್ರಶೇಖರ್, ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಾಕ್ಟರೇಟ್​ ಪ್ರಧಾನ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:11 am, Tue, 6 August 24