ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಕೇಸ್ಗೆ ಸಂಬಂಧಿಸಿದಂತೆ ಸದ್ಯ ಪ್ರಕರಣದ A12 ಆರೋಪಿ ವಿನಯ್ ಬಂಧನದ ಬೆನ್ನಲ್ಲೇ ಮತ್ತೊಬ್ಬ ನಟಿಗೆ ಸಂಕಷ್ಟ ಎದುರಾಗಲಿದೆ ಎಂದು ತಿಳಿದುಬಂದಿದೆ.
ಆರೋಪಿ ವಿನಯ್ ಜೊತೆ ಒಡನಾಟ ಹೊಂದಿರುವ ಈ ಸ್ಯಾಂಡಲ್‌ವುಡ್ ನಟಿಗೆ CCB ನೋಟಿಸ್ ನೀಡಲು ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ವಿನಯ್ ಜೊತೆ ನಟಿ, ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿಯಾದ ಬಗ್ಗೆ ಮಾಹಿತಿ ಸಹ ಸಿಕ್ಕಿದೆ.
ಹೀಗಾಗಿ, ವಿನಯ್ ನೀಡಿರುವ ಮಾಹಿತಿ ಆಧರಿಸಿ ನೋಟಿಸ್ ನೀಡಲು CCB ಸಿದ್ಧತೆ ನಡೆಸುತ್ತಿದೆ. ಇದಲ್ಲದೆ ನಟಿ, ಟುಮಾರೋಲ್ಯಾಂಡ್‌ಗೆ ಹೋಗಿರುವ ಅನುಮಾನ ಸಹ ವ್ಯಕ್ತವಾಗಿದೆ.
Published On - 10:53 am, Tue, 22 December 20