
ಬಿಗ್ ಬಾಸ್ (Bigg Boss) ಖ್ಯಾತಿಯ ನಿವೇದಿತಾ ಗೌಡ (Niveditha Gowda) ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ‘ಬಿಗ್ ಬಾಸ್’ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಇಬ್ಬರಿಗೂ ಪ್ರೀತಿ ಹುಟ್ಟೋಕೆ ಬಿಗ್ ಬಾಸ್ ವೇದಿಕೆ ಆಯಿತು. ‘ನಿವೇದಿತಾ ಚಿಕ್ಕ ಮಕ್ಕಳಂತೆ ಆಡುತ್ತಾರೆ’ ಎಂಬುದು ಕೆಲವರ ಅಭಿಪ್ರಾಯ. ಚಂದನ್ ಶೆಟ್ಟಿ ಅವರ ಮನಸ್ಥಿತಿ ಬೇರೆ ತರಹದ್ದು. ‘ಇಬ್ಬರೂ ಮದುವೆ ಆದರೆ ಸುಖವಾಗಿ ಇರುವುದಿಲ್ಲ’ ಎಂದು ಅನೇಕರು ಭವಿಷ್ಯ ನುಡಿದಿದ್ದೂ ಇದೆ. ಆದರೆ, ಈ ಜೋಡಿ ಅದನ್ನು ಸುಳ್ಳು ಮಾಡಿದೆ. ಮದುವೆ ಆಗಿ ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈಗ ನಿವೇದಿತಾ ಹಂಚಿಕೊಂಡಿರುವ ಹೊಸ ವಿಡಿಯೋ ಸಖತ್ ವೈರಲ್ ಆಗಿದೆ.
ನಿವೇದಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಮಯ ಸಿಕ್ಕಾಗೆಲ್ಲ ಅವರು ರೀಲ್ಸ್ ಮಾಡುತ್ತಾರೆ. ಅವರು ಹಂಚಿಕೊಳ್ಳುವ ಫೋಟೋ ಹಾಗೂ ವಿಡಿಯೋಗಳನ್ನು ನೋಡೋಕೆ ಫ್ಯಾನ್ಸ್ಗೂ ಸಾಕಷ್ಟು ಇಷ್ಟ. ಆದರೆ, ಒಂದು ವರ್ಗದ ಜನರು ಈ ಬಗ್ಗೆ ಟೀಕೆ ಮಾಡುತ್ತಾರೆ. ಈಗ ನಿವೇದಿತಾ ಹೊಸ ರೀಲ್ಸ್ ಹಂಚಿಕೊಂಡಿದ್ದಾರೆ. ಇದರಲ್ಲಿ ಚಂದನ್ ಅವರು ನಿವೇದಿತಾ ತುಟಿಗೆ ಮುತ್ತಿಟ್ಟಿದ್ದಾರೆ.
ನಿವೇದಿತಾ ಹಾಗೂ ಚಂದನ್ ಡ್ಯಾನ್ಸ್ ಮಾಡಿದ್ದಾರೆ. ಡ್ಯಾನ್ಸ್ ಮಾಡುತ್ತಾ ಚಂದನ್ ಅವರು ನಿವೇದಿತಾ ತುಟಿಗೆ ಕಿಸ್ ಮಾಡುತ್ತಾರೆ. ಆ ರೀತಿಯಲ್ಲಿ ರೀಲ್ಸ್ ಇದೆ. ಕೆಲವರು ನಿವೇದಿತಾ ಹಾಗೂ ಚಂದನ್ ಅವರ ಡ್ಯಾನ್ಸ್ ಅನ್ನು ಹೊಗಳಿದ್ದಾರೆ. ಇನ್ನೂ ಕೆಲವರು ತೆಗಳಿದ್ದಾರೆ. ‘ಈ ರೀತಿಯ ವಿಡಿಯೋಗಳನ್ನು ಆನ್ಲೈನ್ಲ್ಲಿ ಪೋಸ್ಟ್ ಮಾಡುವ ಅವಶ್ಯಕತೆ ಏನಿದೆ’ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ‘ನಿವೇದಿತಾನ ಮೀಟ್ ಮಾಡೋಕೆ ಆಗುತ್ತಿಲ್ಲ’ ಎಂದ ಚಂದನ್ ಶೆಟ್ಟಿ
ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ತಮ್ಮದೇ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ನಿವೇದಿತಾ ಕೂಡ ಇದೇ ಟ್ರೆಂಡ್ ಫಾಲೋ ಮಾಡಿದ್ದಾರೆ. ನಿವೇದಿತಾ ಅವರು ತಮ್ಮದೇ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಅಲ್ಲಿ ತಮ್ಮ ದಿಚರಿಯ ಬಗ್ಗೆ ಅಪ್ಡೇಟ್ ನೀಡುತ್ತಾರೆ. ವಿಶೇಷ ಅಡುಗೆಗಳನ್ನು ಮಾಡುವ ನಿವೇದಿತಾ ಅದರ ವಿಡಿಯೋಗಳನ್ನು ಯೂಟ್ಯೂಬ್ ಮೂಲಕ ಹಂಚಿಕೊಳ್ಳುತ್ತಾರೆ. ಅವರಿಗೆ ಸಿಗುವ ವೀವ್ಸ್ನಿಂದ ಹಣ ಸಿಗುತ್ತಿದೆ.