ರೆಡ್‌ ಅಂಡ್ ರೆಡ್ ಡ್ರೆಸ್​ನಲ್ಲಿ ಶೋಕಿಲಾಲ-ಗೊಂಬೆ ಅದ್ಧೂರಿ ರಿಸೆಪ್ಶನ್

ರೆಡ್‌ ಅಂಡ್ ರೆಡ್ ಡ್ರೆಸ್​ನಲ್ಲಿ ಶೋಕಿಲಾಲ-ಗೊಂಬೆ ಅದ್ಧೂರಿ ರಿಸೆಪ್ಶನ್

ಮೈಸೂರು: ಅಬ್ಬಾ.. ಮೂರೇ ಮುರು ಪೆಗ್ ಹಾಕ್ಕೊಂಡು ಜಗಮಗಿಸೋ ಲೈಟಿಂಗ್ಸ್ ನೋಡಿದ್ರೆ ತಲೆ ಗಿರಗಿರ ತಿರುಗುತ್ತೆ. ಅದ್ಧೂರಿ ಡೆಕೋರೆಷನ್ ಸಖತ್ ಕಿಕ್ ನೀಡುತ್ತೆ. ಅದರಲ್ಲೂ ಬಿಳಿ ಕುದುರೆಗಳ ಗಾಡಿ ಮೇಲೆ ಮಿರ ಮಿರ ಮಿಂಚುವ ರೆಡ್‌ ಆಂಡ್ ರೆಡ್ ಡ್ರೆಸ್​ನಲ್ಲಿ ಬಿಗ್ ಜೋಡಿ ಬರ್ತಿದ್ರೆ, ಕುದುರೆಗಾಡಿಯಿಂದ ಇಳಿಯುತ್ತಿದ್ದಂತೆ ಮುದ್ದು ಜೋಡಿಯನ್ನ ವೆಲ್‌ಕಂ ಮಾಡುವ ಪುಟಾಣಿಗಳನ್ನ ನೋಡೋದೆ ಚೆಂದ. ಇನ್ನು ಈ ಜೋಡಿಗಾಗಿ ಕಲರ್‌ಫುಲ್ ವೇದಿಕೆ ರೆಡಿಯಾದ್ರೆ, ಶುಭಹಾರೈಸಲು ಕಲಾವಿದರ ದಂಡೇ ಬಂದಿದೆ. ಇದು ಬಿಗ್‌ಬಾಸ್‌ ಖ್ಯಾತಿಯ ಚಂದನ್ […]

sadhu srinath

|

Feb 26, 2020 | 1:37 PM

ಮೈಸೂರು: ಅಬ್ಬಾ.. ಮೂರೇ ಮುರು ಪೆಗ್ ಹಾಕ್ಕೊಂಡು ಜಗಮಗಿಸೋ ಲೈಟಿಂಗ್ಸ್ ನೋಡಿದ್ರೆ ತಲೆ ಗಿರಗಿರ ತಿರುಗುತ್ತೆ. ಅದ್ಧೂರಿ ಡೆಕೋರೆಷನ್ ಸಖತ್ ಕಿಕ್ ನೀಡುತ್ತೆ. ಅದರಲ್ಲೂ ಬಿಳಿ ಕುದುರೆಗಳ ಗಾಡಿ ಮೇಲೆ ಮಿರ ಮಿರ ಮಿಂಚುವ ರೆಡ್‌ ಆಂಡ್ ರೆಡ್ ಡ್ರೆಸ್​ನಲ್ಲಿ ಬಿಗ್ ಜೋಡಿ ಬರ್ತಿದ್ರೆ, ಕುದುರೆಗಾಡಿಯಿಂದ ಇಳಿಯುತ್ತಿದ್ದಂತೆ ಮುದ್ದು ಜೋಡಿಯನ್ನ ವೆಲ್‌ಕಂ ಮಾಡುವ ಪುಟಾಣಿಗಳನ್ನ ನೋಡೋದೆ ಚೆಂದ.

ಇನ್ನು ಈ ಜೋಡಿಗಾಗಿ ಕಲರ್‌ಫುಲ್ ವೇದಿಕೆ ರೆಡಿಯಾದ್ರೆ, ಶುಭಹಾರೈಸಲು ಕಲಾವಿದರ ದಂಡೇ ಬಂದಿದೆ. ಇದು ಬಿಗ್‌ಬಾಸ್‌ ಖ್ಯಾತಿಯ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡರ ರಿಸೆಪ್ಶನ್‌ನ ಝಲಕ್.

ಯೆಸ್‌, ಮೂರೇ ಮೂರು ಪೆಗ್ ಹಾಕ್ಕೊಂಡು ಬಿಗ್ ಬಾಸ್ ಮನೆಯೊಳಗೆ ಎಂಟ್ರಿಕೊಟ್ಟ ಚಂದನ್ ಶೆಟ್ಟಿ ಸಖತ್ ಕಮಾಲ್ ಮಾಡಿದ್ರು. ಅಷ್ಟೇ ಅಲ್ಲ ಬಾಸ್ ಮನೆಯಲ್ಲೇ ಇದ್ದ ಮುದ್ದು ಗೊಂಬೆ ನಿವೇದಿತಾ ಗೌಡ ಮತ್ತು ರ್ಯಾಪರ್ ಚಂದನ್‌ ಶೆಟ್ಟಿ ಸ್ನೇಹದ ಬಗ್ಗೆ ಇಡೀ ಕರ್ನಾಟಕದ ಜನತೆ ಮೆಚ್ಚುಗೆ ವ್ಯಕ್ತಪಡಿಸಿತ್ತು.

ಮನೆಯಿಂದ ಹೊರಬಂದ ಮೇಲೆ ಆ ಸ್ನೇಹ ಪ್ರೀತಿಗೆ ತಿರುಗಿತ್ತು. ಇವರಿಬ್ಬರು ಪ್ರೀತಿ ಬಗ್ಗೆ ಆಗಾಗ ಮಾತು ಕೇಳಿ ಬಂದಿತ್ತು. ನಂತ್ರ ಯುವದಸರಾ ಕಾರ್ಯಕ್ರಮದಲ್ಲಿ ಇವರಿಬ್ಬರ ಪ್ರೀತಿ ಕರುನಾಡ ಜನತೆಗೆ ಗೊತ್ತಾಗಿತ್ತು. ಈಗ ಇವರಿಬ್ಬರ ಪ್ರೀತಿ ಮದುವೆ ಹಂತಕ್ಕೆ ಬಂದು ನಿಂತಿದ್ದು, ಮದುವೆ ಸಂಭ್ರಮದ ಅಲೆಯಲ್ಲಿ ಈ ಬಿಗ್ ಜೋಡಿ ತೇಲುತ್ತಿದೆ.

ಅಂದಹಾಗೇ ಇಂದು ಬೆಳಿಗ್ಗೆ 8.15 ರಿಂದ‌ 9 ಗಂಟೆಗೆ ಧಾರಾಮುಹೂರ್ತ ನಡೆದಿದ್ದು, ಮೀನ ಲಗ್ನದಲ್ಲಿ ಚಂದನ್‌ಶೆಟ್ಟಿ ನಿವೇದಿತಾಳನ್ನು ವರಿಸಿದ್ದಾರೆ. ನಿನ್ನೆ ರಾತ್ರಿ ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಶನ್ ಹಾಲ್‌ನಲ್ಲಿ ರಿಸೆಪ್ಶನ್ ಅದ್ಧೂರಿಯಾಗಿ ನಡೆದಿದೆ. ಅದ್ರಲ್ಲೂ, ಇವರಿಬ್ಬರು ಕುದುರೆಗಾಡಿ ಮೇಲೆ ರೆಡ್‌ ಅಂಡ್ ರೆಡ್ ಡ್ರೆಸ್‌ನಲ್ಲಿ ಮದುವೆ ಹಾಲ್​ಗೆ ಬಂದಿದ್ದು, ಎಲ್ಲರ ಕಣ್ಣು ಕುಕ್ಕುವಂತೆ ಮಾಡ್ತು. ನಂತ್ರ ಪುಟ್ಟ ಮಕ್ಕಳು ಇವರಿಬ್ಬರನ್ನ ವೆಲ್‌ಕಂ ಮಾಡಿ ಅಲಂಕಾರಗೊಂಡ ಹಾಲ್‌ನೊಳಗೆ ಕರೆದುಕೊಂಡು ಹೋದ್ರು.

ಇನ್ನು ಬಿಗ್ ಬಾಸ್‌ನ ಮಸ್ತ್ ಜೋಡಿಯ ಮದುವೆ ಬರುವ ಅಥಿತಿಗಳನ್ನ ರೆಡ್ ಕಾರ್ಪೆಟ್ ಹಾಕಿ ವೆಲ್ಕಂ ಮಾಡಲಾಯ್ತು. ಅಷ್ಟೇ ಅಲ್ಲದೇ ಸ್ಯಾಂಡಲ್ ವುಡ್‌ನ‌ ಗಣ್ಯರು ಸಂಗೀತ ಲೋಕದ ದಿಗ್ಗಜರು ಹಾಗು ಕಿರುತೆರೆಯ ಕಲಾವಿದರು ಕೂಡ ಚಂದನ್-ನಿವೇದಿತಾ ಆರತಕ್ಷತೆಗೆ ಸಾಕ್ಷಿಯಾದ್ರು. ಅದ್ರಲ್ಲೂ, ಜಗಮಗಿಸೋ ವೇದಿಕೆ ಎಲ್ಲರ ಗಮನ ಸೆಳೀತು.

Follow us on

Related Stories

Most Read Stories

Click on your DTH Provider to Add TV9 Kannada