ಸಖತ್ ಟ್ರೆಂಡ್ ಆಯ್ತು ಗೋಲ್ಡನ್ ಸ್ಟಾರ್ ಗಣೇಶ್ ಸ್ಟೆಪ್ ಹಾಕಿದ ‘ದ್ವಾಪರ..’ ಸಾಂಗ್

ಇನ್​ಸ್ಟಾಗ್ರಾಮ್​ ರೀಲ್ಸ್ ಸಖತ್ ಟ್ರೆಂಡ್ ಸೃಷ್ಟಿ ಮಾಡುತ್ತದೆ. ಯಾವುದೇ ಸಾಂಗ್ ಹಿಟ್ ಆದರೂ ಅದನ್ನು ಇನ್​ಸ್ಟಾಗ್ರಾಮ್ ರೀಲ್ಸ್​ನಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಈಗ ‘ದ್ವಾಪರ..’ ಹಾಡಿನಲ್ಲಿ ಬರುವ ಕೆಲವು ಸಾಲುಗಳು ರೀಲ್ಸ್​ನಲ್ಲಿ ಬಳಕೆ ಮಾಡಲಾಗಿದೆ. ಹೀಗಾಗಿ, ಈ ಹಾಡಿನಿಂದ ಸಿನಿಮಾಗೆ ಭರ್ಜರಿ ಮೈಲೇಜ್ ಸಿಕ್ಕಿದೆ.

ಸಖತ್ ಟ್ರೆಂಡ್ ಆಯ್ತು ಗೋಲ್ಡನ್ ಸ್ಟಾರ್ ಗಣೇಶ್ ಸ್ಟೆಪ್ ಹಾಕಿದ ‘ದ್ವಾಪರ..’ ಸಾಂಗ್
ಗಣೇಶ್-ಮಾಳವಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 29, 2024 | 7:49 AM

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್​ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಇದಕ್ಕೆ ಕಾರಣ ಆಗಿರೋದು ಸಿನಿಮಾದ ‘ದ್ವಾಪರ..’ ಹಾಡು. ಈ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಟ್ರೆಂಡ್ ಸೃಷ್ಟಿ ಮಾಡಿದೆ. ಅದೇ ರೀತಿ ಸಿನಿಮಾದ ಹಾಡು ಯೂಟ್ಯೂಬ್​ನಲ್ಲೂ ಲಕ್ಷ ಲಕ್ಷ ವೀವ್ಸ್ ಕಂಡಿದೆ.

ಇದು ರೀಲ್ಸ್ ಯುಗ. ಯಾವುದೇ ಸಾಂಗ್ ಹಿಟ್ ಆದರೂ ಅದನ್ನು ಇನ್​ಸ್ಟಾಗ್ರಾಮ್ ರೀಲ್ಸ್​ನಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಈಗ ‘ದ್ವಾಪರ..’ ಹಾಡಿನಲ್ಲಿ ಬರುವ ಕೆಲವು ಸಾಲುಗಳು ರೀಲ್ಸ್​ನಲ್ಲಿ ಬಳಕೆ ಮಾಡಲಾಗಿದೆ. ಹೀಗಾಗಿ, ಈ ಹಾಡಿನಿಂದ ಸಿನಿಮಾಗೆ ಭರ್ಜರಿ ಮೈಲೇಜ್ ಸಿಕ್ಕಿದೆ.

‘ಜೇನ ದನಿಯೋಳೆ.. ಮೀನ ಕಣ್ಣೋಳೆ.. ಸೊಬಗ ಮೈತುಂಬಿದೆ. ಹಂಸ ನಡೆಯೋಳೆ.. ಎದೆಗೆ ಇಳಿದೋಳೆ.. ಜೀವ ಝಲ್ ಎಂದಿದೆ. ಬೇರೆ ದಾರೀನು ಇಲ್ಲ ನನಗಿನ್ನು.. ನೀನು ಸಿಕ್ಕಾಗಿದೆ. ನಾನು ಹುಡುಕಿದ್ದ ನನ್ನ ನಿಲ್ದಾಣ ನೀನೆ ಇನ್ನೇದೆ..’ ಸಾಲುಗಳು ಸಾಕಷ್ಟು ಗಮನ ಸೆಳೆದಿವೆ.

ಇದನ್ನೂ ಓದಿ: ಚಿತ್ರೀಕರಣಕ್ಕೆ ಮುಂಚೆಯೇ ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿಗೆ ಸಿನಿಮಾ ತೋರಿಸಿದ ಅರ್ಜುನ್ ಜನ್ಯ

ಅರ್ಜುನ್ ಜನ್ಯ ಅವರು ‘ಕೃಷ್ಣಂ ಪ್ರಣಯ ಸಖ’ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಜಸ್ಕರಣ್ ಸಿಂಗ್ ಈ ಹಾಡನ್ನು ಹಾಡಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯದಲ್ಲಿ ಈ ಹಾಡು ರಚನೆ ಆಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮಾಳವಿಕಾ ನಾಯರ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಶಾಂತ್ ರುದ್ರಪ್ಪ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಸಿನಿಮಾದ ಹಾಡು ಮೂಡಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:36 am, Mon, 29 July 24