ದುನಿಯಾ ವಿಜಯ್-ಗಣೇಶ್ ಕಾಂಬಿನೇಷನ್​ನಲ್ಲಿ ಬರಲಿದೆ ಸಿನಿಮಾ; ಇರಲಿದೆ ‘ಭೀಮ’ನ ನಿರ್ದೇಶನ

ದುನಿಯಾ ವಿಜಯ್ ಹಾಗೂ ಗಣೇಶ್ ಅವರು ದೊಡ್ಡ ಮಟ್ಟದ ಖ್ಯಾತಿ ಪಡೆದಿದ್ದಾರೆ. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಇದೆ. ಈಗ ಇಬ್ಬರೂ ಒಟ್ಟಾಗಿ ಸಿನಿಮಾ ಮಾಡೋಕೆ ರೆಡಿ ಆಗಿದ್ದಾರೆ. ಈ ವಿಚಾರವನ್ನು ಸ್ವತಃ ದುನಿಯಾ ವಿಜಯ್ ಅವರೇ ರಿವೀಲ್ ಮಾಡಿದ್ದಾರೆ. ಈ ವಿಚಾರ ಫ್ಯಾನ್ಸ್​ಗೆ ಖುಷಿ ನೀಡಿದೆ.

ದುನಿಯಾ ವಿಜಯ್-ಗಣೇಶ್ ಕಾಂಬಿನೇಷನ್​ನಲ್ಲಿ ಬರಲಿದೆ ಸಿನಿಮಾ; ಇರಲಿದೆ ‘ಭೀಮ’ನ ನಿರ್ದೇಶನ
ದುನಿಯಾ ವಿಜಯ್
Follow us
ರಾಜೇಶ್ ದುಗ್ಗುಮನೆ
|

Updated on:Aug 05, 2024 | 2:07 PM

ದುನಿಯಾ ವಿಜಯ್ ಹಾಗೂ ಗಣೇಶ್ ಸ್ಯಾಂಡಲ್​ವುಡ್​ನ ಬೆಸ್ಟ್​ ಫ್ರೆಂಡ್ಸ್​ಗಳಲ್ಲಿ ಒಬ್ಬರು. ‘ಇವರ ಮಧ್ಯೆ ಕಿರಿಕ್ ಆಯಿತೇ’ ಎಂಬ ಪ್ರಶ್ನೆಯನ್ನು ಕೆಲವರು ಕೇಳಿಕೊಂಡಿದ್ದರು. ಇದಕ್ಕೆ ಕಾರಣ ಆಗಿದ್ದು ದುನಿಯಾ ವಿಜಯ್ ನಟನೆಯ ‘ಭೀಮ’ (ಆಗಸ್ಟ್ 9) ಹಾಗೂ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ (ಆಗಸ್ಟ್ 15) ಒಂದು ವಾರ ಗ್ಯಾಪ್​ನಲ್ಲಿ ರಿಲೀಸ್ ಆಗುತ್ತಿದೆ. ಹೀಗಾಗಿ, ಇವರ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡಿವೆ. ಇದಕ್ಕೆ ಸ್ಪಷ್ಟನೆ ನೀಡುವ ಉದ್ದೇಶದಿಂದ ಗಣೇಶ್ ಹಾಗೂ ದುನಿಯಾ ವಿಜಯ್ ಒಂದು ಕಡೆ ಸೇರಿದ್ದಾರೆ.

ದುನಿಯಾ ವಿಜಯ್ ಹಾಗೂ ಗಣೇಶ್ ಒಂದು ಗ್ರೌಂಡ್​ನಲ್ಲಿ ಭೇಟಿ ಆಗಿದ್ದಾರೆ. ಈ ಭೇಟಿ ವೇಳೆ ಹಳೆಯ ದಿನಗಳ ಬಗ್ಗೆ ಇವರು ಮಾತನಾಡಿಕೊಂಡಿದ್ದಾರೆ. ಈ ಮೊದಲು ಪಟ್ಟ ಕಷ್ಟ, ಯಶಸ್ಸು ಸಿಕ್ಕ ಬಳಿಕ ಜೀವನ ಹೇಗೆ ಬದಲಾಯಿತು ಎಂಬುದರ ಬಗ್ಗೆ ಇವರು ಮಾತನಾಡಿಕೊಂಡಿದ್ದಾರೆ. ಇದೇ ವೇಳೆ ಇವರು ಒಟ್ಟಾಗಿ ಸಿನಿಮಾ ಮಾಡುವ ಆಸೆಯನ್ನು ಹೊರಹಾಕಿದ್ದಾರೆ.

‘ನನ್ನ ನಿರ್ದೇಶನದಲ್ಲಿ ನಾವಿಬ್ಬರೂ ನಟಿಸಬೇಕು. ಇದು ನನ್ನ ಆಸೆ. ಯಾವ ತರಹದ ಸಿನಿಮಾ ಇಷ್ಟ ಎಂಬುದನ್ನು ಹೇಳು, ಆ ತರಹ ಸ್ಕ್ರಿಪ್ಟ್ ಮಾಡುತ್ತೇನೆ’ ಎಂದರು ದುನಿಯಾ ವಿಜಯ್. ‘ನೀನು ಸ್ಕ್ರಿಪ್ಟ್ ಮಾಡು, ಯಾವಾಗ ರೆಡಿ ಹೇಳ್ತೀಯೋ ಅವತ್ತು ನಾನೂ ರೆಡಿ’ ಎಂದರು ಗಣೇಶ್.

ದುನಿಯಾ ವಿಜಯ್ ಅವರು ಗಣೇಶ್ ಸಾಮರ್ಥ್ಯವನ್ನು ಹೊಗಳಿದ್ದಾರೆ. ‘ಲೈಫ್ ಇಬ್ಬರಿಗೂ ಯಶಸ್ಸು ನೀಡಿದೆ. ನೀನು ನಿರ್ದೇಶಕ ಆಗಿದ್ದರೆ ನನಗೆ ಡೈರೆಕ್ಷನ್ ಮಾಡು ಎಂದು ನಾನು ನಿನ್ನ ಬಳಿ ಕೇಳುತ್ತಿದ್ದೆ. ನಾವಿಬ್ಬರು ಸಿನಿಮಾ ಮಾಡಿದರೆ ಭವಿಷ್ಯದಲ್ಲಿ ದಾಖಲೆ ಆಗಿ ಉಳಿಯುತ್ತದೆ. ನಿನ್ನ ಹತ್ತಿರ ಸಾಕಷ್ಟು ತಾಕತ್ತು ಇದೆ. ನೀನು ಎಷ್ಟೇ ದುಃಖ ಇದ್ದರೂ ಅವರನ್ನು ನಗಿಸುತ್ತೀಯಾ. ದೇವರು ಅದು ನಿನಗೆ ಕೊಟ್ಟಿದ್ದು. ನಿನ್ನ ಭಾವನಾತ್ಮಕ ದೃಶ್ಯವನ್ನು ಸಖತ್ ಆಗಿ ಮಾಡ್ತೀಯಾ. ಅದು ನನಗೆ ಬರೋದಿಲ್ಲ. ಒಳ್ಳೆಯ ವಿಷಯ ಇಟ್ಟುಕೊಂಡು ಮಾಡೋಣ. ಒಂದೆಳೆ ಸಿಕ್ಕರೆ ಕಥೆ ಮಾಡುತ್ತೇನೆ’ ಎಂದಿದ್ದಾರೆ ದುನಿಯಾ ವಿಜಯ್.

ಇದನ್ನೂ ಓದಿ: ಸಖತ್ ಟ್ರೆಂಡ್ ಆಯ್ತು ಗೋಲ್ಡನ್ ಸ್ಟಾರ್ ಗಣೇಶ್ ಸ್ಟೆಪ್ ಹಾಕಿದ ‘ದ್ವಾಪರ..’ ಸಾಂಗ್

ಆ ಬಳಿಕ ಇಬ್ಬರೂ ಒಬ್ಬರ ಸಿನಿಮಾಗೆ ಒಬ್ಬರು ವಿಶ್ ಮಾಡಿದ್ದಾರೆ. ‘ಭೀಮ’ ಚಿತ್ರವನ್ನು ಥಿಯೇಟರ್​ನಲ್ಲಿ ಗಣೇಶ್ ನೋಡಿ ಹಾರೈಸಲಿದ್ದಾರಂತೆ. ಅದೇ ರೀತಿ ‘ಕೃಷ್ಣ ಪ್ರಣಯ ಸಖಿ’ ಚಿತ್ರವನ್ನು ದುನಿಯಾ ವಿಜಯ್ ವೀಕ್ಷಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:48 pm, Mon, 5 August 24