ಚಿರಂಜೀವಿ ಸರ್ಜಾ ಅವರು ಮೃತಪಟ್ಟು ಇಂದಿಗೆ (ಜೂನ್ 7) ಒಂದು ವರ್ಷವಾಗಿದೆ. ಈ ದಿನದಂದು ಅನೇಕರು ಚಿರಂಜೀವಿ ಸರ್ಜಾ ಅವರ ನೆನಪನ್ನು ಹಂಚಿಕೊಳ್ಳುತ್ತಿದ್ದಾರೆ. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಚಿರು ಅವರನ್ನು ನೆನಪಿಸಿಕೊಂಡಿದ್ದಾರೆ.
2020 ಇಡೀ ಜಗತ್ತಿನ ಪಾಲಿಗೆ ಕೆಟ್ಟ ವರ್ಷ ಎಂದು ಪರಿಗಣಿಸಲ್ಪಟ್ಟಿದೆ. 2020ರ ಆರಂಭದಲ್ಲಿ ಕೊರೊನಾ ವೈರಸ್ ವಿಶ್ವಾದ್ಯಂತ ಹರಡಿತ್ತು. ಅಲ್ಲದೆ, ಸಾಕಷ್ಟು ಸೆಲೆಬ್ರಿಟಿಗಳು ಕೂಡ ಮೃತಪಟ್ಟಿದ್ದು ಸಿನಿಪ್ರಿಯರಿಗೆ ತೀವ್ರ ನೋವಾಗಿತ್ತು. ಅದೆ ರೀತಿ ಜೂನ್ 7ರಂದು ಚಿರು ಹೃದಯಾಘಾತದಿಂದ ಮೃತಪಟ್ಟರು. ಇದನ್ನು ಅರಗಿಸಿಕೊಳ್ಳೋಕೆ ಅವರ ಪತ್ನಿ ಮೇಘನಾ ರಾಜ್ ತುಂಬಾನೇ ಕಷ್ಟಪಟ್ಟಿದ್ದಾರೆ.
ಕೊರೊನಾ ವೈರಸ್ ಎರಡನೇ ಅಲೆ ನಿಯಂತ್ರಿಸಲು ಎಲ್ಲಾ ಕಡೆಗಳಲ್ಲಿ ಲಾಕ್ಡೌನ್ ಜಾರಿಯಲ್ಲಿ ಇರುವುದರಿಂದ ಚಿರು ಮೊದಲ ವರ್ಷದ ಪುಣ್ಯತಿಥಿಯನ್ನು ಸರಳವಾಗಿ ಆಚರಣೆ ಮಾಡಲಾಗಿದೆ. ಕೇವಲ ಕುಟುಂಬದ ಸದಸ್ಯರು ಮಾತ್ರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಕನಕಪುರ ರಸ್ತೆಯ ನೆಲಗುಳಿ ಬಳಿ ಇರುವ ಬೃಂದಾವನ ಫಾರ್ಮ್ಹೌಸ್ನಲ್ಲಿ ಚಿರು ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಅದೇ ಸ್ಥಳಕ್ಕೆ ತೆರಳಿ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ.
You will always be remembered Chiru, my friend @chirusarja @meghanasraj pic.twitter.com/XGIju3I7rC
— Darshan Thoogudeepa (@dasadarshan) June 7, 2021
ಇನ್ನು, ಸಾಕಷ್ಟು ಜನರು ಚಿರು ಜತೆಗಿನ ನೆನಪನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ದರ್ಶನ್, ನೀನು ಯಾವಾಗಲೂ ನೆನಪಿನಲ್ಲಿರುತ್ತೀಯಾ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಚಿರು ಜತೆಗಿನ ಫೋಟೋ ಕೂಡ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Chiranjeevi Sarja: ಮೇಘನಾ ರಾಜ್ ಜೊತೆ ಚಿರಂಜೀವಿ ಸರ್ಜಾ ಸಮಾಧಿಗೆ ಪೂಜೆ ಸಲ್ಲಿಸಿದ ಜ್ಯೂ. ಚಿರು